Home
ಸುದ್ದಿಜಾಲ

ನಿಮ್ಮ ಲ್ಯಾಪ್‌ಟಾಪ್‌ ಚಾರ್ಜಿಂಗ್‌ ಆಗ್ತಾ ಇಲ್ಲವೇ? ಹಾಗಾದ್ರೆ ಈ ಸಮಸ್ಯೆ ಇರಬಹುದು ನೋಡಿ!

ಕೆಲವೊಮ್ಮೆ ನೀವು ಕಾರ್ಯನಿರ್ವಹಿಸುತ್ತಿರುವಾಗಲೇ ನಿಮ್ಮ ಲ್ಯಾಪ್‌ಟಾಪ್‌ಗಳು ಶಟ್‌ಡೌನ್‌ ಆಗಿ ಬಿಡುತ್ತವೆ. ಅಲ್ಲದೆ ಚಾರ್ಜಿಂಗ್‌ ಮಾಡಲು ಹೋದರೆ ಚಾರ್ಜಿಂಗ್‌ ಸಮಸ್ಯೆ ಕೂಡ ಕಾಣಿಸಿಕೊಳ್ಳಲಿದೆ. ಇಂತಹ ಸಮಯದಲ್ಲಿ ನೀವುಗಳು ಮಾಡಬೇಕಾದ ಕೆಲಸಕ್ಕೆ ಅಡ್ಡಿಯುಂಟಾಗಲಿದೆ. ಇಂತಹ ಸಮಯದಲ್ಲಿ ಏನು ಮಾಡುವುದು ಅನ್ನೊದು ತಿಳಿಯುವುದೇ ಇಲ್ಲ.

ಹೌದು, ಲ್ಯಾಪ್‌ಟಾಪ್‌ಗಳು ಸರಿಯಾಗಿ ಚಾರ್ಜ್‌ ಆಗದೇ ಇದ್ದಾಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಅದರಲ್ಲೂ ಮನೆಯಿಂದಲೇ ಕಾರ್ಯನಿರ್ವಹಿಸುವ ನೌಕರರಿಗೆ ಲ್ಯಾಪ್‌ಟಾಪ್‌ ಚಾರ್ಜಿಂಗ್‌ ವ್ಯವಸ್ಥೆ ಇಂದು ರೀತಿಯ ದುಸ್ವಪ್ನದಂತೆ ಕಾಡಲಿದೆ. ಹಾಗಾದ್ರೆ ಲ್ಯಾಪ್‌ಟಾಪ್‌ನಲ್ಲಿ ಚಾರ್ಜಿಂಗ್‌ ಸಮಸ್ಯೆ ಎದುರಾದರೇ ನೀವು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಲ್ಯಾಪ್‌ಟಾಪ್‌ ಚಾರ್ಜಿಂಗ್‌ ಆಗ್ತಾ ಇಲ್ಲವೇ? ಹಾಗಾದ್ರೆ ಈ ಸಮಸ್ಯೆ ಇರಬಹುದು!

ನೀವು ಕಾರ್ಯನಿರ್ವಹಿಸುತ್ತಿರುವ ಲ್ಯಾಪ್‌ಟಾಪ್‌ ಸರಿಯಾಗಿ ಚಾರ್ಜ್‌ ಆಗದೆ ಸಮಸ್ಯೆ ಎದುರಿಸುತ್ತಿದ್ದರೆ ನೀವು ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಲ್ಯಾಪ್‌ಟಾಪ್‌ ಸರ್ವಿಸ್‌ ಶೋರೂಂಗೆ ತೆಗೆದುಕೊಂಡು ಹೋಗುವ ಮೊದಲು ಸಮಸ್ಯೆಗೆ ಕಾರಣವನ್ನು ನೀವು ಕೂಡ ತಿಳಿಯಬಹುದಾಗಿದೆ. ಇದಕ್ಕಾಗಿ ನೀವು ಲ್ಯಾಪ್‌ಟಾಪ್‌ನಲ್ಲಿ ಚಾರ್ಜಿಗ್‌ ಸಮಸ್ಯೆ ತಿಳಿಯಲು ಪರಿಶೀಲಿಸಬೇಕಾದ ವಿಚಾರಗಳನ್ನು ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಮೊದಲು ಮೂಲಭೂತ ಅಂಶಗಳನ್ನು ಪರಿಶೀಲಿಸಿ

