Home
ಸುದ್ದಿಜಾಲ

Lakshadweep vs Maldives Row: ಗೂಗಲ್‌ ಸರ್ಚ್‌ ಟ್ರೆಂಡಿಂಗ್‌ನಲ್ಲಿ ದಾಖಲೆ ಸೃಷ್ಟಿಸಿದ ಲಕ್ಷದ್ವೀಪ!

ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಬೇಟಿ ನೀಡಿದ ನಂತರ ಮಾಲ್ಡಿವ್ಸ್‌ ದೇಶದ ಮಂತ್ರಿಗಳು ಮಾಡಿದ ಟೀಕೆ ಇದೀಗ ವ್ಯಾಪಕ ಟೀಕೆಗೆ ಒಳಗಾಗಿದೆ. ಅಷ್ಟೇ ಅಲ್ಲ ಭಾರತದಲ್ಲಿ ಮಾಲ್ಡೀವ್ಸ್‌ ವಿರುದ್ದ ಭಾರಿ ಅಭಿಯಾನ ಶುರುವಾಗಿದೆ. ಖ್ಯಾತಿ ಕ್ರಿಕೆಟಿಗರು ಸೇರಿದಂತೆ ಬಾಲಿವುಡ್‌ ತಾರೆಯರು ಕೂಡ ಮಾಲ್ಡೀವ್ಸ್‌ ವಿರುದ್ದ ಮುಗಿಬಿದ್ದಿದ್ದಾರೆ. ಅಲ್ಲದೆ 'ಬೈಕಾಟ್‌ ಮಾಲ್ಡೀವ್ಸ್‌' ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಹೌದು, ಪ್ರಧಾನಿ ನರೇಂದ ಮೋದಿ ವಿರುದ್ದ ಮಾಲ್ಡೀವ್ಸ್‌ ಸಚಿವರು ಟೀಕೆ ಮಾಡಿದ ನಂತರ ಬೈಕಾಟ್‌ ಮಾಲ್ಡೀವ್ಸ್‌ ಅಭಿಯಾನ ಜೋರಾಗಿದೆ. ಮಾಲ್ಡೀವ್ಸ್‌ ಬದಲಿಗೆ ಲಕ್ಷದ್ವೀಪವನ್ನು ಹೆಚ್ಚಿನ ಜನರು ಇದೀಗ ಸರ್ಚ್‌ ಮಾಡುತ್ತಿದ್ದು, ಗೂಗಲ್‌ನಲ್ಲಿ ಲಕ್ಷದ್ವೀಪ (lakshadweep) ಹೊಸ ದಾಖಲೆಯನ್ನು ನಿರ್ಮಿಸಿದೆ. ಮಾಲ್ಡೀವ್ಸ್‌ಗೆ ಹೋಗುವ ಬದಲು ಭಾರತದಲ್ಲಿ ಇರುವ ಹಲವು ಬೀಚ್‌ಗಳ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಲಾಗಿದೆ. ಅಷ್ಟಕ್ಕೂ ಗೂಗಲ್‌ನಲ್ಲಿ ಲಕ್ಷದ್ವೀಪ ಟ್ರೆಂಡಿಂಗ್‌ ಆಗಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Lakshadweep: ಗೂಗಲ್‌ ಸರ್ಚ್‌ ಟ್ರೆಂಡಿಂಗ್‌ನಲ್ಲಿ ದಾಖಲೆ ಸೃಷ್ಟಿಸಿದ ಲಕ್ಷದ್ವೀಪ!

ಭಾರತದ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಬೇಟಿ ನೀಡಿದ್ದನ್ನು ಮಾಲ್ಡೀವ್ಸ್‌ ಸಚಿವರು ಟೀಕೆ ಮಾಡಿದ್ದರು. ಈ ಒಂದು ಟೀಕೆ ಇದೀಗ ಲಕ್ಷದ್ವೀಪದ ಬಗ್ಗೆ ಇಡೀ ದೇಶವೇ ಕುತೂಹಲದಿಂದ ನೋಡುವಂತೆ ಮಾಡಿದೆ. ಮೋದಿ ಬೇಟಿಗೂ ಮೊದಲು ಲಕ್ಷದ್ವೀಪದ ಬಗ್ಗೆ ಹೆಚ್ಚು ಸರ್ಚ್‌ ನಡೆಸದ ಜನರು ಇದೀಗ ಗೂಗಲ್‌ನಲ್ಲಿ ಮುಗಿಬಿದ್ದು ಸರ್ಚ್‌ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಗೂಗಲ್‌ನಲ್ಲಿ ಲಕ್ಷದ್ವೀಪವನ್ನು ಸರ್ಚ್‌ ಮಾಡಿದವರ ಸಂಖ್ಯೆಯ ಗ್ರಾಫ್‌ ಏರುತ್ತಲೇ ಇದೆ. ಇದು ಗೂಗಲ್‌ ಸರ್ಚ್‌ನಲ್ಲಿ ಭಾರಿ ಟ್ರೆಂಡಿಂಗ್‌ ಕ್ರಿಯೆಟ್‌ ಮಾಡಿದೆ.

