Home
ಸುದ್ದಿಜಾಲ

8GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 33% ಡಿಸ್ಕೌಂಟ್‌! ಅತ್ಯಾಕರ್ಷಕ ಕ್ಯಾಮೆರಾ!

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸ್ವದೇಶಿ ನಿರ್ಮಿತ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿವೆ. ಈ ಮೂಲಕ ಸ್ವದೇಶಿ ಬ್ರ್ಯಾಂಡ್‌ಗಳು ಮತ್ತೆ ಮೈಕೊಡವಿ ಎದಿದ್ದು, ವಿಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಕೈ ಸೇರುತ್ತಿವೆ. ಇದೇ ಹಾದಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಲಾವಾ ಬ್ಲೇಜ್‌ 5G ಫೋನ್‌ ಇದೀಗ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯವಾಗುತ್ತಿದೆ.

ಹೌದು, ಸ್ವದೇಶಿ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಲಾವಾ ಸಂಸ್ಥೆಯ ಲಾವಾ ಬ್ಲೇಜ್‌ 5G ಫೋನ್‌ ಭಾರಿ ರಿಯಾಯಿತಿಯಲ್ಲಿ ದೊರೆಯುತ್ತಿದೆ. ಅಮೆಜಾನ್‌ ತಾಣದಲ್ಲಿ ಬಿಗ್‌ ಆಫರ್‌ ಪಡೆದುಕೊಂಡಿರುವ ಈ ಸ್ಮಾರ್ಟ್‌ಫೋನ್‌ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್‌ಸಿಟಿ 700 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ನಲ್ಲಿ ಲಭ್ಯವಿರುವ ಡಿಸ್ಕೌಂಟ್‌ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

8GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 33% ಡಿಸ್ಕೌಂಟ್‌!

ಲಾವ ಬ್ಲೇಜ್ 5G ಮೇಲೆ ಬಿಗ್‌ ಆಫರ್‌
ಲಾವಾ ಬ್ಲೇಜ್‌ 5G ಫೋನ್‌ ಅನ್ನು ಅಮೆಜಾನ್‌ನಲ್ಲಿ 16,499ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಇದೀಗ 33% ಡಿಸ್ಕೌಂಟ್‌ ಆಫರ್‌ ನೀಡಲಾಗ್ತಿದೆ. ಆದರಿಂದ ಇದರ ಬೆಲೆ ಇದೀಗ ಕೇವಲ 11,049ರೂ ಆಗಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ ಅನ್ನು ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಇದರ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ. ಇದು 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆಗೆ ಅನ್ವಯಿಸಲಿದೆ. ಈ ಸ್ಮಾರ್ಟ್‌ಫೋನ್‌ ಗ್ಲಾಸ್ ಬ್ಲೂ ಕಲರ್‌ ಆಯ್ಕೆಯಲ್ಲಿ ದೊರೆಯಲಿದೆ.

ಲಾವಾ ಬ್ಲೇಜ್‌ 5G ಫೀಚರ್ಸ್‌ ಹೇಗಿದೆ?
ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ 6.51 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದು 269ppi ಪಿಕ್ಸೆಲ್ ಸಾಂದ್ರತೆಯನ್ನು ಬೆಂಬಲಿಸುತ್ತದೆ. ಇದಲ್ಲದೆ ಈ ಡಿಸ್ಪಲ್ ವೈಡ್ವೈನ್ L1 ಬೆಂಬಲವನ್ನು ಹೊಂದಿದೆ. ಡಿಸ್‌ಪ್ಲೇಯು 90Hz ರಿಫ್ರೆಶ್‌ ರೇಟ್‌ ಬೆಂಬಲಿಸುತ್ತದೆ.

8GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 33% ಡಿಸ್ಕೌಂಟ್‌!

ಲಾವಾ ಬ್ಲೇಜ್‌ 5G ಪ್ರೊಸೆಸರ್‌ ಯಾವುದು?
ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ 7nm ಮೀಡಿಯಾ ಟೆಕ್ ಡೈಮೆನ್‌ಸಿಟಿ 700 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 GB RAM ಮತ್ತು 128GB ಇನ್‌ಬಿಲ್ಟ್‌ ಸ್ಟೋರೇಜ್‌ ಇದೆ. ಇದಲ್ಲದೆ RAM ಅನ್ನು ವಾಸ್ತವಿಕವಾಗಿ 3GB ವರೆಗೆ ವಿಸ್ತರಿಸಬಹುದಾಗಿದ್ದರೆ, ಒಟ್ಟು 7 GB ವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಲು ಅವಕಾಶ ಒದಗಿಸಲಾಗಿದೆ.

ಲಾವಾ ಬ್ಲೇಜ್‌ 5G ಕ್ಯಾಮೆರಾ ಸೆಟಪ್‌ ಏನಿದೆ?
ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ AI- ಬೆಂಬಲಿತ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, ಬ್ಯೂಟಿ, ಫಿಲ್ಟರ್‌ಗಳು, GIF, HDR, ಮ್ಯಾಕ್ರೋ, ಮೋಷನ್, ನೈಟ್, ಪನೋರಮಾ, ಪೋರ್ಟ್ರೇಟ್, ಸ್ಲೋ ಮೋಷನ್ ಟೈಮ್‌ಲ್ಯಾಪ್ಸ್ ಮತ್ತು UHD ವಿಭಿನ್ನ ಫೀಚರ್‌ಗಳನ್ನು ಒಳಗೊಂಡಿದೆ.

8GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 33% ಡಿಸ್ಕೌಂಟ್‌!

ಲಾವಾ ಬ್ಲೇಜ್‌ 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 50 ಗಂಟೆಗಳ ಟಾಕ್ಟೈಮ್ ಮತ್ತು 25 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂಟ್ V5.1, GLONASS, 3.5mm ಆಡಿಯೋ ಜ್ಯಾಕ್, Wi-Fi 802.11 b/g/n/ac, GPRS ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Lava Blaze 5G received Massive Discount offer in Amazon: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+