Subscribe to Gizbot

ಇನ್ಮುಂದೆ 'ಲಾವ' ಮೊಬೈಲ್‌ಗಳ ಮೇಲೆ 2 ವರ್ಷ ಗ್ಯಾರೆಂಟಿ!!

Written By:

ತನ್ನ ಎಲ್ಲಾ ಸ್ಮಾರ್ಟ್‌ಫೋನ್‌ ಮತ್ತು ಫೀಚರ್ ಫೋನುಗಳಿಗೂ ಎರಡು ವರ್ಷಗಳ ಗ್ಯಾರಂಟಿ ನೀಡಿ, ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ 'ಲಾವ' ಕಂಪೆನಿ ಹೊಸದೊಂದು ಶಖೆಯನ್ನು ಆರಂಭಿಸಿದೆ.!! ಇನ್ನು ಭವಿಷ್ಯದ ಲಾವಾ ಉತ್ಪನ್ನಗಳು ಎರಡು ವರ್ಷ ಖಾತರಿ ಕರಾರುಗಳನ್ನು ಹೊಂದುತ್ತವೆ ಎಂದು ಕಂಪೆನಿಯು ಹೇಳಿದೆ.!!

ಇದೇ ಆಗಸ್ಟ್ 26 ರಿಂದ ಲಾವಾ ಮೊಬೈಲ್‌ಗಳನ್ನು ಖರೀದಿಸುವ ಜನರು ತಮ್ಮ ಫೋನ್‌ಗಳ ಮೇಲೆ ಎರಡು ವರ್ಷಗಳ ಗ್ಯಾರಂಟಿ ಪಡೆಯುತ್ತಾರೆ. ದೇಶಾದ್ಯಂತ 1000 ಕ್ಕೂ ಹೆಚ್ಚಿನ ಸೇವಾ ಕೇಂದ್ರಗಳನ್ನು ಲಾವಾ ಕಂಪೆನಿ ಹೊಂದಿದ್ದು, ಈ ಕೇಂದ್ರಗಳು ಮಾರಾಟದ ನಂತರದ ಹೆಚ್ಚಿನ ಸೇವೆಗೆ ಸಹಾಯ ಮಾಡುತ್ತದೆ ಎಂದು ಲಾವ ಕಂಪೆನಿ ತಿಳಿಸಿದೆ.!!

ಇನ್ಮುಂದೆ 'ಲಾವ' ಮೊಬೈಲ್‌ಗಳ ಮೇಲೆ 2 ವರ್ಷ ಗ್ಯಾರೆಂಟಿ!!

ಭಾರತೀಯ ಮೊಬೈಲ್ ಉದ್ಯಮದಲ್ಲಿ ಪ್ರಬಲ ಹೆಗ್ಗುರುತನ್ನು ಮೂಡಿಸಲು ನಾವು ಮುಂದುವರಿಸುತ್ತಿದ್ದೇವೆ. ವಿಶಾಲವಾದ ಬಂಡವಾಳದ ಮೇಲೆ 2 ವರ್ಷದ ಭರವಸೆ ಪ್ರಸ್ತಾಪವನ್ನು ಪ್ರಾರಂಭಿಸಿದ ಮೊದಲ ಭಾರತೀಯ ಮೊಬೈಲ್ ಫೋನ್ ಬ್ರಾಂಡ್ 'ಲಾವ' ಎಂದು ಕಂಪೆನಿ ಮುಖ್ಯಸ್ಥರಾದ ಹಿರಿಯ ವಿ.ಪಿ. ಲಾವಾ ಇಂಟರ್ನ್ಯಾಷನಲ್ ಹೇಳಿದ್ದಾರೆ.!!

ಇನ್ಮುಂದೆ 'ಲಾವ' ಮೊಬೈಲ್‌ಗಳ ಮೇಲೆ 2 ವರ್ಷ ಗ್ಯಾರೆಂಟಿ!!

ಮೇಕ್ ಇನ್ ಇಂಡಿಯಾ' ಭಾಗವಾಗಿ ಲಾವಾ ಎರಡು ವರ್ಷದ ಗ್ಯಾರಂಟಿ ಕರಾರುಗಳನ್ನು ಹೊರತಂದಿದ್ದಾಗಿ ಅವರು ಹೇಳಿದ್ದು, ತನ್ನ ಗ್ರಾಹಕರಿಗೆ ತಮ್ಮ ಸಾಧನಗಳ ಗುಣಮಟ್ಟದ ಬಗ್ಗೆ ಪರಿಚಯಿಸಲು ಈ ಕಾರ್ಯ ಮಾಡುವುದಾಗಿ ಅವರು ತಿಳಿಸಿದ್ದಾರೆ.!!ಜೊತೆಗೆ, ಲಾವಾ ಭಾರತದ ಮೊದಲ ಮೊಬೈಲ್ ಫೋನ್ ಡಿಸೈನ್ ಸೆಂಟರ್ ಸ್ಥಾಪಿಸಲು ಅಪ್ ಸಜ್ಜಾಗುತ್ತಿದೆ ಎನ್ನುವ ಮಾಹಿತಿ ಸಹ ಹೊರಬಿದ್ದಿದೆ.!!

English summary
Lava announces 2-year warranty for smartphones and features phones
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot