ಹೊಸ ಹೆಸರಿನೊಂದಿಗೆ ಭಾರತಕ್ಕೆ ರೀ ಎಂಟ್ರಿ ಕೊಟ್ಟ ಪಬ್‌ಜಿ ಮೊಬೈಲ್‌ ಗೇಮ್‌!

|

ಭಾರತದಲ್ಲಿ ಪಬ್‌ಜಿ ಮೊಬೈಲ್‌ ಗೇಮ್‌ ಸೃಷ್ಟಿಸಿದ್ದ ಜನಪ್ರಿಯತೆ ಸಾಮಾನ್ಯದಲ್ಲ. ಯುವ ಜನತೆಯ ನೆಚ್ಚಿನ ಮೊಬೈಲ್‌ ಗೇಮ್‌ ಕಳೆದ ವರ್ಷ ದೇಶದ ಸಾರ್ವಭೌಮತೆಗೆ ದಕ್ಕೆ ಹೆಸರಿನಲ್ಲಿ ಕೇಂದ್ರ ಸರ್ಕಾರದಿಂದ ಬ್ಯಾನ್‌ ಮಾಡಲಾಗಿತ್ತು. ಇದೀಗ ಪಬ್‌ಜೆ ಗೇಮ್‌ ಮತ್ತೇ ಭಾರತಕ್ಕೆ ರೀ ಎಂಟ್ರಿ ನೀಡಿದೆ. ಆದರೆ ಈ ಬಾರಿ ಪಬ್‌ಜೆ ಎಂಬ ಹೆಸರಿನ ಬದಲಿಗೆ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರನ್ನು ಪಡೆದುಕೊಂಡಿದೆ. ಈ ಗೇಮ್‌ ಪಬ್‌ಜೆ ಮಾದರಿಯೇ ಆದರೂ ಇದೊಂದು ಹೊಸ ಗೇಮ್‌ ಆಗಿದ್ದು, ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಕ್ರಾಫ್ಟನ್ ಇಂಕ್ ಪ್ರಕಟಿಸಿದೆ.

ಪಬ್‌ಜಿ ಮೊಬೈಲ್‌ ಗೇಮ್‌

ಹೌದು, ಪಬ್‌ಜಿ ಮೊಬೈಲ್‌ ಗೇಮ್‌ ಈ ಭಾರಿ ಹೊಸ ಅವತಾರದಲ್ಲಿ ಹೊಸ ಹೆಸರಿನೊಂದಿಗೆ ಭಾರತಕ್ಕೆ ಎಂಟ್ರಿ ನೀಡಿದೆ. ಇನ್ನು PUBG ಮೊಬೈಲ್‌ನಂತೆಯೇ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಒಂದು ಫ್ರೀ-ಪ್ಲೇ-ಬ್ಯಾಟಲ್ ರಾಯಲ್ ಗೇಮ್‌ ಆಗಿದೆ. ಇದು ಈಗ COD: Mobile ವಿರುದ್ಧ ಸ್ಪರ್ಧಿಸುತ್ತದೆ. ಇದು ಫ್ರೀ ಗೇಮ್‌ ಆಗಿದ್ದರೂ, ಮೈಕ್ರೊ ಟ್ರಾನ್ಸ್‌ಕ್ಷನ್‌ಗಳನ್ನು ಹೊಂದಿರುತ್ತದೆ, ಇಲ್ಲಿ ಒಬ್ಬರು ಪಾವತಿ ಮಾಡುವ ಮೂಲಕ ಆಟದ ಸರಕುಗಳನ್ನು ಖರೀದಿಸಬಹುದು. ಇನ್ನುಳಿದಂತೆ ಬ್ಯಾಟಲ್‌ಗ್ರೌಂಡ್ಸ್‌ ಗೇಮ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬ್ಯಾಟಲ್‌ಗ್ರೌಂಡ್ಸ್

