Home
ಸುದ್ದಿಜಾಲ

ಆಪಲ್‌ಗೆ ನೂತನ ಸಾರಥಿ: ಯಾರಿದು ಹೊಸ CFO ಕೆವನ್ ಪರೇಖ್?

ಟೆಕ್ ದೈತ್ಯ ಆಪಲ್ ಭಾರತೀಯ ಮೂಲದ ಇಂಜಿನಿಯರ್ ಕೆವನ್ ಪರೇಖ್ (Kevan Parekh) ಅವರನ್ನು ತನ್ನ ಮುಖ್ಯ ಹಣಕಾಸು ಅಧಿಕಾರಿಯಾಗಿ (Apples new CFO) ನೇಮಕ ಮಾಡುವುದಾಗಿ ಘೋಷಿಸಿದೆ. ಲುಕಾ ಮೇಸ್ತ್ರಿ ಬದಲಿಗೆ ಕೆವನ್ ಪರೇಖ್ ಅವರು ಕಂಪನಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮುಂಬರುವ ಜನವರಿ 1, 2025 ರಿಂದ ಕಂಪನಿಯಲ್ಲಿ ತನ್ನ ಹೊಸ ಸ್ಥಾನವನ್ನು ಕೆವನ್ ಪರೇಖ್ ವಹಿಸಿಕೊಳ್ಳಲಿದ್ದಾರೆ. ಮುಖ್ಯವಾಗಿ, ಆಪಲ್‌ನ ಹಲವು ಹೊಸ ಉತ್ಪನ್ನಗಳ ಬಿಡುಗಡೆಗೆ ಮುನ್ನ ಕಂಪನಿಯಲ್ಲಿ ಈ ದೊಡ್ಡ ಬದಲಾವಣೆ ಮಾಡಲಾಗಿದೆ.

ಪಾರೇಖ್ ಅವರು 11 ವರ್ಷಗಳಿಂದ ಆಪಲ್‌ ಕಂಪನಿಯಲ್ಲಿದ್ದಾರೆ. ಕಂಪನಿಯ ಹಣಕಾಸು ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳಿಗೆ ತನ್ನದೇ ಆದ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಯೋಜಿತ ಉತ್ತರಾಧಿಕಾರವಾಗಿ ಕೆವನ್ ಪರೇಖ್ ಪ್ರಸ್ತುತ ಹಣಕಾಸು ಯೋಜನೆ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷರಾಗಿದ್ದಾರೆ. ಕೆವನ್ ಅವರು ಜನವರಿ 1 ರಿಂದ ಅಧಿಕೃತವಾಗಿ ಸಿಎಫ್‌ಒ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ಆಪಲ್‌ಗೆ ನೂತನ ಸಾರಥಿ: ಯಾರಿದು ಹೊಸ CFO ಕೆವನ್ ಪರೇಖ್?

ಯಾರು ಈ ಕೇವನ್ ಪರೇಖ್?

ಕೆವನ್ ಪರೇಖ್ ಅವರು ಮಿಚಿಗನ್ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ವ್ಯಾಪಾರ ಶಾಲೆಗಳಲ್ಲಿ ಒಂದಾದ ಚಿಕಾಗೋ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಈ ಮೂಲಕ ಪಾರೇಖ್ ಅವರು ತಮ್ಮ ವ್ಯವಹಾರದ ಚಾಣಾಕ್ಷತೆಗೆ (ಚುರುಕುಬುದ್ಧಿ) ಹೊಸ ಭಾಷ್ಯ ನೀಡಿದ್ದಾರೆ. ಬಳಿಕ, ಕೆವನ್ ಪರೇಖ್ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಆಪಲ್‌ ಕಂಪನಿಯಲ್ಲಿದ್ದಾರೆ. ಇದೀಗ, ಕೆವನ್ ಅವರು ಕಂಪನಿಯ ಕಾರ್ಯಕಾರಿ ಸಮಿತಿಯನ್ನು ಸೇರಿಕೊಳ್ಳಲಿದ್ದಾರೆ.

52 ವರ್ಷದ ಕೆವನ್ ಪರೇಖ್ 11 ವರ್ಷಗಳ ಹಿಂದೆ ಆಪಲ್‌ಗೆ ಸೇರಿದರು. ಮತ್ತು ಕಡಿಮೆ ಸಮಯದಲ್ಲಿ ಕಂಪನಿಯ ಹಣಕಾಸು ನಾಯಕತ್ವದ ತಂಡದ ಪ್ರಮುಖ ಭಾಗವಾಗಿದ್ದಾರೆ. ಪ್ರಸ್ತುತ ಹಣಕಾಸು ಯೋಜನೆ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪರೇಖ್ ಅವರು, ಹಣಕಾಸು ಯೋಜನೆ, G&A ಮತ್ತು ಪ್ರಯೋಜನಗಳ ಹಣಕಾಸು, ಹೂಡಿಕೆದಾರರ ಸಂಬಂಧಗಳು ಮತ್ತು ಮಾರುಕಟ್ಟೆ ಸಂಶೋಧನೆಯಂತಹ ಪ್ರಮುಖ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಾರೆ. ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಕೆವನ್ ಪರೇಖ್ ತಮ್ಮ ಎಲ್ಲಾ ಕೆಲಸಗಳನ್ನು ವರದಿ ಮಾಡಲಿದ್ದಾರೆ.