ಗೂಗಲ್‌ ಸರ್ಚ್‌ನಲ್ಲಿ ಹೊಸ ದಾಖಲೆ ಬರೆದ ಲಕ್ಷದ್ವೀಪ
ಈಗಾಗಲೇ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ವಿವಾದದಿಂದಾಗಿ ಸೊಶೀಯಲ್‌ ಮೀಡಿಯಾದಲ್ಲಿ 'ಬೈಕಾಟ್ ಮಾಲ್ಡೀವ್ಸ್' ಟ್ರೆಂಡಿಂಗ್ ಆಗಿದೆ. ಇದರ ನಡುವೆ ಲಕ್ಷದ್ವೀಪವನ್ನು ಸರ್ಚ್‌ ಮಾಡುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪ್ರಧಾನಿ ಮೋದಿ ಅವರು ದ್ವೀಪಕ್ಕೆ ಭೇಟಿ ನೀಡಿದ ನಂತರ ಲಕ್ಷದ್ವೀಪಕ್ಕೆ ಸಂಬಂಧಿಸಿದ ಹುಡುಕಾಟಗಳಲ್ಲಿ ಶೇಕಡಾ 3,400 ರಷ್ಟು ಏರಿಕೆಯಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಹೇಳಿದೆ.

ಹೀಗೆ ಗೂಗಲ್‌ ಸರ್ಚ್‌ನಲ್ಲಿ ಲಕ್ಷದ್ವೀಪದ ಬಗ್ಗೆ ಸರ್ಚ್‌ ಮಾಡುವವರ ಸಂಖ್ಯೆ ಅಧಿಕವಾಗುತ್ತದ್ದ ಹಾಗೇ ಭಾರತದ ಜನಪ್ರಿಯ ಪ್ರವಾಸೋದ್ಯಮ ವೆಬ್‌ಸೈಟ್ ಮೇಕ್‌ ಮೈ ಟ್ರಿಪ್‌ 'ಬೀಚ್ ಆಫ್ ಇಂಡಿಯಾ' ಅಭಿಯಾನವನ್ನು ಸಹ ಪ್ರಾರಂಭಿಸಿದೆ. ಕಳೆದ 3-4 ದಿನಗಳಲ್ಲಿ ಲಕ್ಷದ್ವೀಪಕ್ಕೆ ಹುಡುಕಾಟದಲ್ಲಿ ಶೇಕಡಾ 2,900 ರಷ್ಟು ಹೆಚ್ಚಳವಾಗಿದೆ ಎಂದು ಆನ್‌ಲೈನ್ ಟ್ರಾವೆಲ್ ಏಜೆನ್ಸಿ ಇಕ್ಸಿಗೋದ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ಅಲೋಕೆ ಬಾಜ್‌ಪೇಯ್ ಕೂಡ ತಮ್ಮ ಎಕ್ಸ್ (ಟ್ವಿಟರ್‌) ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ.

'ಬೈಕಾಟ್‌ ಮಾಲ್ಡೀವ್ಸ್‌' ಅಭಿಯಾನ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಬಿತ್ತು ಭಾರಿ ಪೆಟ್ಟು
ಮಾಲ್ಡೀವ್ಸ್‌ ಬೀಚ್‌ಗಳು ತೇಲುವ ವಿಲ್‌ಗಳಿಂದಾಗಿ ಪ್ರಖ್ಯಾತಿ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಇಲ್ಲಿಗೆ ದೇಶ ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಬೇಟಿ ನೀಡುತ್ತಾರೆ. ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಇದರಿಂದ ಹೆಚ್ಚಿನ ಆದಾಯ ಕೂಡ ಇದೆ. ಆದರೆ ಭಾರತದಲ್ಲಿ ಬೈಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾಗಿದ್ದೆ ತಡ ಮಾಲ್ಡೀವ್ಸ್‌ನಲ್ಲಿ ಹೋಟೆಲ್‌ ರೂಮ್‌ ಬುಕ್‌ ಮಾಡಿದ್ದವರೆಲ್ಲಾ ತಮ್ಮ ಬುಕಿಂಗ್‌ ಅನ್ನು ಕ್ಯಾನ್ಸಲ್‌ ಮಾಡಿದ್ದಾರೆ. ಅಲ್ಲದೆ ವಿಮಾನ ಟಿಕೆಟ್‌ ಕೂಡ ಕ್ಯಾನ್ಸಲ್‌ ಮಾಡಿಕೊಂಡಿದ್ದಾರೆ. ಇದೆಲ್ಲದರ ನೇರ ಪರಿಣಾಮ ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುವಂತೆ ಮಾಡಿದೆ.

ಇತ್ತೀಚಿನ ಅಧಿಕೃತ ಮಾಹಿತಿಯು ಕಳೆದ ಮೂರು ವರ್ಷಗಳಲ್ಲಿ ವಾರ್ಷಿಕವಾಗಿ 2 ಲಕ್ಷಕ್ಕೂ ಹೆಚ್ಚು ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023 ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ 2,09,198 ಕ್ಕೂ ಹೆಚ್ಚು ಪ್ರವಾಸಿಗರು ಭಾರತೀಯರು ಎಂದು ವರದಿಯಾಗಿದೆ.

Best Mobiles in India

English summary
Lakshadweep vs Maldives Row: Lakshadweep is set a new record on Google Searches after PM Modi's Visit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+