Home
ಸುದ್ದಿಜಾಲ

ನಾಳೆ Lava Bold 5G ಲಾಂಚ್; 64MP ಕ್ಯಾಮೆರಾ.. 5000mAh ಬ್ಯಾಟರಿ.. ಅಗ್ಗದ ಬೆಲೆ!

ನಿಮಗೆ ಕಡಿಮೆ ಬೆಲೆಗೆ ಬ್ರಾಂಡೆಡ್ ಮೊಬೈಲ್ ಮತ್ತು ಹೊಸ ಫೋನ್‌ಗಳನ್ನು ಖರೀದಿಸಲು ಬಯಸಿದ್ದೀರಾ? ಹಾಗಿದ್ರೆ, ಈ ತಿಂಗಳಲ್ಲಿ (ಏಪ್ರಿಲ್) ಹಲವು ಉತ್ತಮ ಮೊಬೈಲ್‌ಗಳು ಬಿಡುಗಡೆಯಾಗುತ್ತಿವೆ. ಈ ಸಾಲಿನಲ್ಲಿ ಲಾವಾ ಕಂಪನಿಯ ಹೆಸರು ಸಹ ಇದೆ. ಹೌದು, ಲಾವಾ ತನ್ನ ಅಭಿಮಾನಿಗಳಿಗಾಗಿ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಲಾವಾ ಬೋಲ್ಡ್ 5G (LAVA Bold 5G) ಹೆಸರಿನೊಂದಿಗೆ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬಿಡುಗಡೆ ಬಳಿಕ ಇದು ಅಮೆಜಾನ್ ಮೂಲಕ ಮಾರಾಟವಾಗಲಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ, ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಲಾವಾ ಬೋಲ್ಡ್ 5G ಮೊಬೈಲ್ ಹಲವು ವಿಶೇಷತೆಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಅಗ್ಗದ ದರವೆಂಬ ಕಾರಣಕ್ಕೆ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿರಲಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಲಭ್ಯವಿರಲಿದೆ. ಈ ಮೊಬೈಲ್ 6.67 ಇಂಚಿನ 3D ಕರ್ವ್ಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಹಾಗೆಯೇ 8GB RAM ಮತ್ತು 128GB ಸ್ಟೋರೇಜ್, 5000mAh ಬ್ಯಾಟರಿ ಸೇರಿದಂತೆ ಅನೇಕ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ನಾಳೆ Lava Bold 5G ಲಾಂಚ್; 64MP ಕ್ಯಾಮೆರಾ.. 5000mAh ಬ್ಯಾಟರಿ.. ಅಗ್ಗದ ಬೆಲೆ!

ಲಾವಾ ಬೋಲ್ಡ್ 5G ಬಿಡುಗಡೆ ದಿನಾಂಕ

ಕಂಪನಿಯು ತನ್ನ ಹೊಚ್ಚ ಹೊಸ ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ ಅನ್ನು ಇದೇ ಏಪ್ರಿಲ್ 8 ರಂದು (ನಾಳೆ) ಅಧಿಕೃತವಾಗಿ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. ಈ ಅಗ್ಗದ ಲಾವಾ ಬೋಲ್ಡ್ 5G ಫೋನಿನ ಮಾರಾಟ ಈ ದಿನದಿಂದಲೇ ಪ್ರಾರಂಭವಾಗಲಿದೆ. ಈ ಫೋನನ್ನು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಖರೀದಿಸಬಹುದು. ಏಪ್ರಿಲ್ 8 ರಂದು ಮಧ್ಯಾಹ್ನ 12 ಗಂಟೆಯಿಂದ ಇದು ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಈ ಮೊಬೈಲ್ ಸಫೈರ್ ಬ್ಲೂ ಬಣ್ಣದಲ್ಲಿ ಬರುತ್ತದೆ.

ಲಾವಾ ಬೋಲ್ಡ್ 5G ಬೆಲೆ (ನಿರೀಕ್ಷಿತ)

ಕಂಪನಿಯು ಈ ಲಾವಾ 5G ಫೋನನ್ನು ಅಗ್ಗದ ಬಜೆಟ್ ವಿಭಾಗದಲ್ಲಿ ಬಿಡುಗಡೆ ಮಾಡಲಿದೆ. ಈ ಫೋನಿನ ಆರಂಭಿಕ ಬೆಲೆ 11,000 ರೂ.ಗಿಂತ ಕಡಿಮೆ ಇರಲಿದೆ. ವರದಿಯ ಪ್ರಕಾರ, ಈ ಅಗ್ಗದ 5G ಫೋನನ್ನು 10,499 ರೂ.ಗೆ ಮಾರಾಟ ಮಾಡಲಾಗುವುದು. ಇದು ರಿಯಾಯಿತಿಯನ್ನು ಒಳಗೊಂಡಂತೆ, ಫೋನಿನ ಬಿಡುಗಡೆ ದರವಾಗಿದೆ. ಇದು 4GB RAM ಹೊಂದಿರುವ ಫೋನಿನ ಬೆಲೆ ಆಗಿರಲಿದೆ.

ಲಾವಾ ಬೋಲ್ಡ್ 5G ವೈಶಿಷ್ಟ್ಯಗಳು

ಲಾವಾ ಬೋಲ್ಡ್ 5G ಡಿಸ್ಪ್ಲೇ

ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಇದು ಪಂಚ್ ಹೋಲ್ ಶೈಲಿಯ 3D ಕರ್ವ್ಡ್ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಹೊಂದಿದೆ.

ಲಾವಾ ಬೋಲ್ಡ್ 5G ಪ್ರೊಸೆಸರ್

ಲಾವಾ ಬೋಲ್ಡ್ 5G ಮೊಬೈಲ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಲಾವಾ 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡಲಿದೆ. ಈ ಮೊಬೈಲ್ ಆಂಡ್ರಾಯ್ಡ್ 16 ನಲ್ಲಿಯೂ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 4GB RAM, 6GB RAM ಮತ್ತು 8GB RAM ಆಯ್ಕೆಗಳೊಂದಿಗೆ ಬರುತ್ತದೆ.

ನಾಳೆ Lava Bold 5G ಲಾಂಚ್; 64MP ಕ್ಯಾಮೆರಾ.. 5000mAh ಬ್ಯಾಟರಿ.. ಅಗ್ಗದ ಬೆಲೆ!

ಲಾವಾ ಬೋಲ್ಡ್ 5G ಕ್ಯಾಮೆರಾ

ಲಾವಾ ಬೋಲ್ಡ್ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 64 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಹಾಗೆಯೇ ಎಐ ಲೆನ್ಸ್ ಕೂಡ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಅಳವಡಿಸಲಾಗಿದೆ.

ಲಾವಾ ಬೋಲ್ಡ್ 5G ಬ್ಯಾಟರಿ ಬ್ಯಾಕಪ್

ಲಾವಾ ಬೋಲ್ಡ್ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯ ಬ್ಯಾಟರಿ ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ತಂತ್ರಜ್ಞಾನ ನೀಡಲಾಗುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಜಿಪಿಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರಲಿದೆ.

Best Mobiles in India

English summary
Lava Bold 5G is launching in India on April 8 for Rs 10,499: Expected Price, specifications, Features and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+