ಮಕ್ಕಳ ಸುರಕ್ಷತೆಗೆ 'ಕಿಡ್ಡೊಶೀಲ್ಡ್' ವಾಚ್!..ಇದಿದ್ದರೆ ಪೋಷಕರಿಗೆ ಭಯವಿಲ್ಲ!!

|

ಮಕ್ಕಳನ್ನು ಎಷ್ಟೇ ಜಾಗೃತವಾಗಿ ನೋಡಿಕೊಂಡರೂ ಸಹ ಕೆಲವೊಮ್ಮೆ ಪೋಷಕರು ಯಾಮಾರಿಬಿಡುವುದು ಉಂಟು. ಅಂಗಡಿಗೋ, ಶಾಲೆ ಹೋದ ಮಗು ಮನೆಗೆ ನಿಗದಿತ ಸಮಯದಲ್ಲಿ ವಾಪಸ್ ಬಾರದಿದ್ದರೆ ಆಗುವಂತಹ ಸಂಕಟ ಪೋಷಕರಿಗೆ ಹೇಳಲು ಸಾಧ್ಯವಿಲ್ಲ. ನಮ್ಮ ಮಕ್ಕಳನ್ನು ಯಾರಾದರೂ ಅಪಹರಣ ಮಾಡಿರಬಹುದು ಅಥವಾ ಮಕ್ಕಳು ಅಚಾನಕ್ ಆಗಿ ದಾರಿ ತಪ್ಪಿ ನಮ್ಮಿಂದ ದೂರಾಗಬಹುದು ಎಂಬ ಭಯ ಕೂಡ ಎಲ್ಲಾ ಪೋಷಕರಿಗೂ ಯಾವಾಗಲೂ ಕಾಡುತ್ತಿರುತ್ತದೆ ಅಲ್ಲವೇ.?

ಮಕ್ಕಳ ಸುರಕ್ಷತೆಗೆ 'ಕಿಡ್ಡೊಶೀಲ್ಡ್' ವಾಚ್!..ಇದಿದ್ದರೆ ಪೋಷಕರಿಗೆ ಭಯವಿಲ್ಲ!!

ಹಾಗಾಗಿಯೇ ಯುನಿಜಿಪಿಎಸ್ ಎಂಬ ಕಂಪನಿಯು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಉದ್ದೇಶದಿಂದ 'ಕಿಡ್ಡೊ ಶೀಲ್ಡ್' ಎನ್ನುವ ಜಿಪಿಎಸ್ ಆಧಾರಿತ ಸ್ಮಾರ್ಟ್‌ವಾಚ್ ಒಂದನ್ನು ಬಿಡುಗಡೆ ಮಾಡಿದೆ. ಈ ವಾಚ್ ಜಿಪಿಎಸ್ ಆಧಾರಿತವಾಗಿದ್ದು, ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬಹುದಾಗಿದೆ. ಹಾಗಾದರೆ, ಹೇಗಿದೆ ಈ ಕಿಡ್ಡೊ ಶೀಲ್ಡ್' ಸ್ಮಾರ್ಟ್‌ವಾಚ್? ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಏನಿದು ‘ಕಿಡ್ಡೊ ಶೀಲ್ಡ್’ ?

ಏನಿದು ‘ಕಿಡ್ಡೊ ಶೀಲ್ಡ್’ ?

ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಈ ‘ಕಿಡ್ಡೊ ಶೀಲ್ಡ್' ಒಂದು ಸ್ಮಾರ್ಟ್‌ವಾಚ್ ಆಗಿದೆ. ಈ ವಾಚ್‌ನಲ್ಲಿರುವ ಆಧುನಿಕ ಜಿಪಿಎಸ್ ತಂತ್ರಜ್ಞಾನ ಸಹಾಯದಿಮದ ಮೊಬೈಲ್‌, ಲ್ಯಾಪ್‌ಟ್ಯಾಪ್‌ಗಳ ಮೂಲಕ ಮಕ್ಕಳ ಮೇಲೆ ನಿಗಾ ಇಡಬಹುದು. ವಾಚ್ ಕಟ್ಟಿಕೊಂಡಿರುವ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ನಿಖರವಾಗಿ ತಿಳಿಯುವಂತಹ ವ್ಯವಸ್ಥೆ ಈ ವಾಚ್‌ನಲ್ಲಿದೆ.

