ಲಾವಾ ಸಂಸ್ಥೆಯಿಂದ ಜನೆವರಿ 7 ರಂದು ಹೊಸ ಸ್ಮಾರ್ಟ್‌ಫೋನ್‌ಗಳ ಅನಾವರಣ!

|

ಲಾವಾ ಮೊಬೈಲ್‌ ಕಂಪನಿಯು ಈಗಾಗಲೇ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗುರುತಿಸಿಕೊಂಡಿದೆ. ಇತ್ತೀಚಿಗಷ್ಟೆ ಲಾವಾ ಸಂಸ್ಥೆಯು ಹೊಸದಾಗಿ ಲಾವಾ BeU-ಬಿಯು ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಗ್ರಾಹಕರ ಗಮನ ಸೆಳೆದಿದೆ. ಇದರ ಬೆನ್ನಲೆ ಇದೀಗ ಸಂಸ್ಥೆಯು ಹೊಸ ವರ್ಷದ ಆರಂಭದಲ್ಲಿ ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.

ಮೊಬೈಲ್

ಹೌದು, ಲಾವಾ ಮೊಬೈಲ್ ಸಂಸ್ಥೆಯು ಇದೇ ಜನೆವರಿ 7, 2021ರಂದು ಹೊಸ ಸ್ಮಾರ್ಟ್‌ಫೋನ್‌ ಲಾಂಚ್ ಮಾಡುವುದಾಗಿ ಹೇಳಿಕೊಂಡಿದೆ. ಲಾವಾ BeU ಫೋನ್ ಅನಾವರಣ ಮಾಡುವಾಗ ಜನವರಿ ಮೊದಲ ವಾರದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಹೇಳಿದೆ. ಮುಂಬರುವ ಹೊಸ ಲಾವಾ ಸ್ಮಾರ್ಟ್‌ಫೋನ್‌ಗಳು ಮಧ್ಯ ಶ್ರೇಣಿಯ ವಿಭಾಗ ಮತ್ತು ಬಜೆಟ್ ವಿಭಾಗಗಳನ್ನು ಕೇಂದ್ರಿಕರಿಸಿರಲಿವೆ ಎನ್ನಲಾಗಿದೆ. ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಲಾಂಚ್

ಲಾವಾ ಕಂಪನಿಯು ಹೊಸದಾಗಿ ಲಾಂಚ್ ಮಾಡುವ ಸ್ಮಾರ್ಟ್‌ಫೋನ್‌ಗಳ ಅಂದಾಜು 5,000ರೂ. ಗಳ ಪ್ರೈಸ್‌ನಿಂದ ಸುಮಾರು 15,000ರೂ.ಗಳ ನಡುವೆ ಇರಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಐದು ಹೊಸ ಸ್ಮಾರ್ಟ್‌ಫೋನ್‌ಗಳ ಅನಾವರಣ ಮಾಡುವ ನಿರೀಖ್ಷೆಗಳಿದ್ದು, ಅದರೊಂದಿಗೆ ಸ್ಮಾರ್ಟ್ ಫಿಟ್‌ನೆಸ್-ಟ್ರ್ಯಾಕಿಂಗ್ ಬ್ಯಾಂಡ್ ಅನ್ನು ಸಹ ತರಲಿದೆ. ಇನ್ನು ಹೊಸ ಡಿವೈಸ್‌ಗಳ ಜೊತೆಗೆ BeU ಫೋನ್ ಮತ್ತು ನೂತನ ಫೋನ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್ ಚಾನೆಲ್‌ಗಳ ಮೂಲಕ ಲಭ್ಯವಾಗಲಿದೆ.

ಬಿಯು

ಲಾವಾ ಬಿಯು ಸ್ಮಾರ್ಟ್‌ಫೋನ್‌ ಹೊಸ ಯುನಿಸಾಕ್ SC9863A ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಲಾವಾ ಬಿಯು ಫೋನ್ 6.08 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 19.5: 9 ಆಕಾರ ಅನುಪಾತದೊಂದಿಗೆ ಪಡೆದಿದೆ. ಹಾಗೆಯೇ 2.5 ಡಿ ಬಾಗಿದ ಗಾಜಿನಿಂದ ರಕ್ಷಿಸಲಾಗಿದೆ ಮತ್ತು ವಾಟರ್‌ಡ್ರಾಪ್-ಶೈಲಿಯ ದರ್ಜೆಯನ್ನು ಹೊಂದಿದೆ.

ಡ್ಯುಯಲ್

ಲಾವಾ ಬಿಯು ಫೋನ್ 1.6GHz2 ಆಕ್ಟಾ-ಕೋರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 2 ಜಿಬಿ RAM, 32 ಜಿಬಿ ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳು ಹೊಂದಿದ್ದು, 4060mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಈ ಫೋನ್ ಆಂಡ್ರಾಯ್ಡ್ 10 (ಗೋ ಎಡಿಷನ್) ಓಎಸ್‌ ನಲ್ಲಿ ಚಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, 13 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಎಫ್ / 1.85 ಲೆನ್ಸ್ ಜೊತೆಗೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಹೊಂದಿದೆ. ಫೋನ್ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿದೆ, ಎಫ್ / 2.2 ಲೆನ್ಸ್ ಹೊಂದಿದೆ.

Most Read Articles
Best Mobiles in India

English summary
Lava recently launched the Lava BeU smartphone with a Unisoc processor and Android 10 Go Edition software.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X