ಕೊಡಾಕ್‌ ಸಂಸ್ಥೆಯ CA ಸರಣಿಯ 4k ಸ್ಮಾರ್ಟ್‌ಟಿವಿ ಬಿಡುಗಡೆ!

|

ಟಿವಿ ಜಗತ್ತು ಇಂದು ಸಾಕಷ್ಟು ಕಲರ್‌ಪುಲ್‌ ಆಗಿದೆ. ಟೆಕ್‌ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಹಲವಾರು ಆಕರ್ಷಕ ಸ್ಮಾರ್ಟ್‌ಟಿವಿಗಳು ಲಬ್ಯವಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ 4k ರೆಸಲ್ಯೂಶನ್‌ ಹೊಂದಿರುವ ಬಿಗ್‌ ಸ್ಕ್ರೀನ್‌ ಟಿವಿಗಳಿಗೆ ಉತ್ತಮ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಗ್ರಾಹಕರಿಗೆ ಪರಿಚಯಿಸುತ್ತಲೇ ಇವೆ. ಇದರಲ್ಲಿ ಕೊಡಕ್‌ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಹೊಸ ಆವೃತ್ತಿಯ 4k ರೆಸಲ್ಯೂಶನ್‌ ಹೊಂದಿರುವ ಎಲ್‌ಇಡಿ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ನೊಯ್ಡಾ ಮೂಲದ ಕೊಡಕ್‌ ಸಂಸ್ಥೆ ತನ್ನ CA ಆವೃತ್ತಿಯ 4k LED ಸ್ಮಾರ್ಟ್‌ಟಿವಿಯನ್ನ ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಟಿವಿ 43ಇಂಚು, 50ಇಂಚು, 55ಇಂಚು, 65 ಇಂಚಿನ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಟಿವಿ ಉತ್ತಮ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದ್ದು, ಆಂಡ್ರಾಯ್ಡ್‌ TV9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್‌ ಅನ್ನು ಒಳಗೊಂಡಿದೆ. ಜೊತೆಗೆ HDR ಅನ್ನು ಒಳಗೊಂಡ ಕೆಲವೇ ಸ್ಮಾರ್ಟ್‌ಟಿವಿಗಳಲ್ಲಿ ಇದು ಕೂಡ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ವಿಶೇಷತೇಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಕೊಡಾಕ್

ಇನ್ನು ಕೊಡಾಕ್ ಸಂಸ್ಥೆಯ CA ಆವೃತ್ತಿಯ 4k ಎಲ್ಇಡಿ ಸ್ಮಾರ್ಟ್ ಟಿವಿಗಳು ಡಾಲ್ಬಿ ವಿಷನ್ ಅನ್ನು ಹೊಂದಿದ್ದು, ಇದು ಭಾರತದಲ್ಲಿ ಲಭ್ಯವಾಗುವ ಅತ್ಯುತ್ತಮ ಎಚ್‌ಡಿಆರ್ ಪ್ರಮಾಣೀಕರಣವನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಆಡಿಯೋಗಾಗಿ ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಡಿಟಿಎಸ್ ಟ್ರೂ ಸರೌಂಡ್‌ ಅನ್ನು ಬೆಂಬಲಿಸಲಿದೆ. 30W ರೇಟ್ ಸೌಂಡ್‌ ಔಟ್‌ಪುಟ್‌ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ವಿಡಿಯೋ / ಆಡಿಯೊ ಸ್ಟ್ರೀಮಿಂಗ್ ಮಾಡಲು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್ ಅನ್ನು ಬೆಂಬಲಿಸಲಿದೆ.

ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ ರಿಮೋಟ್‌ನಲ್ಲಿ ಹಾಟ್‌ಕೀಗಳನ್ನು ನೀಡಲಾಗಿದ್ದು, ಉತ್ತಮ ಫೀಚರ್ಸ್‌ಗಳನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಇತರೆ ಆಂಡ್ರಾಯ್ಡ್ ಟಿವಿ ಡಿವೈಸ್‌ಗಳಂತೆ ಕೊಡಾಕ್ ಸಿಎ ಆವೃತ್ತಿಯ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್ Chromecast ಅನ್ನು ಒಳಗೊಂಡಿದೆ. ಅಲ್ಲದೆ ಎಕ್ಸಾಟ್ರಾನಲ್‌ ಕನೆಕ್ಟಿವಿಟಿಗಾಗಿ ಮೂರು HDMI ಪೋರ್ಟ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ಬ್ರೈಟ್‌ನೇಶ್‌ 500 ನಿಟ್‌ಗಳಷ್ಟು ರೇಟ್‌ ಅನ್ನು ಹೊಂದಿದೆ. ಜೊತೆಗೆ 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 1.75GB RAM ಮತ್ತು 8GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೆ ಆಂಡ್ರಾಯ್ಡ್ ಟಿವಿಗಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ಹೆಚ್ಚುವರಿ ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್ ಟಿವಿ ಪ್ಲಾಟ್‌ಫಾರ್ಮ್‌ಗೆ ಡೌನ್‌ಲೋಡ್ ಮಾಡಬಹುದಾಗಿದೆ.

ಇಂಚಿನ

ಇನ್ನು ಕೊಡಾಕ್‌ನ ಈ ಸ್ಮಾರ್ಟ್‌ಟಿವಿಗಳಲ್ಲಿ 43 ಇಂಚಿನ ಕೊಡಾಕ್ CA ಅವೃತ್ತಿಯ ಟಿವಿಯ ಬೆಲೆ 23,999 ರೂ ಆಗಿದೆ. ಇನ್ನು 50 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆ 27,999.ರೂ,ಆಗಿದ್ದು. 55 ಇಂಚಿನ ಸ್ಮಾಟ್‌ಟಿವಿ 30,999ರೂ ಬೆಲೆಯನ್ನ ಹೊಂದಿದೆ. ಹಾಗೂ 65 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆ 49,999 ರೂ. ಆಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಮುಂದಿನ ದಿನಗಳಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ವಿಯು ಪ್ರೀಮಿಯಂ 4k ಆವೃತ್ತಿಯ ಸ್ಮಾರ್ಟ್‌ಟಿವಿಗೆ ಇದು ಪೈಪೋಟಿ ನೀಡಲಿದೆ ಎಮದು ಹೇಳಲಾಗ್ತಿದೆ.

ನೊಯ್ಡಾ

ಹಾಗೇ ನೋಡುವುದಾದರೆ ನೊಯ್ಡಾ ಮೂಲದ SPPL ಕಂಪೆನಿ ಕೊಡಾಕ್‌ ಬ್ರ್ಯಾಂಡ್‌ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದಕ್ಕಾಗಿ ಕೊಡಾಕ್‌ ಬ್ರ್ಯಾಂಡ್‌ ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪಂದ ಮಾಡಿಕೊಂಡಿದೆ. ಸದ್ಯ ನಾಲ್ಕು ವರ್ಷಗಳಿಂದ ಕೊಡಾಕ್ ಬ್ರಾಂಡೆಡ್ ಟಿವಿ ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಜೊತೆಗೆ ಥಾಮ್ಸನ್ ಬ್ರಾಂಡ್ ಅಡಿಯಲ್ಲಿಯೂ ಟಿವಿಗಳನ್ನ ಮಾರಾಟ ಮಾಡುತ್ತಿದೆ.

Most Read Articles
Best Mobiles in India

English summary
Kodak CA Series LED TVs With 4K and Dolby Vision Launched in India, Prices Start at Rs. 23,999.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X