ಇನ್ಮುಂದೆ 1 ಸಾವಿರ ಗ್ರಾಂ ಎಂದರೆ 1 ಕೆ.ಜಿಯಲ್ಲವಂತೆ!!

|

ಕಾಲ ಬದಲಾದಂತೆ ಕೆಲವು ನಂಬಿಕೆಗಳು ಕೂಡ ಬದಲಾಗಬಹುದು. ಏಕೆಂದರೆ, ಸದ್ಯ ಚಾಲ್ತಿಯಲ್ಲಿರುವ ಕಿಲೋ ಗ್ರಾಂ ಮಾಪನಕ್ಕೆ ಹೊಸ ವ್ಯಾಖ್ಯಾನ ನೀಡಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ತೂಕ ಮತ್ತು ಅಳತೆಗಳ ಪ್ರಧಾನ ಸಮ್ಮೇಳನದಲ್ಲಿ ಭೌತವಿಜ್ಞಾನಿಗಳು ಇಂತಹದೊಂದು ಹೊಸ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಹೌದು, ಇತ್ತೀಚಿಗೆ ಪ್ಯಾರಿಸ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ತೂಕ ಮತ್ತು ಅಳತೆಗಳ ಪ್ರಧಾನ ಸಮ್ಮೇಳನದಲ್ಲಿ ಹಳೆಯ ಕಿ.ಗ್ರಾಂ ಪದ್ಧತಿಗೆ ಇತಿಶ್ರೀ ಹಾಡಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಸಮ್ಮೇಳನದಲ್ಲಿ ಸೇರಿದ್ದ ವಿಶ್ವದ 60 ಕ್ಕೂ ಹೆಚ್ಚು ವಿಜ್ಞಾನಿಗಳು ಈ ಹೊಸ ವ್ಯಾಖ್ಯಾನಕ್ಕೆ ವಿಜ್ಞಾನಿಗಳು ಒಮ್ಮತದಿಂದ ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ಮುಂದೆ 1 ಸಾವಿರ ಗ್ರಾಂ ಎಂದರೆ 1 ಕೆ.ಜಿಯಲ್ಲವಂತೆ!!

ಕಿಲೋ ಗ್ರಾಂ ಬದಲಾವಣೆ ನಂತರ ಕೆಲ ನೈಸರ್ಗಿಕ ವಸ್ತುಗಳನ್ನು ಆಧರಿಸಿ ಕೆಲ ಘಟಕಗಳನ್ನು ಮಾಪನ ಮಾಡಿ ಕೊಳ್ಳಲಾಗುತ್ತದೆ. ಹೀಗಾಗಿ 2019 ರ ಮೇ ತಿಂಗಳ ನಂತರ ಸೆಕೆಂಡ್​ಗಳ ಜೊತೆ ಮೀಟರ್​ಗಳ ಮಾನದಂಡಗಳು ಕೂಡ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹಾಗಾದರೆ, ಏನಿದು ಕುತೋಹಲ ವರದಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಅಳತೆ ಮಾಪನದಲ್ಲಿ ತಿದ್ದುಪಡಿ!

ಅಳತೆ ಮಾಪನದಲ್ಲಿ ತಿದ್ದುಪಡಿ!

ವಿಜ್ಞಾನಿಗಳಿಗೆ ನಿಖರ ಮಾಪನದ ಅಗತ್ಯತೆ ಇರುವುದರಿಂದ 1889ರ ಬಳಿಕ ಇದೇ ಮೊದಲ ಬಾರಿಗೆ ಅಳತೆ ಮಾಪನದಲ್ಲಿ ತಿದ್ದುಪಡಿ ತರಲು ಸಂಶೋಧಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಮೇ, 2019 ರ ನಂತರ ಸೆಕೆಂಡ್​ಗಳ ಜೊತೆ ಮೀಟರ್​ಗಳ ಮಾನದಂಡಗಳು ಕೂಡ ಬದಲಾವಣೆಯಾಗುವ ಸಾಧ್ಯತೆಯಿದ್ದು, ಇನ್ನು ಕಿಲೋಗ್ರಾಂ ವ್ಯಾಖ್ಯಾನ ಬದಲಾಗಲಿದೆ.

ಮಾಪನದಲ್ಲಿ ತಿದ್ದುಪಡಿ ಏಕೆ?

ಮಾಪನದಲ್ಲಿ ತಿದ್ದುಪಡಿ ಏಕೆ?

ಇದುವರೆಗೆ ಕೆ.ಜಿ ಬಳಕೆಯ ವ್ಯಾಖ್ಯಾನಕ್ಕಾಗಿ 'ಲೀ ಗ್ರಾಂಡ್​ ಕೆ' ಎಂದು ಕರೆಯಲ್ಪಡುವ ಪ್ಲಾಟಿನಂ-ಇರಿಡಿಯಂ ಮಿಶ್ರಲೋಹದ ಸಾಧನವನ್ನು ಬಳಸಲಾಗುತ್ತದೆ. 129 ವರ್ಷಗಳಷ್ಟು ಹಳೆಯದಾದ ಸಿಲಿಂಡರ್​ ರೂಪದಲ್ಲಿರುವ ಈ ಸಾಧನ 30 ಮೈಕ್ರೋ ಗ್ರಾಂ. ಕಳೆದುಕೊಂಡಿದ್ದು, ಈ ಕಾರಣದಿಂದ ತೂಕಕ್ಕೆ ಹೊಸ ವ್ಯಾಖ್ಯಾನ ನೀಡಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾಪನದಲ್ಲಿ ತಿದ್ದುಪಡಿ ಹೇಗೆ?

ಮಾಪನದಲ್ಲಿ ತಿದ್ದುಪಡಿ ಹೇಗೆ?

ಈ ಹೊಸ ಅಳತೆ ಮಾಪನವನ್ನು ನಿರ್ಧರಿಸಲು ವಿಜ್ಞಾನಿಗಳು ವಿದ್ಯುತ್ ಪ್ರವಾಹಗಳಿಂದ ಉತ್ಪತಿಯಾಗುವ ಶಕ್ತಿಯನ್ನು ತೂಕದ ಘಟಕವನ್ನಾಗಿ ಬಳಸಲು ನಿರ್ಧರಿಸಿದ್ದಾರೆ. ಈ ಹೊಸ ವ್ಯಾಖ್ಯಾನಕ್ಕೆ ವಿಜ್ಞಾನಿಗಳು ಒಮ್ಮತದಿಂದ ಮತ ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ಹೊಸ ಸಾಧನವೊಂದು ನಿಖರ ಮೌಲ್ಯ ಪತ್ತೆಗೆ ನೆರವಾಗಲಿದೆ ಎಂದು ಹೇಳಲಾಗಿದೆ.

ಕಿಬಲ್ ಬ್ಯಾಲೆನ್ಸ್!

ಕಿಬಲ್ ಬ್ಯಾಲೆನ್ಸ್!

ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ್ ಆಂಡ್ ಟೆಕ್ನಾಲಜಿ ವಿಜ್ಞಾನಿಗಳು ಕಿಬಲ್ ಬ್ಯಾಲೆನ್ಸ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು ನಿಖರ ಮೌಲ್ಯ ಪತ್ತೆಗೆ ಇದು ನೆರವಾಗಲಿದೆ ಎಂದು ಹೇಳಲಾಗಿದೆ. ಇದರಿಂದ ಕಿಲೋ ಗ್ರಾಂ ಬದಲಾವಣೆ ನಂತರ ಕೆಲ ನೈಸರ್ಗಿಕ ವಸ್ತುಗಳನ್ನು ಆಧರಿಸಿ ಕೆಲ ಘಟಕಗಳನ್ನು ಮಾಪನ ಮಾಡಿ ಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಸಾಮಾನ್ಯರ ಮೇಲೆ ಪರಿಣಾಮವಿಲ್ಲ!

ಸಾಮಾನ್ಯರ ಮೇಲೆ ಪರಿಣಾಮವಿಲ್ಲ!

ಅಳತೆ ಮಾಪನ ಬದಲಾವಣೆಯಿಂದ ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರದಿಲ್ಲ . ಆದರೆ ವೈಜ್ಞಾನಿಕ ಪ್ರಯೋಗಗಳಲ್ಲಿ ಹೊಸ ಅಳತೆ ಮಾಪನ ಮಹತ್ತರ ಪಾತ್ರವಹಿಸಲಿದೆ ಎನ್ನಲಾಗಿದೆ. ಆವಿಜ್ಞಾನಿಗಳಿಗೆ ನಿಖರ ಮಾಪನದ ಅಗತ್ಯತೆ ಇರುವುದರಿಂದ ವೈಜ್ಞಾನಿಕ ಪ್ರಯೋಗಗಳಲ್ಲಿ ಈ ಹೊಸ ಅಳತೆ ಮಾಪನ ಮಹತ್ತರ ಪಾತ್ರವಹಿಸಲಿದೆ ಎಂದು ತಿಳಿದುಬಂದಿದೆ.

Best Mobiles in India

English summary
Currently, it is defined by the weight of a platinum-based ingot called "Le Grand K" which is locked away in a safe in Paris. to kn. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X