Home
ಸುದ್ದಿಜಾಲ

ಮಾನವೀಯತೆ ಮೆರೆದ ಏರ್‌ಟೆಲ್: ಪ್ರವಾಹ ಸಂತ್ರಸ್ತರಿಗೆ ಉಚಿತ ಡೇಟಾ-ಕರೆ ಸೌಲಭ್ಯ..!

By Srinidhi

ನೆರೆಯ ರಾಜ್ಯ ಕೇರಳದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಿದ್ದು, ಅನೇಕ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಹಲವು ಮಂದಿ ಪ್ರವಾಹದಲ್ಲಿ ಸಿಲುಕಿ ಮನೆ-ಮಠ ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚಿರುವ ಟೆಲಿಕಾಂ ಕಂಪನಿ ಏರ್‌ಟೆಲ್, ತನ್ನ ಬಳಕೆದಾರರಿಗೆ ಉಚಿತ ಡೇಟಾ-ಕರೆ ಸೌಲಭ್ಯವನ್ನು ನೀಡಿದೆ. ಈ ಮೂಲಕ ಸಹಾಯಕ್ಕಾಗಿ ಇತರರ ಸಂಪರ್ಕವನ್ನು ಪಡೆಯಲಿ ಎನ್ನುವ ಕಾರಣಕ್ಕಾಗಿದೆ.

ಮಾನವೀಯತೆ ಮೆರೆದ ಏರ್‌ಟೆಲ್: ಪ್ರವಾಹ ಸಂತ್ರಸ್ತರಿಗೆ ಉಚಿತ ಡೇಟಾ-ಕರೆ ಸೌಲಭ್ಯ..!

ಪ್ರೀಪೇಯ್ಡ್ ಬಳಕೆದಾರರಿಗೆ ರೂ.30 ಟಾಕ್ ಟೈಮ್ ನೀಡಿದರೆ, ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಇಷ್ಟೆ ಮೊತ್ತದ ಹಣವನ್ನು ಬಿಲ್ ಸೈಕಲ್‌ನಲ್ಲಿ ಕಡಿತವನ್ನು ಮಾಡಲಿದೆ. ಇದಲ್ಲದೇ ಉಚಿತ Wi-Fi ಸೇವೆಯನ್ನು ನೀಡುತ್ತಿದೆ. ಇದರಿಂದಾಗಿ ಸಾವಿರಾರು ಜನರಿಗೆ ಸಹಾಯವಾಗಲಿದೆ.

ಇದರೊಂದಿಗೆ ಏರ್‌ಟೆಲ್ ಆಗಸ್ಟ್ 17 ರಿಂದ 19ರ ವರೆಗೆ ಎಲ್ಲಾ ಕರೆಗಳನ್ನು ಉಚಿತವಾಗಿ ನೀಡುತ್ತಿದೆ. ಇದಲ್ಲದೇ ಪ್ರವಾಹದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ತಮ್ಮ ಫೋನ್‌ಗಳನ್ನು ಚಾರ್ಜ್ ಮಾಡಿಕೊಳ್ಳಲು ಏರ್‌ಟೆಲ್‌ ಔಟ್ ಲೈಟ್‌ಗಳಲ್ಲಿ ಅವಕಾಶವನ್ನು ಮಾಡಿಕೊಡುತ್ತಿದೆ ಎನ್ನಲಾಗಿದೆ.

ಇದಲ್ಲದೇ ಎಲ್ಲಾ ಏರ್‌ಟೆಲ್ ಸ್ಟೋರ್‌ಗಳಲ್ಲಿ ಉಚಿತ ಕರೆ ಮಾಡುವ ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಮಳೆಯಿಂದ ತೊಂದರೆ ಸಿಲುಕಿರುವವರು ಯಾರು ಬೇಕಾದರು ಏರ್‌ಟೆಲ್ ಸ್ಟೋರ್‌ಗಳೀಗೆ ಹೋಗಿ ತಮ್ಮ ಯಾರಿಗೆ ಬೇಕಾದರು ಉಚಿತವಾಗಿ ಕರೆಗಳನ್ನು ಮಾಡುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.

ಈವರೆಗೂ ಕೇರಳ ಒಂದರಲ್ಲಿಯೇ ಮಳೆಯಿಂದಾಗಿ 67 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಲ್ಲದೇ ಎಲ್ಲಾ ಪ್ರಮುಖ ಸ್ಥಳಗಳು ಜಲಾವೃತವಾಗಿದೆ. ಜನರು ಸಂಪರ್ಕ ಸಾಧನದ ಕೊರತೆಯಿಂದಾಗಿ ತೊಂದರೆಗೆ ಸಿಲುಕಿದ್ದಾರೆ. ಯೋಧರು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

Best Mobiles in India

English summary
Kerala Floods: Airtel Giving Free Data, Rs. 30 Talk Time Credit to Prepaid Users. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+