ಲಾವಾ A1 ಕಲರ್ಸ್‌ ಫೋನ್‌ ಬಿಡುಗಡೆ..! ಬೆಲೆ ಕೇವಲ 999.ರೂ!

|

ಇಂದು ಎಲ್ಲರ ಕೈನಲ್ಲೂ ಮೊಬೈಲ್‌ ರಿಂಗಣಿಸುತ್ತಿದೆ. ಮೊಬೈಲ್‌ ಇಲ್ಲದೆ ಹೊರಗಡೆ ಹೋಗೋದೆ ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ಜನ ಮೊಬೈಲ್‌ ಮೇಲೆ ವ್ಯಾಮೋಹವನ್ನ ಹೊಂದಿದ್ದಾರೆ. ಸದ್ಯ ಭಾರತದಂತ ರಾಷ್ಟ್ರದಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಬೇಸಿಕ್‌ ಕಿಪ್ಯಾಡ್‌ ಫೋನ್‌ಗಳು ಕೂಡ ಟೆಕ್‌ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗಾಗ್ಲೆ ಹಲವು ಕಂಪೆನಿಗಳು ಬಜೆಟ್‌ ಬೆಲೆಯ ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ, ಇವುಗಳಲ್ಲಿ ಲಾವಾ ಕಂಪೆನಿ ಕೂಡ ಒಂದಾಗಿದ್ದು, ಇದೀಗ ಮತ್ತೊಂದು ಹೊಸ ಮೊಬೈಲ್‌ ಅನ್ನು ಪರಿಚಯಿಸಿದೆ.

ಹೌದು

ಹೌದು, ಬಜೆಟ್‌ ಬೆಲೆಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಲಾವಾ ಕಂಪೆನಿ ತನ್ನ ಹೊಸ ಲಾವಾ A1 ಕಲರ್ಸ್‌ ಫೋನ್‌ ಅನ್ನು ಲಾಂಚ್‌ ಮಾಡಿದೆ. ಈ ಫೋನ್‌ ಬಹಳ ಕಲರ್‌ಫುಲ್‌ ಫೀಚರ್ಸ್‌ಗಳಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಆಕರ್ಷಕವಾಗಿ ಕಾಣುತ್ತಿದೆ. ಹೋಳಿ ಹಬ್ಬದ ಸಂಭ್ರಮದ ಅಂಗವಾಗಿ ಲಾವಾ ಕಂಪನಿಯು ಈ ಫೋನ್‌ ಅನ್ನು ಮೂರು "ಕ್ಯಾಂಡಿ ಕಲರ್ಸ್‌ಗಳಲ್ಲಿ" ಬಿಡುಗಡೆ ಮಾಡಿದೆ. ಅಲ್ಲದೆ ಲಾವಾ A1 ಕಲರ್ಸ್‌ ಫೋನ್‌ ಕೇವಲ 999 ರೂಗಳಿಗೆ ಲಭ್ಯವಾಗಲಿದೆ.

ಲಾವಾ A1 ಕಲರ್ಸ್‌ ಫೋನ್‌ ವಿನ್ಯಾಸ

ಲಾವಾ A1 ಕಲರ್ಸ್‌ ಫೋನ್‌ ವಿನ್ಯಾಸ

ಲಾವಾ A1 ಕಲರ್ಸ್‌ ಫೋನ್‌ ಪಾಲಿ-ಕಾರ್ಬೊನೇಟ್ ಬಾಡಿ ವಿನ್ಯಾಸವನ್ನ ಹೊಂದಿದೆ. ಅಲ್ಲದೆ ಇದು 1.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, TFT ಪ್ಯಾನೆಲ್‌ ಅನ್ನು ಹೊಂದಿದೆ. ಈ ಫೋನ್‌ 128 × 160 ಸ್ಕ್ರೀನ್‌ ಪಿಕ್ಸೆಲ್‌ ರೆಸಲ್ಯೂಶನ್‌ ಒಳಗೊಂಡಿದೆ. ಇದಲ್ಲದೆ ಈ ಫೋನ್‌ 0.3 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿದೆ. ಅಲ್ಲದೆ, ಕ್ಯಾಲ್ಕುಲೇಟರ್, ಸ್ಟಾಪ್‌ವಾಚ್, ಅಲಾರಾಂ ಮತ್ತು ಕ್ಯಾಲೆಂಡರ್ ಸೇರಿದಂತೆ ಕೆಲವು ಮೂಲ ಅಪ್ಲಿಕೇಶನ್‌ಗಳನ್ನು ಈ ಫೋನ್‌ ಹೊಂದಿದೆ.

ವಿಶೇಷತೆ

ವಿಶೇಷತೆ

ಲಾವಾ ಕಂಪನಿಯ ಈ ಫೀಚರ್ ಫೋನ್ ಸಾಫ್ಟ್‌ವೇರ್‌ನಲ್ಲಿ ಏಳು ಭಾಷೆಗಳಿಗೆ ಬೆಂಬಲವನ್ನು ನೀಡಲಾಗಿದೆ. ಈ ಭಾಷೆಗಳಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಪಂಜಾಬಿ ಮತ್ತು ಗುಜರಾತಿ ಭಾಷೆಗಳು ಸೇರಿದ್ದು, ಕಂಟ್ಯಾಕ್ಟ್‌ ಫೋಟೋಗಳು, ಐಕಾನ್ ಸಪೋರ್ಟ್‌, ಇನ್ಸಟ್ಯಾಂಟ್‌ ಟಾರ್ಚ್ ಮತ್ತು ಆಟೋ ಕಾಲ್‌ ರೆಕಾರ್ಡಿಂಗ್ ಫೀಚರ್ಸ್‌ಗಳನ್ನ ನೀಡಲಾಗಿದೆ. ಅಲ್ಲದೆ ಮೂರು ದಿನಗಳ ಬ್ಯಾಟರಿ ಬೆಂಬಲವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಫೋನ್‌ 800 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಅಪ್‌ ಹೊಂದಿದ್ದು, ಮೂರು ದಿನಗಳಿಗೂ ಅಧಿಕ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಬ್ಲೂಟೂತ್‌, ಅನ್ನು ಬೆಂಬಲಿಸಲಿದೆ. ಇನ್ನು ಈ ಮೊಬೈಲ್‌ ''ಮೇಕ್ ಇನ್ ಇಂಡಿಯಾ" ಅಡಿಯಲ್ಲಿ ಲಾವಾ ತಯಾರಿಸಿರುವ ಏಕೈಕ ಮೊಬೈಲ್ ಇದಾಗಿದೆ. ಇದಲ್ಲದೆ, "ಡಿಸೈನ್ ಇನ್ ಇಂಡಿಯಾ" ಅಡಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗಿರುವ ಕಲರ್‌ಫುಲ್‌ ಆಗಿ ವಿನ್ಯಾಸಗೊಳಿಸಲಾದ ಕೆಲವೇ ಡಿವೈಸ್‌ಗಳಲ್ಲಿ ಈ ಫೋನ್‌ ಕೂಡ ಒಂದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲಾವಾ A1 ಕಲರ್ಸ್‌ ಮೊಬೈಲ್‌ ಕೇವಲ 999 ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಭಾರತದ ಎಲ್ಲಾ ಪ್ರಮುಖ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಬ್ಯವಾಗಲಿದೆ. ಲೈಟ್‌ ಬ್ಲೂ, ಗ್ರೀನ್‌, ಮಾಗೆಂಟಾ ರೆಡ್‌ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
The company also highlighted that the Lava A1 Colors aims to celebrate the spirit of Holi with multiple colors. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X