ಪತ್ರಕರ್ತ‌ಘಟನೆಗೆ ಸಾಕ್ಷಿಯಾಗಬೇಕೋ?ರಕ್ಷಿಸಬೇಕೋ?

By Ashwath
|

ಅವನು ಜಗತ್ತಿಗೆ ಪರಿಚಯವಾಗಿದ್ದು ಒಂದು ಫೋಟೋದ ಮೂಲಕ. ಆ ಫೋಟೋದಿಂದಾಗಿ ವಿಶ್ವ ಪ್ರಸಿದ್ದ ಫೋಟೋಗ್ರಾಫರ್‌ ಎಂಬ ಪಟ್ಟ ಅವನಿಗೆ ಒಲಿದಿತ್ತು. ಅವನು ತೆಗೆದ ಚಿತ್ರವನ್ನು ಪ್ರಕಟಿಸಲು ವಿಶ್ವದ ವಿವಿಧ ಪ್ರತಿಕೆಗಳು ತುದಿಗಾಲಲ್ಲಿ ನಿಂತಿದ್ದವು. ಆದರೆ ಅದೇ ಫೋಟೋ ಅವನ ಆತ್ಮಹತ್ಯೆಗೆ ಕಾರಣವಾಯಿತು.

ಸುಡಾನ್‌ ದೇಶ 1993 ರಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಈ ಭೀಕರತೆಯನ್ನು ವಿಶ್ವದ ಜನತಗೆ ತಲುಪಿಸಲು ವಿಶ್ವದ ಹಲವು ಫೋಟೋ ಜರ್ನ‌ಲಿಸ್ಟ್‌ಗಳು ಸುಡಾನ್‌ಗೆ ತೆರಳಿದ್ದರು. ಆದರೆ ವಿಶ್ವದ ಮಂದಿಗೆ ಸುಡಾನ್‌ ಭೀಕರ ಬರಗಾಲಕ್ಕೆ ತುತ್ತಾಗಿದೆ ಎಂದು ಅನಿಸಲೇ ಇಲ್ಲ. ಆದರೆ 1994 ಮಾರ್ಚ್‌ 26ರಂದು ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟಗೊಂಡ ಒಂದು ಫೋಟೋ ವಿಶ್ವದ ಜನರನ್ನು ಎಚ್ಚರಿಸಿತು. ವಿಶ್ವದ ವಿವಿಧ ರಾಷ್ಟ್ರಗಳು ಈ ಫೋಟೋವನ್ನು ನೋಡಿ ಸುಡಾನ್‌ಗೆ ತನ್ನ ಸಹಾಯ ಹಸ್ತವನ್ನು ನೀಡಿತು.

ಈ ಒಂದು ಫೋಟೋದಿಂದ ಸುಡಾನ್‌ ಪರಿಸ್ಥಿತಿಯನ್ನು ಜಗತ್ತಿಗೆ ತಿಳಿಸಿದ ವಿಶ್ವದ ಶ್ರೇಷ್ಟ ಫೋಟೋ ಜರ್ನ‌ಲಿಸ್ಟ್ ಹೆಸರು ಕೆವಿನ್‌ ಕಾರ್ಟ‌ರ್‌. ಸುಡಾನ್‌ಲ್ಲಿ ವಿಶ್ವಸಂಸ್ಥೆ ತೆರೆದಿದ್ದ ಆಹಾರ ಕೇಂದ್ರದತ್ತ ತೆವಳಿಕೊಂಡು ಹೋಗುತ್ತಿರುವ ಆನಾಥ ಮಗು.. ಅದರ ಪಕ್ಕದಲ್ಲೇ ತನ್ನ ಆಹಾರಕ್ಕಾಗಿ ಮಗುವನ್ನು ಸಾಯಿಸಲು ಹವಣಿಸಿತ್ತಿರುವ ರಣಹದ್ದು. ಈ ದೃಶ್ಯವನ್ನು ಹತ್ತು ಮೀಟರ್‌ ಆಂತರದಿಂದ ತೆಗೆದ ಫೋಟೋ ವಿಶ್ವದ ಜನತೆಯ ಸುಡಾನ್‌ನಲ್ಲಿ ಎಷ್ಟು ಬರಗಾಲವಿದೆ ಎಂದು ಅರ್ಥೈಸಲು ಸಾಧ್ಯವಾಯಿತು. ಈ ಚಿತ್ರಕ್ಕೆ ಕೊನೆಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಸಿಕ್ಕಿತು.