ಲ್ಯಾಪ್‌ಟಾಪ್‌ನಲ್ಲಿ ಚಾರ್ಜಿಂಗ್‌ ಸಮಸ್ಯೆ ಕಾಣಿಸಿಕೊಂಡಾಗ ಪವರ್ ಅಡಾಪ್ಟರ್ ಅನ್ನು ಪ್ಲಗ್ ಇನ್ ಮಾಡಿದ್ದೀರಾ ಮತ್ತು ಸ್ವಿಚ್ ಆನ್ ಮಾಡಿದ್ದೀರಾ ಎಂದು ಪರಿಶೀಲಿಸಿ. ಅಲ್ಲದೆ ನಿಮ್ಮ ಲ್ಯಾಪ್‌ಟಾಪ್‌ನ ಚಾರ್ಜಿಂಗ್ ಪೋರ್ಟ್‌ಗೆ ನೀವು ಚಾರ್ಜಿಂಗ್ ಪಿನ್ ಅನ್ನು ಪ್ಲಗ್ ಮಾಡಿದ್ದೀರಾ ಅಂತಾ ತಿಳಿದುಕೊಳ್ಳಬೇಕು.

ನಿಮ್ಮ ಲ್ಯಾಪ್‌ಟಾಪ್‌ ಚಾರ್ಜಿಂಗ್‌ ಆಗ್ತಾ ಇಲ್ಲವೇ? ಹಾಗಾದ್ರೆ ಈ ಸಮಸ್ಯೆ ಇರಬಹುದು!

ಚಾರ್ಜರ್ ಡ್ಯಾಮೇಜ್‌ ಅನ್ನು ಪರಿಶೀಲಿಸಿ

ನಿಮ್ಮ ಲ್ಯಾಪ್‌ಟಾಪ್‌ ಚಾರ್ಜಿಂಗ್‌ ಆಗದಿರುವಾಗ ಚಾರ್ಜರ್‌ ಡ್ಯಾಮೇಜ್‌ ಆಗಿದೆಯಾ ಅನ್ನೊದನ್ನ ಒಂದು ಭಾರಿ ಪರಿಶೀಲಿಸಿ. ಚಾರ್ಜರ್ ಅನ್ನು ಲ್ಯಾಪ್‌ಟಾಪ್ ಮತ್ತು ಪವರ್ ಔಟ್‌ಲೆಟ್‌ಗೆ ಸರಿಯಾಗಿ ಪ್ಲಗ್ ಮಾಡಲಾಗಿದೆಯೇ ಅನ್ನೊದನ್ನ ಖಚಿತಪಡಿಸಿಕೊಳ್ಳಿ. ಚಾರ್ಜರ್‌ ಕೇಬಲ್‌ ಡ್ಯಾಮೇಜ್‌ ಆಗಿದ್ದರೆ ಅದನ್ನು ಕೂಡಲೇ ಬದಲಾಯಿಸಿ.

ಚಾರ್ಜಿಂಗ್ ಪೋರ್ಟ್ ಅನ್ನು ಪರಿಶೀಲಿಸಿ

ಲ್ಯಾಪ್‌ಟಾಪ್ ಸಂಪೂರ್ಣವಾಗಿ ಚಾರ್ಜ್‌ ಆಗದೇ ಇರುವುದಕ್ಕೆ ಚಾರ್ಜಿಂಗ್ ಪೋರ್ಟ್ ಕೂಡ ಕಾರಣವಾಗಿರಬಹುದು. ಚಾರ್ಜಿಂಗ್‌ ಪೋರ್ಟ್‌ನಲ್ಲಿ ಕೊಳಕು ಇದೆಯೇ ಎಂದು ಪರಿಶೀಲಿಸಿ. ಇದಕ್ಕಾಗಿ ಮೃದುವಾದ ಬ್ರಷ್ ಅನ್ನು ಬಳಸಿಕೊಂಡು ಸರಿಯಾಗಿ ಸ್ವಚ್ಛಗೊಳಿಸಿ.

ನಿಮ್ಮ ಲ್ಯಾಪ್‌ಟಾಪ್‌ ಚಾರ್ಜಿಂಗ್‌ ಆಗ್ತಾ ಇಲ್ಲವೇ? ಹಾಗಾದ್ರೆ ಈ ಸಮಸ್ಯೆ ಇರಬಹುದು!

