Home
ಸುದ್ದಿಜಾಲ

ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಲಾವಾ ಬ್ಲೇಜ್‌ 2 5G! ಇದರ ವಿನ್ಯಾಸ ಹೇಗಿರಲಿದೆ ಗೊತ್ತಾ?

ಸ್ವದೇಶಿ ಬ್ರ್ಯಾಂಡ್‌ ಲಾವಾ ಕಂಪೆನಿ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ತನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಟೆಕ್‌ ವಲಯದಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ತನ್ನ ಹೊಸ ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸಿದ್ದು, ಟೀಸರ್‌ ಕೂಡ ಲಾಂಚ್‌ ಮಾಡಿದೆ. ಅದರಂತೆ ಲಾವಾ ಬ್ಲೇಜ್‌ 2 5G ಸ್ನೀಕ್‌ ಪೀಕ್‌ ಅನ್ನು ಒದಗಿಸಿದೆ.

ಹೌದು, ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ನ ವಿಶೇಷತೆಗಳು ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ ಲಾವಾ ಬ್ಲೇಜ್‌ 2 4Gಗೆ ಹೋಲಿಸಿದರೆ 5G ರೂಪಾಂತರವು ಕೆಲವು ಬದಲಾವಣೆಗಳನ್ನು ಹೊಂದಿದೆ ಎಂದು ತೋರಿಸಲಾಗಿದೆ. ಹಾಗಾದ್ರೆ ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಲಾವಾ ಬ್ಲೇಜ್‌ 2 5G! ವಿನ್ಯಾಸ ಹೇಗಿರಲಿದೆ ಗೊತ್ತಾ?

ಲಾವಾ ಬ್ಲೇಜ್‌ 2 5G ರೂಪಾಂತರವು ಕೆಲವು ಬದಲಾವಣೆಗಳನ್ನು ಹೊಂದಿದೆ ಎಂದು ಟೀಸರ್‌ನಲ್ಲಿ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ನ ರಿಯರ್‌ ಪ್ಯಾನಲ್‌ ವಿನ್ಯಾಸವು ಕೂಡ ವಿಶೇಷವಾಗಿ ತೋರಿಸಲಾಗಿದೆ. ಇದು ಈಗ ಕೇಂದ್ರ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಜೊತೆಗೆ LED ಫ್ಲ್ಯಾಷ್ ಅನ್ನು ಒಳಗೊಂಡಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ನ ಹಿಂಭಾಗದ ಅಂಚಿನಲ್ಲಿ ಎರಡು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

ಲಾವಾ ಬ್ಲೇಜ್‌ 2 5G ಫೀಚರ್ಸ್‌ ನಿರೀಕ್ಷೆ ಏನು?
ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿರಬಹುದು. ಇನ್ನು ಡಿಸ್‌ಪ್ಲೇ 90 Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಡಿಸ್‌ಪ್ಲೇ ಪಂಚ್‌ ಹೋಲ್‌ ವಿನ್ಯಾಸವನ್ನು ಹೊಂದಿದೆ. ಜೊತೆಗೆ 2.5D ಕರ್ವ್ಡ್ ಸ್ಕ್ರೀನ್ ಅನ್ನು ಬೆಂಬಲಿಸಲಿದೆ

ಲಾವಾ ಬ್ಲೇಜ್‌ 2 5G ಪ್ರೊಸೆಸರ್‌ ಏನಿರಬಹುದು?
ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ವೇಗದೊಂದಿಗೆ ಬರಲಿದೆ. ಜೊತೆಗೆ Mali G57 GPU ಸಪೋರ್ಟ್‌ ಅನ್ನು ಪಡೆಯಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರುವ ನಿರೀಕ್ಷೆಯಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ.

ಲಾವಾ ಬ್ಲೇಜ್‌ 2 5G ಕ್ಯಾಮೆರಾ ಸೆಟ್‌ಅಪ್‌ ಏನಿರಲಿದೆ?
ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಬಹುದು. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದರೊಂದಿಗೆ LED ಫ್ಲ್ಯಾಷ್ ಅನ್ನು ಹೊಂದಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿರುವ ನಿರೀಕ್ಷೆಯಿದೆ.

ಲಾವಾ ಬ್ಲೇಜ್‌ 2 5G ಬ್ಯಾಟರಿ ಮತ್ತು ಇತರೆ ಫೀಚರ್ಸ್‌
ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಈ ಫೋನ್‌ USB ಟೈಪ್-C ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0 ಮತ್ತು ವೈಫೈ, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿರಲಿದೆ.

ಲಾವಾ ಬ್ಲೇಜ್‌ 2 5G ಬೆಲೆ ಮತ್ತು ಲಭ್ಯತೆ
ಲಾವಾ ಬ್ಲೇಜ್‌ 2 5G ಸ್ಮಾರ್ಟ್‌ಫೋನ್‌ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ.

Best Mobiles in India

English summary
Lava has provided a sneak peek of the Lava Blaze 2 5G
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+