Home
ಸುದ್ದಿಜಾಲ

ಲಾವಾ ಬ್ಲೇಜ್‌ 2 ಬಿಡುಗಡೆಗೆ ದಿನಾಂಕ ನಿಗದಿ! ಬದಲಾಗುತ್ತಾ ಲಾವಾ ಬ್ರ್ಯಾಂಡ್‌ನ ಲಕ್‌!

ಭಾರತದ ಸ್ವದೇಶಿ ಮೊಬೈಲ್‌ ಬ್ರ್ಯಾಂಡ್‌ ಲಾವಾ ಕಂಪೆನಿ ಇತ್ತೀಚಿಗೆ ಸಾಕಷ್ಟು ಆಕ್ಟಿವ್‌ ಆಗಿದೆ. ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದೆ. ಅದರಂತೆ ಇದೀಗ ತನ್ನ ಬಹು ನಿರೀಕ್ಷಿತ ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲು ಮುಂದಾಗಿದೆ.

ಹೌದು, ಲಾವಾ ಬ್ಲೇಜ್‌ 2 ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್ 18 ರಂದು ಮಧ್ಯಾಹ್ನ 12 ಗಂಟೆಗೆ ಲಾಂಚ್‌ ಆಗಲಿದೆ ಎಂದು ಲಾವಾ ಕಂಪೆನಿ ಅಧಿಕೃತ ಘೋಷಣೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಿದೆ ಎಂದು ಹೇಳಿಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಬಹಿರಂಗಪಡಿಸಿದೆ. ಹಾಗಾದ್ರೆ ಲಾವಾ ಬ್ಲೇಜ್‌ 2 ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾವಾ ಬ್ಲೇಜ್‌ 2 ಬಿಡುಗಡೆಗೆ ದಿನಾಂಕ ನಿಗದಿ! ಬದಲಾಗುತ್ತಾ ಲಾವಾ ಬ್ರ್ಯಾಂಡ್‌ನ ಲಕ್

ಲಾವಾ ಬ್ಲೇಜ್‌ 2 ಫೀಚರ್ಸ್‌ ನಿರೀಕ್ಷೆ ಏನು?

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ 6.5-ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಗಿದ್ದು, 90Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಪಂಚ್‌ ಹೋಲ್‌ ವಿನ್ಯಾಸವನ್ನು ಹೊಂದಿದೆ. ಜೊತೆಗೆ 2.5D ಕರ್ವ್ಡ್ ಸ್ಕ್ರೀನ್ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ.

ಲಾವಾ ಬ್ಲೇಜ್‌ 2 ಪ್ರೊಸೆಸರ್‌ ಯಾವುದು?

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ಯುನಿಸೋಕ್‌ T616 ಚಿಪ್‌ಸೆಟ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದು 5GB ವರೆಗೆ ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಲಾವಾ ಬ್ಲೇಜ್‌ 2 ಬಿಡುಗಡೆಗೆ ದಿನಾಂಕ ನಿಗದಿ! ಬದಲಾಗುತ್ತಾ ಲಾವಾ ಬ್ರ್ಯಾಂಡ್‌ನ ಲಕ್

ಲಾವಾ ಬ್ಲೇಜ್‌ 2 ಕ್ಯಾಮೆರಾ ಸೆಟ್‌ಅಪ್‌

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಿಕೊಂಡಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪೋರ್ಟ್ರೇಟ್, ನೈಟ್, AI, ಪ್ರೊ, ಬ್ಯೂಟಿ, ಸ್ಲೋ ಮೋಷನ್, ಆಡಿಯೋ ನೋಟ್, ಟೈಮ್‌ಲ್ಯಾಪ್ಸ್, ಫಿಲ್ಟರ್‌ಗಳು, HDR ಮತ್ತು ಪನೋರಮಾದಂತಹ ಆಯ್ಕೆಗಳನ್ನು ನೀಡುವುದಾಗಿ ಹೇಳಿದೆ.

ಲಾವಾ ಬ್ಲೇಜ್‌ 2 ಬ್ಯಾಟರಿ ಬ್ಯಾಕ್‌ಅಪ್‌

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಯುಎಸ್‌ಬಿ ಸಿ ಪೋರ್ಟ್‌, ಬ್ಲೂಟೂತ್‌, ವೈಫೈ ಹಾಗೂ 3.5mm ಆಡಿಯೋ ಜ್ಯಾಕ್ ಅನ್ನು ಹೊಂದಿರಲಿದೆ.

ಲಾವಾ ಬ್ಲೇಜ್‌ 2 ಬಿಡುಗಡೆಗೆ ದಿನಾಂಕ ನಿಗದಿ! ಬದಲಾಗುತ್ತಾ ಲಾವಾ ಬ್ರ್ಯಾಂಡ್‌ನ ಲಕ್

ಭಾರತದಲ್ಲಿ ಲಾವಾ ಬ್ಲೇಜ್‌ 2 ಬೆಲೆ ಎಷ್ಟು?

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್ 18 ರಂದು ಮಧ್ಯಾಹ್ನ 12 ಗಂಟೆಗೆ ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಬರುವ ಪವರ್‌ ಫುಲ್‌ ಫೋನ್‌ ಎನ್ನಲಾಗಿದ್ದು, ಕೇವಲ 8,999ರೂ. ಬೆಲೆಯಲ್ಲಿ ಬರಲಿದೆ. ಇನ್ನು ಲಾವಾ ಬ್ಲೇಜ್ 2 ಸ್ಮಾರ್ಟ್‌ಫೋನ್‌ ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಆರೆಂಜ್‌ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Lava Blaze 2 will arrive with a 6.5-inch IPS LCD panel that offers an HD+ resolution and a 90Hz refresh rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+