Home
ಸುದ್ದಿಜಾಲ

ಕೇರಳ ಸಂತ್ರಸ್ತರಿಗೆ ನೆರವಾದ ಫೇಸ್‌ಬುಕ್..! ರೂ. 1.75 ಕೋಟಿ ನೆರವು

By Gizbot Bureau

ಕೇರಳ ಮತ್ತು ಕೊಡಗಿನಲ್ಲಿ ಮಹಾಮಳೆಯಿಂದಾಗಿ ಅನೇಕ ಮಂದಿ ತತ್ತರಿಸಿಹೋಗುತ್ತಿದ್ದಾರೆ. ಈಗಾಗಲೇ ಕೇಂದ್ರ ಸಂರ್ಕಾರದ ವರದಿಯ ಅನುಸಾರವೇ ಹೇಳುವುದಾದರೆ ಸುಮಾರು 370 ಮಂದಿ ಮೃತಪಟ್ಟಿದ್ದು, 800000 ಮಂದಿ ಕಾಣೆಯಾಗಿದ್ದಾರೆ. ಸುಮಾರು 8000 ಮನೆಗಳು ಜಲಾವೃತವಾಗಿದೆ ಎಂದು ಹೇಳಲಾಗುತ್ತಿದೆ. ಇವರ ನೆರವಿಗೆ ಅನೇಕರು ಧಾವಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆಯೂ ಅಪಾರವಾದುದ್ದೇ ಆಗಿದೆ. ಇದೀಗ ನಿರಾಶ್ರಿತರ ನೆರವಿಗೆ ಧಾವಿಸಿರುವ ಪೇಸ್ ಬುಕ್ ಸುಮಾರು $250,000 ಹಣದ ನೆರವು ನೀಡಿದೆ. ಅಂದರೆ ಸರಿಸುಮಾರು 1.75 ಕೋಟಿ ರುಪಾಯಿಯ ನೆರವನ್ನು ನೀಡಲು ಫೇಸ್ ಬುಕ್ ಮುಂದಾಗಿದೆ.

ಕೇರಳ ಸಂತ್ರಸ್ತರಿಗೆ ನೆರವಾದ ಫೇಸ್‌ಬುಕ್..! ರೂ. 1.75 ಕೋಟಿ ನೆರವು

ಕಳೆದ ಕೆಲವು ದಿನಗಳಿಂದ ಫೇಸ್ ಬುಕ್ ಲೈವ್, ಕ್ರಿಯೇಟಿಂಗ್ ಪೇಜ್, ಕಮ್ಯುನಿಟಿಯನ್ನು ಜಾಯಿನ್ ಮಾಡುವುದು, ಫಂಡ್ ಕಲೆಕ್ಟ್ ಮಾಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದ ಫೇಸ್ ಬುಕ್ ಈಗ $250,000 ಹಣವನ್ನು ನೀಡುತ್ತಿದೆ ಎಂಬುದನ್ನು ಐಎಎನ್ಎಸ್ ನ ವಕ್ತಾರರು ತಿಳಿಸಿದ್ದಾರೆ.

ದೆಹಲಿ ಮೂಲದ ಲಾಭವನ್ನು ನಿರೀಕ್ಷೆ ಮಾಡದ ಸಮಾಜ ಸೇವಾ ಸಂಸ್ಥೆಯಾಗಿರುವ ಗುಯೊಂಜ್ಗೆ ಸಮುದಾಯ ರಿಲೀಲಿಯನ್ಸ್ ಫಂಡ್ ಮೂಲಕ ಪರಿಹಾರ ಹಣವನ್ನು ಫೇಸ್ಬುಕ್ ನೀಡುತ್ತಿದೆ. ಗುಯೋಂಜ್ಗೆ ಒಂದು ಎನ್ ಜಿಓ ಆಗಿದ್ದು ಇದು ಈ ರೀತಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೆರವು ನೀಡುವ ಪ್ರಮುಖ ಸಂಸ್ಥೆಗಳಲ್ಲಿ ಒಂದೆನಿಸಿದೆ.

ಕೇರಳದ ಮಹಾಮಳೆಯಲ್ಲಿ ನೊಂದು ಬೇಯುತ್ತಿರುವ ಜನರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಫೇಸ್ ಬುಕ್ ನ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಹಾಮಳೆಯಲ್ಲಿ ತತ್ತರಿಸುತ್ತಿರುವ ಜನರಿಗೆ ಹಲವು ಗ್ರೂಪ್ ಗಳನ್ನು ನಿರ್ಮಿಸಿ, ಲೈವ್ ವೀಡಿಯೋಗಳನ್ನು ನಿರ್ಮಿಸಿ, ಪೇಜ್ ಗಳನ್ನು ತಯಾರಿಸಿ, ಅವರಿಗಾಗಿ ಫಂಡ್ ಕಲೆಕ್ಟ್ ಕೂಡ ಫೇಸ್ ಬುಕ್ ಮಾಡಿದೆ.

ಅದೆಷ್ಟೋ ಸಾಮಾಜಿಕ ಜಾಲತಾಣದ ನೆರವಿನಿಂದಾಗಿ ಬಚಾವಾಗಿ ಬಂದಿದ್ದಾರೆ. ಈ ರೀತಿ ಗ್ರೂಪ್ ತಯಾರಿಸಿರುವ ಪರಿಣಾಮದಿಂದಾಗಿ ಅದೆಷ್ಟೋ ಜನರಿಗೆ ಮೆಡಿಕಲ್ ಸಪೋರ್ಟ್ ಮತ್ತು ಸಾರಿಗೆ ವ್ಯವಸ್ಥೆ ಅಥವಾ ತಾವಿರುವ ಜಾಗದಿಂದ ಇನ್ನೊಂದು ಸ್ಥಳಕ್ಕೆ ಯಾವುದೇ ತೊಂದರೆ ಇಲ್ಲದೆ ತಲುಪುವಂತ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಹಾಯ ಮಾಡಿದೆ.