ಹೇಗಿದೆ ‘ಕಿಡ್ಡೊ ಶೀಲ್ಡ್’ ?

ಹೇಗಿದೆ ‘ಕಿಡ್ಡೊ ಶೀಲ್ಡ್’ ?

10ಕ್ಕೂ ಅಧಿಕ ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ಸಾಮರ್ಥ್ಯ ಹೊಂದಿರುವ ಒಂದು ಸ್ಮಾರ್ಟ್‌ವಾಚ್ ಇದಾಗಿದೆ. ಈ ವಾಚ್‌ನಲ್ಲಿ ಮೊಬೈಲ್‌ ಫೋನ್‌ಗೆ ಬಳಸುವಂತಹ ಸಿಮ್ ಅಳವಡಿಸಲಾಗಿರುತ್ತದೆ. ಈ ಸಾಧನ ಖರೀದಿಸಿದ ನಂತರ ಕಂಪನಿಗೆ ಬಳಕೆದಾರರ ಮೊಬೈಲ್‌ ಸಂಖ್ಯೆ ಮತ್ತು ಇ-ಮೇಲ್‌ ಐಡಿ ನೀಡಬೇಕು. ಆಗ ವಾಚ್‌ನಲ್ಲಿರುವ ಸಿಮ್ ಜತೆಗೆ ಸಂಪರ್ಕ ಸಾಧಿಸುವ ಸೆಟ್ಟಿಂಗ್‌ಗಳು ಸಿಗುತ್ತವೆ. ಇದಕ್ಕೆ ಪ್ರತಿ ತಿಂಗಳು 100 ರೂ. ರೀಚಾರ್ಜ್ ಮಾಡಿಸಬೇಕಾಗುತ್ತದೆ.

ವಾಚ್ ಕಾರ್ಯವೈಖರಿ ಹೇಗಿದೆ?

ವಾಚ್ ಕಾರ್ಯವೈಖರಿ ಹೇಗಿದೆ?

ಈ ಸಾಧನದಲ್ಲಿರುವ ‘ಎಸ್‌ಒಎಸ್' ಕೀ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಈ ಕೀಯನ್ನು ಪ್ರೆಸ್‌ ಮಾಡುವ ಮೂಲಕ ತಾವು ಅಪಾಯದಲ್ಲಿರುವ ಸಂದೇಶವನ್ನು ಈಗಾಗಲೇ ಸೇವ್ ಮಾಡಿರುವ ಮೊಬೈಲ್‌ ಸಂಖ್ಯೆಗೆ ಕಳುಹಿಸಬಹುದು. 10 ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳನ್ನು ಸೇವ್ ಮಾಡುವ ಸೌಲಭ್ಯವೂ ಇದರಲ್ಲಿದ್ದು, ತುರ್ತು ಸಂದರ್ಭದಲ್ಲಿ ಕೇವಲ ಒಬ್ಬರಿಗೆ ಮಾತ್ರವೇ ಎಸ್‌ಒಎಸ್ ಸಂದೇಶ ರವಾನೆಯಾಗುತ್ತದೆ.

ಪ್ರತಿ ಹೆಜ್ಜೆಯನ್ನೂ ಗಮನಿಸಬಹುದು!

ಪ್ರತಿ ಹೆಜ್ಜೆಯನ್ನೂ ಗಮನಿಸಬಹುದು!

ಈ ‘ಕಿಡ್ಡೊ ಶೀಲ್ಡ್' ವಾಚ್ ಅನ್ನು ಮಕ್ಕಳ ಕೈಗೆ ಕಟ್ಟಿದರೆ ಅವರ ಪ್ರತಿ ಹೆಜ್ಜೆಯನ್ನೂ ನಿಖರವಾಗಿ ಗಮನಿಸಬಹುದು. ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಮ್ಯಾಪ್‌ ಮಾಡುವ ಮೂಲಕ ಅವರ ಎಲ್ಲಾ ಚಲನವಲನದ ಮೇಲೆ ನಿಗಾ ಇರಿಸಬಹುದು. ಒಂದು ವೇಳೆ ಮಕ್ಕಳನ್ನು ಅಪಹರಿಸಿದರೆ, ಅಪಹರಣಕಾರರ ವಾಹನ ಚಲಿಸುತ್ತಿರುವ ದಿಕ್ಕು, ವೇಗ ಮತ್ತು ಸ್ಥಳದ ಬಗ್ಗೆ ನಿಖರವಾದ ಮಾಹಿತಿಯನ್ನು ಸಹ ತಿಳಿಯಬಹುದು.