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವು ಪಬ್‌ಜಿ ಮೊಬೈಲ್ ಇಂಡಿಯಾದ ಮರುಕಳಿಸಿದ ಆವೃತ್ತಿಯಾಗಿದೆ. ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಭಾರತ ಸರ್ಕಾರ ನಿಗದಿಪಡಿಸಿದ ಎಲ್ಲಾ ನಿಯಮಗಳು ಮತ್ತು ನಿಯಮಗಳನ್ನು ಪಾಲಿಸುತ್ತದೆ ಎಂದು ಕ್ರಾಫ್ಟನ್ ಖಚಿತಪಡಿಸಿದ್ದಾರೆ. ಆಟಗಾರರಿಂದ ಸಂಗ್ರಹಿಸಿದ ಬಳಕೆದಾರ ಡೇಟಾ ಯಾವುದೇ ರೀತಿಯಲ್ಲೂ ಸೊರಿಕೆ ಆಗುವುದಿಲ್ಲ ಎಂದು ಹೇಳಿದೆ. ಆದರೆ ಈಗಿನಂತೆ, ಯಾವ ರೀತಿಯ ಡೇಟಾವನ್ನು ಸಂಗ್ರಹಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಬ್ಯಾಟಲ್‌ಗ್ರೌಂಡ್‌ ಗೇಮ್‌ ಮೊಬೈಲ್ ಇಂಡಿಯಾ ಡೌನ್‌ಲೋಡ್ ಮಾಡುವುದು ಹೇಗೆ?

ಬ್ಯಾಟಲ್‌ಗ್ರೌಂಡ್‌ ಗೇಮ್‌ ಮೊಬೈಲ್ ಇಂಡಿಯಾ ಡೌನ್‌ಲೋಡ್ ಮಾಡುವುದು ಹೇಗೆ?

ಬ್ಯಾಟಲ್‌ ಗ್ರೌಂಡ್‌ ಗೇಮ್‌ ಮೊಬೈಲ್‌ ಇಂಡಿಯಾ ಇನ್ನು ಬಿಡುಗಡೆ ಆಗಿಲ್ಲ. ಈ ಕುರಿತು ಸ್ಟುಡಿಯೋ ಇನ್ನೂ ಗೇಮ್‌ನ ಪ್ರೀ-ಆರ್ಡರ್‌ ದಿನಾಂಕವನ್ನು ಪ್ರಕಟಿಸಿಲ್ಲ. ಇದಾದ ನಂತರವಷ್ಟೇ ಈ ಹೊಸ ಗೇಮ್‌ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಇದಲ್ಲದೆ ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾದ ವಿವರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಮರುಹೆಸರಿಸಲ್ಪಟ್ಟ PUBG ಮೊಬೈಲ್ ಆಗಿರಲಿ ಅಥವಾ ಇದು ಭಾರತ ಕೇಂದ್ರಿತ ಕೆಲವು ವೈಶಿಷ್ಟ್ಯಗಳೊಂದಿಗೆ ಭಾರತಕ್ಕಾಗಿ ನಿರ್ಮಿಸಲಾದ ಹೊಸ ಗೇಮ್‌ ಆಗಿರಬಹುದಾ? ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಮೂಲಕ ಜಾಗತಿಕ PUBG ಮೊಬೈಲ್ ಪ್ಲೇಯರ್‌ಗಳ ವಿರುದ್ಧ ಆಡಬಹುದೇ? ಇಲ್ಲವೇ ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಆಟಗಾರರು ಮಾತ್ರ ಪರಸ್ಪರ ಆಡಬಹುದೇ ಎಂಬುದು ಸಹ ಸ್ಪಷ್ಟವಾಗಿಲ್ಲ.

ಬ್ಯಾಟಲ್‌ಗ್ರೌಂಡ್‌

ಸದ್ಯ ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಗೇಮ್‌ ಬಗ್ಗೆ, ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸಹ ಲೈವ್ ಆಗಿ ಹೋಗಿದ್ದು, ಮುಂದಿನ ಕೆಲವು ವಾರಗಳಲ್ಲಿ ಈ ಆಟವು ಶೀಘ್ರದಲ್ಲೇ ಲೈವ್ ಆಗಬಹುದು ಎಂದು ಸೂಚಿಸುತ್ತದೆ. ಇನ್ನು ಈಗಾಗಲೇ ಭಾರತದಲ್ಲಿ PUBG ಮೊಬೈಲ್ ನಿಷೇಧದಿಂದಾಗಿ, ಹೆಚ್ಚಿನ ಬಳಕೆದಾರರು COD: Mobile ಗೆ ಬದಲಾಯಿಸಿದ್ದಾರೆ. ಇದೀಗ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ಗೆ ಯುವಜನತೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರ ಅನ್ನೊದು ಶೀಘ್ರದಲ್ಲೇ ತಿಳಿಯಲಿದೆ.

Best Mobiles in India

English summary
Krafton has announced Battlegrounds Mobile India for Indian players.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X