ಯಾರು ಡೇಂಜರ್ ಪರಿಸ್ಥಿತಿಯಲ್ಲಿ ಇದ್ದಾರೆ ಅವರನ್ನು ರಕ್ಷಿಸಲು ಹೇಗೆ ತೆರಳಬೇಕು ಎಂಬುದನ್ನು ಐಟಿ ಪ್ರೊಫೆಷನಲ್ ಗಳ ಮೂಲಕ ಮಾಹಿತಿ ಕಲೆಹಾಕಿ ತುರ್ತು ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ರಕ್ಷಿಸುವ ಕೆಲಸಕ್ಕೆ ಫೇಸ್ ಬುಕ್ ಮಾಹಿತಿ ನೀಡಿದೆ. ಕೇವರ ತುರ್ತು ಅಧಿಕಾರಿಗಳಿಗೆ ಮಾತ್ರವೇ ಅಲ್ಲದೇ ವೈದ್ಯರಿಗೂ ಕೂಡ ಮಾಹಿತಿ ನೀಡಿ ಅದೆಷ್ಟೋ ಜನರ ಪ್ರಾಣ ರಕ್ಷಣೆ ಮಾಡಲು ಫೇಸ್ ಬುಕ್ ಸಹಾಯ ಮಾಡಿದೆ. ಯಾರು ಪ್ರಳಯದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೋ ಅವರಿಗೆ ಸಾಕಷ್ಟು ರೀತಿಯ ಮಾಹಿತಿ ನೀಡುವ ಕೆಲಸವನ್ನೂ ಕೂಡ ಫೇಸ್ ಬುಕ್ ಮಾಡುತ್ತಿದೆ.

ಕೇರಳ ಸಂತ್ರಸ್ತರಿಗೆ ನೆರವಾದ ಫೇಸ್‌ಬುಕ್..! ರೂ. 1.75 ಕೋಟಿ ನೆರವು

ಅಷ್ಟೇ ಅಲ್ಲದೇ ಫೇಸ್ ಬುಕ್ ನ ಮತ್ತೊಂದು ಶ್ಲಾಘನೀಯ ಕೆಲಸವೇನೆಂದರೆ ಅಗಸ್ಟ್ 9 ರಂದು ಫೇಸ್ ಬುಕ್ ಸೇಫ್ಟಿ ಚೆಕ್ ಅನ್ನೋ ಟೂಲ್ ಒಂದನ್ನು ರೂಪಿಸಿದ್ದು, ಆ ಮೂಲಕ ಜನರು ತಮ್ಮವರು ಅಲ್ಲಿ ಸೇಫ್ ಆಗಿ ಇದ್ದಾರಾ ಅಥವಾ ತೊಂದರೆಯಲ್ಲಿ ಇದ್ದಾರಾ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಿದೆ.

ಸೇಫ್ಟಿ ಚೆಕ್ ಟೂಲ್ ಮೂಲಕ ಜನರು ಕಮ್ಯುನಿಟಿ ಹೆಲ್ಪ್, ಡೋನೇಟ್ ಬಟನ್ ಗಳನ್ನು ಸೇರಿಸಲು ಸಾಧ್ಯವಿದೆ. ಕೇರಳದಲ್ಲಿ ಸುಮಾರು 1,300 ಪೋಸ್ಟ್ ಗಳನ್ನು ಈ ಟೂಲ್ ಗಳು ಸ್ವೀಕರಿಸಿದೆ ಎಂದು ಈಗಾಗಲೇ ಫೇಸ್ ಬುಕ್ ತಿಳಿಸಿದೆ. ಆಹಾರ, ನೀರು, ಸಾರಿಗೆ, ವಸತಿ ಸೌಲಭ್ಯಕ್ಕಾಗಿ ಆ ಮೂಲಕ ಫೇಸ್ ಬುಕ್ ಕೊಡುಗೆ ನೀಡುತ್ತಿದೆ. ಈಗಾಗಲೇ ಸುಮಾರು 500 ಮಂದಿ ಇದರಲ್ಲಿ ಡೊನೇಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೊಂದೇ ಅಲ್ಲ, ಫೇಸ್ ಬುಕ್ ಲೈವ್ ಮೂಲಕ ಅನೇಕರು ಸಹಾಯಕ್ಕಾಗಿ ಮೊರೆ ಹೋಗಿದ್ದಾರೆ.

ಒಟ್ಟಿನಲ್ಲಿ ಫೇಸ್ ಬುಕ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿ ಅವರ ಕಣ್ಣೀರೊರೆಸುವ ಕೆಲಸಕ್ಕೆ ದೊಡ್ಡ ಮೊತ್ತವನ್ನೇ ನೀಡಿದ್ದು, ನಿಜಕ್ಕೂ ಫೇಸ್ ಬುಕ್ ನ್ನು ಮತ್ತಷ್ಟು ಗೌರವಿಸುವಂತೆ ಮಾಡಿರುವುದಂತೂ ಸುಳ್ಳಲ್ಲ.

Best Mobiles in India

English summary
Kerala floods: Facebook donates Rs 1.75 crore, will give money to NGO Goonj. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+