ಕಾರ್ಟರ್‌ ತೆಗೆದ ಚಿತ್ರವನ್ನು ವಿಶ್ವದ ವಿವಿಧ ಮಾಧ್ಯಮಗಳು ಪ್ರಕಟಿಸಿದವು. ಆದರೆ ಅಷ್ಟೇ ರೀತಿಯಲ್ಲಿ ಕಾರ್ಟರ್‌ ಮೇಲೆ ಆರೋಪಗಳ ಸುರಿಮಳೆ ಜನರಿಂದ ವ್ಯಕ್ತವಾಯಿತು. ತನ್ನ ಕೆಲಸಕ್ಕಾಗಿ ಪುಟ್ಟ ಮಗುವನ್ನು ಬಲಿಕೊಟ್ಟ ವ್ಯಕ್ತಿ, ಎರಡು ರಣಹದ್ದುಗಳ ಮಧ್ಯೆ ಮಗು ಇತ್ತು ಎಂದೆಲ್ಲ ಜನರು ಜರೆದಿದ್ದರು. ಆದರೆ ನಿಜವಾಗಿಯೂ ಕಾರ್ಟರ್‌ ಫೋಟೋ ತೆಗದ ಕೂಡಲೇ ಆ ಮಗುವನ್ನು ರಕ್ಷಿಸಿದ್ದ. ಆದರೆ ಆ ಮಗುವಿನ ಕಥೆ ಮುಂದೆನಾಯಿತು ಎಂಬುದು ಇವನಿಗೆ ತಿಳಿದಿರಲಿಲ್ಲ.

ಈ ಚಿತ್ರಕ್ಕೆ ದುಃಖ, ಆಕ್ರೋಶಗಳಿಂದ ಬರುತ್ತಿದ್ದ ಜನರ ಪ್ರತಿಕ್ರಿಯೆಗೆ ಎಷ್ಟು ಸಮರ್ಥ‌ನೆ ನೀಡಿದ್ದರೂ ಪ್ರತ್ರಿಕಿಯೇ ಬರುವುದು ನಿಲ್ಲಲಿಲ್ಲ.. ಕೊನೆಗೆ ಈ ಚಿತ್ರದ ಯೋಚನೆಯಲ್ಲಿ ಕಾರ್ಟರ್‍ ಮುಳುಗಿ ತನ್ನ ಮೂವತ್ತಮೂರನೇ ವಯಸ್ಸಿನ್ಲಲ್ಲಿ ಆತ್ಮಹತ್ಯೆ ಮಾಡಿಕೊಂಡ. ಕಾರ್ಟರ್‌ ಆತ್ಮಹತ್ಯೆ ಮಾಡಿಕೊಂಡು 19 ವರ್ಷ‌ ಸಂದರೂ ಅವನು ಇನ್ನೂ ಪತ್ರಿಕಾ ಮಾಧ್ಯಮಗಳಲ್ಲಿ ಜೀವಂತವಾಗಿದ್ದಾನೆ.ಪತ್ರಕರ್ತ‌ ಘಟನೆಗೆ ಸಾಕ್ಷಿಯಾಗಬೇಕೋ ಅಥವಾ ರಕ್ಷಿಸಬೇಕೋ ಎನ್ನುವ ವಿಚಾರದಲ್ಲಿ ಇವನ ಬಗ್ಗೆ ಮಾತನಾಡುವ ಮೂಲಕ ಕಾಟರ್‌ನ್ನು ಸ್ಮರಿಸುತ್ತಿದ್ದಾರೆ.

ವಿವಿಧ ಕಂಪೆನಿಗಳ ಆಕರ್ಷಕ ಕ್ಯಾಮೆರಾಗಳ ಫೋಟೋಗಳನ್ನು ವೀಕ್ಷಿಸಲು ಇಲ್ಲಿ ಭೇಟಿ ನೀಡಿ : ಗ್ಯಾಲರಿ

  ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

  ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

ಕೆವಿನ್‌ ಕಾರ್ಟ‌ರ್‌ ಫೋಟೋಗ್ರಾಫಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X