ಬ್ಯಾಟರಿ ಡೆಡ್‌ ಆಗಿದೆಯಾ ಚೆಕ್‌ಮಾಡಿ

ನಿಮ್ಮ ಲ್ಯಾಪ್‌ಟಾಪ್‌ನ ಬ್ಯಾಟರಿಯು ಚಾರ್ಜಿಂಗ್‌ ಹೆಚ್ಚು ಕ್ಷಣ ಉಳಿಯುತ್ತಿಲ್ಲ ಎಂದು ಅನಿಸಿದರೆ ನಿಮ್ಮ ಬ್ಯಾಟರಿ ಸಾಮರ್ಥ್ಯ ಕುಗ್ಗಿದೆ ಎಂದು ಅರ್ಥ. ಆದರಿಂದ ನಿಮ್ಮ ಲ್ಯಾಪ್‌ಟಾಪ್‌ ಬ್ಯಾಟರಿಯನ್ನು ಬದಲಾಯಿಸಬೇಕಾಗುತ್ತದೆ.

ಮಾಲ್ವೇರ್‌ ಸೇರಿಕೊಂಡಿದೆಯಾ ಅಂತಾ ಪರಿಶೀಲಿಸಿ

ಕೆಲವೊಮ್ಮ ಲ್ಯಾಪ್‌ಟಾಪ್‌ಗೆ ಮಾಲ್ವೇರ್ ಅಟ್ಯಾಕ್‌ ಆಗಿದ್ದರೂ ಕೂಡ ಬ್ಯಾಟರಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಆದರಿಂದ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಆಮಟಿವೈರಸ್‌ ಸ್ಕ್ಯಾನ್‌ ರನ್‌ ಮಾಡುವ ಮೂಲಕ ಮಾಲ್ವೇರ್‌ ಅನ್ನು ಪತ್ತೆ ಹಚ್ಚಿರಿ.

ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್‌ ಸಮಸ್ಯೆ ಎದುರಾಗಲು ಕಾರಣವೇನು?

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್‌ ಕನೆಕ್ಟಿವಿಟಿ ಕಾರ್ಯನಿರ್ವಹಿಸದಿದ್ದರೆ ಮೊದಲಿಗೆ ನಿಮ್ಮ ಲ್ಯಾಪ್‌ಟಾಪ್‌ ಅನ್ನು ರಿಸ್ಟಾರ್ಟ್‌ ಮಾಡಿ. ಇದರಿಂದ ನಿಮ್ಮ ವಿಂಡೋಸ್‌ ಲ್ಯಾಪ್‌ಟಾಪ್‌ನಲ್ಲಿ ಎಲ್ಲಾ ಡ್ರೈವರ್‌ಗಳು, ಹಾರ್ಡ್‌ವೇರ್‌ ರಿಬೂಟ್‌ ಆಗುತ್ತದೆ. ಇದರಿಂದ ಬ್ಲೂಟೂತ್‌ ಸಮಸ್ಯೆ ಕೂಡ ಬಗೆಹರಿಯುವ ಸಾಧ್ಯತೆಯಿರಲಿದೆ. ಬ್ಲೂಟೂತ್‌ ಸೇವೆಯು ಕೆಲವೊಮ್ಮೆ ಅಪ್ಡೇಟ್‌ ಕಾರಣಕ್ಕೂ ಕಾರ್ಯನಿರ್ವಹಿಸುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಲೂಟೂತ್‌ ತಯಾರಕರ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ಬೇಟಿ ನೀಡಿದ ನಂತರ ನಿಮ್ಮ ಲ್ಯಾಪ್‌ಟಾಪ್‌ಗಾಗಿ ಅಪ್ಡೇಟ್‌ ಬ್ಲೂಟೂತ್‌ ಡ್ರೈವರ್‌ಗಳನ್ನು ಡೌನ್‌ಲೋಡ್‌ ಮಾಡಬೇಕಾಗುತ್ತದೆ. ಹೊಸದಾಗಿ ಡೌನ್‌ಲೋಡ್‌ ಮಾಡಿದ ಬ್ಲೂಟೂತ್‌ ಡ್ರೈವರ್‌ಗಳನ್ನು ಇನ್‌ಸ್ಟಾಲ್‌ ಮಾಡುವ ಮೂಲಕ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್‌ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ.

Best Mobiles in India

English summary
Laptop charging problem? These things you can try: details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+