ಕೆವನ್ ಪರೇಖ್ ಅವರು ತಮ್ಮ ವ್ಯಾಪಾರ ನಿಪುಣತೆಯನ್ನು ಪ್ರದರ್ಶಿಸುವ ಮೂಲಕ ವಿಶ್ವಾದ್ಯಂತ ಮಾರಾಟ, ಚಿಲ್ಲರೆ ಮತ್ತು ಮಾರ್ಕೆಟಿಂಗ್‌ಗಾಗಿ ಆಪಲ್‌ನ ಹಣಕಾಸುವನ್ನು ಮುನ್ನಡೆಸಿದರು. ವರದಿಯ ಪ್ರಕಾರ, ಕಳೆದ ಹಲವು ತಿಂಗಳುಗಳಿಂದ ಕೆವನ್ ಪರೇಖ್ ಅವರ ಹಿರಿಯ ಮ್ಯಾನೇಜ್‌ಮೆಂಟ್‌ನಿಂದ ಸಿಎಫ್‌ಒ ನೇಮಕಕ್ಕೆ ತಯಾರಿ ನಡೆಸುತ್ತಿದ್ದರು. ಇದರಿಂದಾಗಿ ಅವರು ಈ ಹುದ್ದೆಯ ಪ್ರಾಮುಖ್ಯತೆ ಮತ್ತು ಕೆಲಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎನ್ನಲಾಗಿದೆ.

ಕೆವನ್ ಪರೇಖ್ ಮೊದಲು ಕೆಲಸ ಮಾಡಿದ್ದು ಎಲ್ಲಿ?

ಆಪಲ್‌ ಕಂಪನಿಗೆ ಸೇರುವ ಮೊದಲು ಕೆವನ್ ಪರೇಖ್ ಅವರು, ಥಾಮ್ಸನ್ ರಾಯಿಟರ್ಸ್ ಮತ್ತು ಜನರಲ್ ಮೋಟಾರ್ಸ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲಿ ಅವರು ಅನೇಕ ಹಿರಿಯರಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ಭಾರತೀಯ ಮೂಲದ ಕಾರ್ಯನಿರ್ವಾಹಕರು ರಾಯಿಟರ್ಸ್‌ನೊಂದಿಗೆ 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಮತ್ತು ಕಾರ್ಪೊರೇಟ್ ಕಾರ್ಯನಿರ್ವಾಹಕರಾಗಿ ಸಹಿ ಮಾಡುವ ಮೊದಲು ಹಣಕಾಸು ಉಪಾಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

ಕೆವನ್ ಪರೇಖ್ ಅವರು ನ್ಯೂಯಾರ್ಕ್‌ನ ಜನರಲ್ ಮೋಟಾರ್ಸ್‌ ಕಚೇರಿಯಲ್ಲಿ ವ್ಯಾಪಾರ ಅಭಿವೃದ್ಧಿಯ ನಿರ್ದೇಶಕರಾಗಿದ್ದರು. ಮತ್ತು ಯುರೋಪ್‌ನ ಜ್ಯೂರಿಚ್‌ನಲ್ಲಿ ಪ್ರಾದೇಶಿಕ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಟಿಮ್ ಕುಕ್ ಅವರು ಹೊಸ ಸಿಎಫ್‌ಒ ಕೆವನ್ ಪರೇಖ್ ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಂಪನಿಯ ಬಗ್ಗೆ ಅವರ ತಿಳುವಳಿಕೆ ಮತ್ತು ಅವರ ಆರ್ಥಿಕ ಚಾಣಾಕ್ಷತೆಯನ್ನು ಎತ್ತಿ ತೋರಿಸಿದ್ದಾರೆ.

ಆಪಲ್ ಸಿಇಒ ಟಿಮ್ ಕುಕ್ ಹೇಳಿದ್ದೇನು?

ಕೆವನ್ ಪರೇಖ್ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಕಂಪನಿಯ ಸಂಪೂರ್ಣ ಹಣಕಾಸು ನಾಯಕತ್ವದ ತಂಡದ ಸದಸ್ಯರಾಗಿದ್ದಾರೆ. ಕಂಪನಿಯ ಒಳ ಮತ್ತು ಹೊರಗಿರುವ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ ಎಂದು ಟಿಮ್ ಕುಕ್ ಹೇಳಿದ್ದಾರೆ. ಕೆವನ್ ಅವರ ತೀಕ್ಷ್ಣವಾದ ಬುದ್ಧಿವಂತಿಕೆ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಆರ್ಥಿಕ ಪ್ರತಿಭೆಯಂತಹ ಎಲ್ಲಾ ಗುಣಗಳು ಅವರನ್ನು ಆಪಲ್‌ನ ಸಿಎಫ್‌ಒ ಆಗಿ ನೇಮಿಸಲು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡಿದೆ ಎಂದು ಹಾಡಿ ಹೊಗಲಿದ್ದಾರೆ.

ಮೆಚ್ಚುಗೆ ವ್ಯಕ್ತಪಡಿಸಿದ ಲುಕಾ ಮೇಸ್ತ್ರಿ

ಲುಕಾ ಮೇಸ್ತ್ರಿ ಅವರು ಕೆವನ್ ಪರೇಖ್ ಅವರ ನೇಮಕ ಮತ್ತು ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಅಧಿಕಾರಾವಧಿಯ ಮುಂದಿನ ಹಂತವನ್ನು ನಾನು ಎದುರು ನೋಡುತ್ತಿದ್ದೇನೆ. ಪರೇಖ್‌ ಅವರಲ್ಲಿ ಮಾತ್ರ ನನಗೆ ವಿಶ್ವಾಸವಿದೆ. ಏಕೆಂದರೆ, ಕೆವನ್ ಪರೇಖ್ ಅವರು ಕಂಪನಿಯ ಸಿಎಫ್‌ಒ ಆಗಿ ಜವಾಬ್ದಾರಿಯನ್ನು ವಹಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

Best Mobiles in India

English summary
Kevan Parekh will be Apples new CFO; Who is Indian origin Kevan Parekh?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+