ವಾಚ್ ಬಳಕೆ ಹೇಗೆ?

ವಾಚ್ ಬಳಕೆ ಹೇಗೆ?

ವಾಚ್ ಖರೀದಿಸಿದ ನಂತರ ಮೊಬೈಲ್‌ನಲ್ಲಿ unigps.in ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಲ್ಯಾಪ್‌ಟಾಪ್‌ನಲ್ಲಾದರೆ ಯುನಿಸುರಕ್ಷಾ ಜಾಲತಾಣಕ್ಕೆ ಭೇಟಿ ನೀಡಿ ಲಾಗಿನ್ ಆಗಬೇಕು. ಈಗ ನೀವು ಮ್ಯಾಪ್‌ ಮೂಲಕ ಅವರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಮಾಡಬಹುದು. ಅಥವಾ ವಾಚ್‌ನಲ್ಲಿ ಮಯ ನಿಗದಿ ಮಾಡಿಟ್ಟರೆ ಆ ಅವಧಿ ಮುಗಿಯುತ್ತಿದ್ದಂತೆಯೇ ಮಗ /ಮಗಳು ಮನೆಗೆ ಹಿಂದಿರುಗದೇ ಇದ್ದರೆ ಎಚ್ಚರಿಕೆ ಸಂದೇಶವನ್ನು ಸಹ ಪಡೆಯಬಹುದು.

ಇತರೆ ವಿಶೇಷತೆಗಳು ಯಾವುವು?

ಇತರೆ ವಿಶೇಷತೆಗಳು ಯಾವುವು?

ಈ ಸ್ಮಾರ್ಟ್‌ವಾಚ್‌ನಲ್ಲಿ ಇಯರ್‌ಫೋನ್‌ ಅಳವಡಿಸಿಕೊಳ್ಳುವ ಸೌಲಭ್ಯವನ್ನು ಒದಗಿಸಿರುವುದರಿಂದ ಮೊಬೈಲ್‌ಫೋನ್‌ಗೆ ಕರೆ ಮಾಡುವ ಹಾಗೆ ಕರೆ ಮಾಡಿ, ಮಾತನಾಡಿಸುವುದಕ್ಕೂ ಅವಕಾಶವಿದೆ. ಕರೆ ಬಂದ ಕೂಡಲೇ ಎಚ್ಚರಿಸಲು ಅಲಾರಂ ಸದ್ದು ಬರುವಂತೆ ತಯಾರಿಸಲಾಗಿದೆ. ಚಾರ್ಜ್‌ ಮಾಡಿಕೊಳ್ಳಲು ಪಿನ್‌ ಅಳವಡಿಸಲಾಗಿದೆ. ಜಿಪಿಎಸ್‌ ಟ್ರ್ಯಾಕರ್‌ ಇರುವುದರಿಂದ ಅವರು ಇರುವಂತಹ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ವಾಚ್ ಬೆಲೆ ಎಷ್ಟು?

ವಾಚ್ ಬೆಲೆ ಎಷ್ಟು?

ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಈ ‘ಕಿಡ್ಡೊ ಶೀಲ್ಡ್' ಸ್ಮಾರ್ಟ್‌ವಾಚ್ ಬೆಲೆ ₹ 2,640 ರಿಂದ ಆರಂಭವಾಗಲಿದೆ. ವಾಚ್ ಖರೀದಿ ಮೇಲೆ ವಾರೆಂಟಿ ಜೊತೆಗೆ ವಾಚ್ ಅನ್ನು ವಾಪಸ್ ಮಾಡಬಹುದಾದಂತಹ ಆಯ್ಕೆಯನ್ನು ಸಹ ನೀಡಲಾಗಿದೆ. ಪ್ರತಿ ತಿಂಗಳು ಕೇವಲ 100 ರೂಪಾಯಿ ವೆಚ್ಚದಲ್ಲಿ ಮಕ್ಕಳ ಸುರಕ್ಷತೆ ಕೂಡ ಖಾತ್ರಿ ನೀಡುವ ಈ ವಾಚ್ ಆನ್‌ಲೈನಿನಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ.

Best Mobiles in India

English summary
Multifunction Kids Smart Watch – Works seamlessly on Airtel,Idea and Vodaphone 2g package,supports GSM micro SIM Card. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X