Home
ಸುದ್ದಿಜಾಲ

ಹೊಸ ಪವರ್‌ಫುಲ್‌ ವೇರಿಯೆಂಟ್‌ ಆಯ್ಕೆಯಲ್ಲಿ ಎಂಟ್ರಿ ಕೊಟ್ಟ ಲಾವಾ ಬ್ಲೇಜ್ 5G!

ದೇಶಿ ಬ್ರ್ಯಾಂಡ್‌ ಲಾವಾ ಕಂಪೆನಿ ಕಳೆದ ವರ್ಷ ತನ್ನ ಮೊದಲ 5G ಸ್ಮಾರ್ಟ್‌ಫೋನ್‌ ಲಾವಾ ಬ್ಲೇಜ್ 5Gಯನ್ನು ಬಿಡುಗಡೆ ಮಾಡಿತ್ತು. ಸದ್ಯ ಇದೀಗ ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ನ 6GB RAM ಮತ್ತು 128GB ಸ್ಟೋರೇಜ್ ಮಾದರಿಯನ್ನು ಬಿಡುಗಡೆ ಮಾಡಿದೆ. ಇದು ಎಂಟ್ರಿ ಲೆವೆಲ್‌ನಲ್ಲಿ ವೇಗದ ಇಂಟರ್‌ನೆಟ್‌ ಬಳಸಲು ಅವಕಾಶ ನೀಡುವ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೊಸ ಪವರ್‌ಫುಲ್‌ ವೇರಿಯೆಂಟ್‌ ಆಯ್ಕೆಯಲ್ಲಿ ಎಂಟ್ರಿ ಕೊಟ್ಟ ಲಾವಾ ಬ್ಲೇಜ್ 5G!

ಹೌದು, ಲಾವಾ ಕಂಪೆನಿ ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್‌ನ ಹೊಸ ವೇರಿಯೆಂಟ್‌ ಆಯ್ಕೆಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 3GB ಹೆಚ್ಚುವರಿ ವರ್ಚುವಲ್ RAM ನೊಂದಿಗೆ ಬರುತ್ತದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲಾವಾ ಬ್ಲೇಜ್ 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್‌ 6.5-ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 81.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದ್ದು, 20:9 ರಚನೆಯ ಅನುಪಾತವನ್ನು ಪಡೆದಿದೆ. ಇದು ಫ್ಲಾಟ್ ಎಡ್ಜ್ ವಿನ್ಯಾಸ ಮತ್ತು ವಾಟರ್ ಡ್ರಾಪ್-ನಾಚ್ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಲಾವಾ ಬ್ಲೇಜ್ 5G ಪ್ರೊಸೆಸರ್‌ ಯಾವುದು?

ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 12 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಹೊಸ ಪವರ್‌ಫುಲ್‌ ವೇರಿಯೆಂಟ್‌ ಆಯ್ಕೆಯಲ್ಲಿ ಎಂಟ್ರಿ ಕೊಟ್ಟ ಲಾವಾ ಬ್ಲೇಜ್ 5G!

ಲಾವಾ ಬ್ಲೇಜ್‌ 5G ಕ್ಯಾಮೆರಾ ಸೆಟ್‌ಅಪ್‌

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಿಂಭಾಗದ ಕ್ಯಾಮೆರಾ ಮೂಲಕ 2K ವೀಡಿಯೊ ರೆಕಾರ್ಡಿಂಗ್ ಅನ್ನು ಮಾಡಬಹುದಾಗಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಲಾವಾ ಬ್ಲೇಜ್‌ 5G ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 50 ಗಂಟೆಗಳ ಟಾಕ್‌ಟೈಮ್ ಮತ್ತು 25 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್ V5.1, GLONASS, 3.5mm ಆಡಿಯೋ ಜ್ಯಾಕ್, Wi-Fi 802.11 b/g/n/ac, GPRS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ.

ಹೊಸ ಪವರ್‌ಫುಲ್‌ ವೇರಿಯೆಂಟ್‌ ಆಯ್ಕೆಯಲ್ಲಿ ಎಂಟ್ರಿ ಕೊಟ್ಟ ಲಾವಾ ಬ್ಲೇಜ್ 5G!

ಲಾವಾ ಬ್ಲೇಜ್‌ 5G 6GB RAM ಬೆಲೆ ಎಷ್ಟು?

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ 6GB RAM ಆಯ್ಕೆಯು 11,999 ರೂ. ಬೆಲೆಯನ್ನು ಹೊಂದಿದೆ. ಆದರೆ ಲಾಂಚ್‌ ಆಫರ್‌ನಲ್ಲಿ 6GB RAM ಆಯ್ಕೆಯನ್ನು 11,499ರೂ.ಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ. ಇದನ್ನು ನೀವು ಲಾವಾ ಇ-ಸ್ಟೋರ್‌ ಹಾಗೂ ಅಮೆಜಾನ್‌.ಇನ್‌ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Lava has now launched a new and 'powerful' variant of its Lava Blaze 5G with 6GB RAM and 128GB storage model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+