ಕೇರಳದಲ್ಲಿ ಶಾಲೆಗೆ ಎಂಟ್ರಿ ಕೊಟ್ಟ AI ಟೀಚರ್: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿ ಎಲ್ಲರ ಗಮನಸೆಳೆದಿದೆ. ಇದೀಗ ಶೀಕ್ಷಣ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕೇರಳದ ಶಾಲೆಯೊಂದರಲ್ಲಿ AI ಟೀಚರ್ ಅನ್ನು ಪರಿಚಯಿಸಲಾಗಿದೆ.
ಹೌದು, ಕೇರಳದ ಶಾಲೆಯೊಂದರಲ್ಲಿ ಮೊದಲ ಎಐ ಸಕ್ರಿಯಗೊಳಿಸಿದ ಹುಮನಾಯ್ಡ್ ರೋಬೋಟ್ ಟೀಚರ್ ಅನ್ನು ಪರಿಚಯಿಸಲಾಗಿದೆ. ಈ ಮೂಲಕ ದೇಶದಲ್ಲಿ ಮೊದಲ ಎಐ ಟೀಚರ್ ಪರಿಚಯಿಸಿದ ಕೀರ್ತಿಯನ್ನು ತಿರುವನಂತಪುರಂನಲ್ಲಿರುವ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆ ಪಡೆದುಕೊಂಡಿದೆ. ಹಾಗಾದ್ರೆ ಎಐ ಟೀಚರ್ ಹೇಗೆ ಕಾರ್ಯನಿರ್ವಹಿಸುತ್ತಿದೆ, ವಿದ್ಯಾರ್ಥಿಗಳ ಜೊತೆಗೆ ಹೇಗೆ ಸಂವಾದ ನಡೆಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಕೆಲ ದಿನಗಳ ಹಿಂದೆ ಭಾರತದ ಸುದ್ದಿವಾಹಿನಿಗಳಲ್ಲಿ ಎಐ ಆಂಕರ್‌ಗಳು ಕಾಣಿಸಿಕೊಂಡಿದ್ದು, ಭಾರಿ ಸುದ್ದಿಯಾಗಿತ್ತು. ಇದೀಗ ಕೇರಳದಲ್ಲಿ ಎಐ ಟೀಚರ್ ಎಂಟ್ರಿ ನೀಡಿದ್ದಾರೆ. ಸೀರೆಯುಟ್ಟು ಎಂಟ್ರಿ ನೀಡಿರುವ AI-ಸಕ್ರಿಯಗೊಳಿಸಿದ ಹುಮನಾಯ್ಡ್ ರೋಬೋಟ್ ಎಲ್ಲರ ಗಮನಸೆಳೆದಿದೆ. ಇದಕ್ಕೆ ಐರಿಸ್ ಎಂದು ಹೆಸರಿಸಲಾಗಿದ್ದು, ಕೇರಳದ ಮೊದಲ ಜನರೇಟಿವ್ ಎಐ ಶಾಲಾ ಶಿಕ್ಷಕಿಯಾಗಿ ಗುರುತಿಸಿಕೊಂಡಿದೆ. ಇದನ್ನು ಕಳೆದ ತಿಂಗಳು ಅನಾವರಣಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಜೊತೆಗೆ ಅತಿವೇಗವಾಗಿ ಹೊಂದಿಕೊಂಡಿದೆ ಎನ್ನಲಾಗಿದೆ.
ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆ ಪಠ್ಯೇತರ ಚಟುವಟಿಕೆಗಳಿಂದಲೇ ಪ್ರಖ್ಯಾತಿ ಪಡೆದುಕೊಂಡಿದೆ. ಇದೇ ಶಾಲೆಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ AI ಟೀಚರ್ ಅನ್ನು ಅನಾವರಣಗೊಳಿಸಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಹೈಪ್ ಕ್ರಿಯೆಟ್ ಮಾಡಿದೆ. ಇದರ ಬಗ್ಗೆ ಮೇಕರ್ ಲ್ಯಾಬ್ಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಶೇರ್ ಮಾಡಿದೆ. ಇನ್ನು ಈ AI ಟೀಚರ್ ಹಲವು ಭಾಷೆಗಳಲ್ಲಿ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದೆ. ವಿದ್ಯಾರ್ಥಿಗಳು ಕೇಳುವ ತುಂಬಾ ಸಂಕೀರ್ಣವಾದ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಪಡೆದಿದೆ.
AI ಟೀಚರ್ ಹೇಗೆ ಕಾರ್ಯನಿರ್ವಹಿಸಲಿದೆ?
ಐರಿಸ್ ಮೂರು ಭಾಷೆಗಳನ್ನು ಮಾತನಾಡಲಿದ್ದು, ವಿದ್ಯಾರ್ಥಿಗಳ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸಲಿದೆ. ಇದರ ಜ್ಞಾನದ ಮೂಲವು ಇತರ ಸ್ವಯಂಚಾಲಿತ ಬೋಧನಾ ಸಾಧನಗಳಿಗಿಂತ ಹೆಚ್ಚು ವಿಸ್ತಾರವಾಗಿದೆ. ಏಕೆಂದರೆ ಇದು ಉತ್ಪಾದಕ AI ನಿಂದ ಚಾಲಿತವಾಗಿದೆ, ಇದನ್ನು ChatGPT ನಂತಹ ಪ್ರೋಗ್ರಾಂಗಳು ಸಹ ಬಳಸುತ್ತವೆ ಅನ್ನೋದು ಗಮನಿಸಬೇಕಾದ ವಿಚಾರವಾಗಿದೆ. ಸದ್ಯ ಐರಿಸ್ ಟೀಚರ್ ಮಹಿಳೆಯ ಧ್ವನಿಯಲ್ಲಿ ಮಾತನಾಡುತ್ತಾಳೆ. ಇದು ಮಾನವ ಬೋಧಕನ ಅನೇಕ ಗುಣಲಕ್ಷಣಗಳನ್ನು ಹೊಂದಿದ್ದಾಳೆ, ಆದರೆ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿಲ್ಲ.
ಇನ್ನು ನಮ್ಮ ವಿದ್ಯಾರ್ಥಿಗಳು ಪ್ರಯೋಗಾಲಯದ ಮೂಲಕ ಅನೇಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು 3D ಮುದ್ರಣದಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಾಗಾರದ ಅನುಭವವನ್ನು ಪಡೆದುಕೊಳ್ಳುತ್ತಾರೆ. ಈ ಕಾರ್ಯಾಗಾರಗಳು AI ಯ ಸಾಮರ್ಥ್ಯವನ್ನು ಅರಿತುಕೊಳ್ಳಲು ನಮಗೆ ಸಹಾಯ ಮಾಡಿವೆ. ಇದು ಮೇಕರ್‌ಲ್ಯಾಬ್ಸ್‌ನೊಂದಿಗೆ ಸಹಕರಿಸಲು ಪ್ರೇರೇಪಿಸಿತು ಎಂದು ಶಾಲೆಯ ಪ್ರಾಂಶುಪಾಲರಾಗಿರುವ ಮೀರಾ ಎಂಎನ್ ಹೇಳಿದ್ದಾರೆ.

ಈಗಾಗಲೆ ಸಾಕ್ಷರತೆಯಲ್ಲಿ ಇಡೀ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರುವ ಕೇರಳ AI ಟೀಚರ್ ಮೂಲಕ ಮತ್ತೆ ಸದ್ದು ಮಾಡುತ್ತಿದೆ. AI ಟೀಚರ್ ಜೊತೆಗೆ ವಿದ್ಯಾರ್ಥಿಗಳ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಅನುಸರಿಸಿ, ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಹೆಚ್ಚಿನ ಜನರೇಟಿವ್ AI ಶಿಕ್ಷಕರನ್ನು ನಿಯೋಜಿಸಲು ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆ ತಯಾರಿ ನಡೆಸಿದೆ ಎಂದು ವರದಿಯಾಗಿದೆ. ಈ ಶಾಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ನಡೆಸುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications








