Subscribe to Gizbot

ಆಪಲ್‌ನಲ್ಲಿದ್ದ ಶಾಸ್ತ್ರಿ ಮೊಮ್ಮಗ ಕೇಜ್ರಿವಾಲ್‌ ಪಕ್ಷಕ್ಕೆ

Posted By:

ಲಾಲ್‌ ಬಹುದ್ದೂರ್‌ ಶಾಸ್ತ್ರಿ ಮೊಮ್ಮಗ ಆದರ್ಶ ಶಾಸ್ತ್ರಿ ಆಪಲ್‌ ಕಂಪೆನಿಯ ಒಂದು ಕೋಟಿ ರೂಪಾಯಿ ಸಂಬಳದ ನೌಕರಿಗೆ ರಾಜೀನಾಮೆ ನೀಡಿ ಆರವಿಂದ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.

ಆಪಲ್‌ ಕಂಪೆನಿಯ ಪಶ್ಚಿಮ ಭಾರತದ ಮಾರಾಟ ವಿಭಾಗದ ಮುಖ್ಯಸ್ಥರಾಗಿದ್ದ ಆದರ್ಶ ಶಾಸ್ತ್ರಿ(40)ಡಿಸೆಂಬರ್‌ ಮೊದಲ ವಾರದಲ್ಲೇ ಆಪಲ್‌ ಕಂಪೆನಿಗೆ ರಾಜೀನಾಮೆ ನೀಡಿದ್ದರು. 2011ರಲ್ಲಿ ಅಣ್ಣಾ ಹಜಾರೆಯ ಜನ ಲೋಕಪಾಲ್‌ ಹೋರಾಟಕ್ಕೆ ಬೆಂಬಲ ನೀಡಿದ್ದ ಆದರ್ಶ ಶಾಸ್ತ್ರಿ ಆಮ್‌ ಆದ್ಮಿ ಪಕ್ಷ ತತ್ವ ಸಿದ್ದಾಂತಗಳಿಗೆ ಮನಸೋತು ಈಗ ಸಮಾಜ ಸುಧಾರಣೆಯ ಕಾರ್ಯ‌ಕ್ಕೆ ಇಳಿಯುವುದಾಗಿ ಹೇಳಿದ್ದಾರೆ.

ತಂದೆ ಅನಿಲ್‌ ಶಾಸ್ತ್ರಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿದ್ದರೂ ಆ ಪಕ್ಷಕ್ಕೆ ಯಾಕೆ ಸೇರಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆದರ್ಶ ಶಾಸ್ತ್ರಿ, ಕಾಂಗ್ರೆಸ್‌ ಪಕ್ಷದ ಸಿದ್ದಾಂತಗಳು ನನಗೆ ಸರಿ ಕಾಣಲಿಲ್ಲ. ಆ ಕಾರಣಕ್ಕೆ ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ ಎಂದು ಹೇಳಿದ್ದಾರೆ.

ಮಗ ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ್ದಕ್ಕೆ ಅನಿಲ್‌ ಶಾಸ್ತ್ರಿ ಪ್ರತಿಕ್ರಿಯಿಸಿ, ನನ್ನ ಮೂರು ಮಕ್ಕಳಲ್ಲಿ ಯಾರಿಗೂ ರಾಜಕೀಯ ಸೇರುವ ಆಸಕ್ತಿಯನ್ನು ತೋರಿಸಿಲ್ಲ. ಆದರೆ ಆಮ್‌ ಆದ್ಮಿ ಪಕ್ಷ ಚಿಂತನೆಗಳು ಆದರ್ಶ್‌ ಶಾಸ್ತ್ರಿಗೆ ಇಷ್ಟವಾಗಿದೆ. ಮಗನನ್ನುಮುಂದೊಂದು ದಿನ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಲು ಮುಂದಾಗಿದ್ದೆ.ತನ್ನ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಆದರ್ಶ ಶಾಸ್ತ್ರಿ ಹೊಂದಿದ್ದು, ಆವನ ಈ ನಿರ್ಧಾವನ್ನು ಪ್ರಶ್ನಿಸಲು ಹೋಗುವುದಿಲ್ಲ ಎಂದು ಅನಿಲ್‌ ಶಾಸ್ತ್ರಿ ಹೇಳಿದ್ದಾರೆ.

ಎಎಪಿ ಪಕ್ಷ ಇದುವರೆಗೂ ಯಾವುದೇ ಜವಾಬ್ದಾರಿ ಆದರ್ಶ ಶಾಸ್ತ್ರಿಗೆ ನೀಡಿಲ್ಲ.ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ನಾನು ಸಿದ್ದ. ಮುಂದಿನ ಲೋಕಸಭಾ ಚುನಾವಣೆಗೂ ಸ್ಪರ್ಧಿಸಲು ಪಕ್ಷ ಹೇಳಿದರೆ ನಾನು ಅದಕ್ಕೂ ಸಿದ್ದನಿದ್ದೇನೆ ಎಂದು ಆದರ್ಶ ಶಾಸ್ತ್ರಿ ತಿಳಿಸಿದ್ದಾರೆ.

Drawing inspiration from my grandfather Lal Bahadur Shastri, I totally support and join the anti-corruption movement of Anna Hazare.
— Adarsh Shastri (@adarshshastri) August 19, 2011

With this massive defeat, witness the stage acting within Congress, save the chosen one or be doomed!! RG, wake up and recognise new india!!
— Adarsh Shastri (@adarshshastri) December 9, 2013

@arvindtm thanks for your wishes, will try and live up to my grandfather's name, we all feel his vacuum in these trying times
— Adarsh Shastri (@adarshshastri) December 27, 2013

Today Delhi has witnessed the beginning of a new era, transfer of power of the people to the people by the people, democracy has truly won!
— Adarsh Shastri (@adarshshastri) December 28, 2013

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more