ಹೊಸ ಪೇಮೆಂಟ್‌ ಆಪ್‌ ಪರಿಚಯಿಸಿದ ಲಾವಾ!..ಇಂಟರ್‌ನೆಟ್‌ ಅಗತ್ಯವಿಲ್ಲ!

|

ಭಾರತೀಯ ಸ್ಮಾರ್ಟ್‌ಫೋನ್‌ ತಯಾರಕ ಲಾವಾ ಸಂಸ್ಥೆ ಇದೀಗ ಮೊಬೈಲ್‌ ಪೇಮೆಂಟ್‌ ಸೇವೆಯನ್ನ ಪ್ರಾರಂಭಿಸಿದೆ. ಈ ಮೂಲಕ ಡಿಜಿಟಲ್‌ ಪೇಮೆಂಟ್‌ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದಕ್ಕಾಗಿ ಲಾವಾ ಪೇ ಆಪ್‌ ಅನ್ನು ಪರಿಚಯಿಸಲಾಗಿದ್ದು, ಇದು ಇಂಟರ್‌ನೆಟ್‌ ಇಲ್ಲದೆಯೂ ಮೊಬೈಲ್‌ ಪೇಮೆಂಟ್‌ಗಳನ್ನ ಮಾಡಬಹುದಾಗಿದೆ. ಅಲ್ಲದೆ ಈ ಅಪ್ಲಿಕೇಶನ್ ಹೆಚ್ಚಿನ ಮಟ್ಟದ ಭದ್ರತಾ ಫೀಚರ್ಸ್‌ಗಳನ್ನ ಒಳಗೊಂಡಿರಲಿದೆ ಎಂದು ಲಾವಾ ಕಂಪನಿ ಹೇಳಿದೆ.

ಹೌದು

ಹೌದು, ಲಾವಾ ಕಂಪೆನಿ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿತ್ತು. ಆದರೆ ಇದೀಗ ಲಾವಾ ಮೊಬೈಲ್‌ ಪೇಮೆಂಟ್‌ ಕ್ಷೇತ್ರಕ್ಕೆ ಎಂಟ್ರಿ ನೀಡಿದೆ. ಈ ಮೂಲಕ ತನ್ನದೇ ಆದ ಲಾವಾ ಪೇ ಆಪ್‌ ಅನ್ನು ಪರಿಚಯಿಸಿದೆ. ಈ ಆಪ್‌ನ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರು UPI ಮೂಲಕ ಹಣಕಾಸು ವರ್ಗಾವಣೆ ಮಾಡುವುದಕ್ಕೆ ಅವಕಾಶವನ್ನ ಕಲ್ಪಿಸಿಲಾಗಿದೆ. ಇದಕ್ಕಾಗಿ ಯಾವುದೇ ಇಂಟರ್‌ನೆಟ್‌ ಅವಶ್ಯಕತೆ ಇಲ್ಲ ಎಂದು ಹೇಳಿರುವುದರಿಂದ ದೇಶದ ಲಕ್ಷಾಂತರ ಜನರಿಗೆ ಉಪಯುಕ್ತವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಲಾವಾ ಪೇ ಆಪ್‌ ವಿಶೇಷತೆಯೇನು?

ಲಾವಾ ಪೇ ಆಪ್‌ ವಿಶೇಷತೆಯೇನು?

ಲಾವಾ ಪೇ ಆಪ್‌ ಇಂಟರ್‌ನೆಟ್‌ ಇಲ್ಲದೆಯೆ ಕಾರ್ಯನಿರ್ವಹಿಸುವುದೇ ಇದರ ವಿಶೇಷತೆ ಆಗಿದ್ದು. ಲಾವಾ ಪೇ ಆಪ್‌ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಫೀಚರ್‌ಫೋನ್‌ಗಳಲ್ಲೂ ಲಾವಾ ಪೇ ಆಪ್‌ ಇರಲಿದೆ. ಇನ್ನು ಈಗಾಗ್ಲೆ ಲಾವಾ ಸ್ಮಾರ್ಟ್‌ಫೋನ್‌ ಬಳಸುತ್ತಿರುವ ಬಳಕೆದಾರರು ದೇಶದಲ್ಲಿ ಲಭ್ಯವಿರುವ 800ಕ್ಕೂ ಅಧಿಕ ಲಾವಾ ಸರ್ವಿಸ್‌ ಸೆಂಟರ್‌ಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಪ್ರಸ್ತುತ ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಅಪ್ಲಿಕೇಶನ್ ಸಿಂಪಲ್‌ ಯೂಸರ್‌ ಇಂಟರ್‌ ಪೇಸ್‌ ಪ್ಲ್ಯಾನ್‌ ಆಧಾರದಲ್ಲಿ ರೂಪಿಸಲಾಗಿದ್ದು, ಇದನ್ನು ಫೀಚರ್ ಫೋನ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಕಾರ್ಯನಿರ್ವಹಣೆ ಹೇಗೆ

ಕಾರ್ಯನಿರ್ವಹಣೆ ಹೇಗೆ

ಇನ್ನು ಈ ಅಪ್ಲಿಕೇಶನ್‌ನಿಂದ ಹಣವನ್ನು ಕಳುಹಿಸಲು ಅಥವಾ ಪಾವತಿಸಲು, ಲಾವಾ ಫೀಚರ್ ಫೋನ್ ಬಳಕೆದಾರರು ಅಪ್ಲಿಕೇಶನ್‌ಗೆ ಹೋಗಿ ರಿಸೀವರ್‌ನ ಫೋನ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಮುಂದಿನ ಹಂತದಲ್ಲಿ ಅವರು ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಬೇಕು, ನಂತರ ನಾಲ್ಕು ಅಂಕಿಯ ಯುಪಿಐ ಕೋಡ್ ಅನ್ನು ನಮೂದಿಸಬೇಕು. ಆಗ ಸುಲಭವಾಗಿ ಹಣಕಾಸು ವರ್ಗಾವಣೆ ಆಗಲಿದೆ. ಹಣಕಾಸು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ನೋಟಿಫೀಕೇಶನ್‌ ಆಲರ್ಟ್‌ ಬರಲಿದೆ.

ಉಪಯೋಗವೇನು.?

ಉಪಯೋಗವೇನು.?

ಈಗಾಗ್ಲೇ ಭಾರತದಲ್ಲಿ ಸರಿಸುಮಾರು 500 ಮಿಲಿಯನ್ ಗೂ ಹೆಚ್ಚಿನ ಜನರು ಇನ್ನೂ ಕೂಡ ಫೀಚರ್ ಫೋನ್ ಅನ್ನು ಬಳಸುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಫೋನ್‌ ಬಳಕೆದಾರರು ಇಂಟರ್ನೆಟ್ ಕನೆಕ್ಟಿವಿಟಿ ಪ್ರಾಬ್ಲಂನಿಂದ ಡಿಜಿಟಲ್‌ ಪೇಮೆಂಟ್‌ ಮಾಡುವುದಕ್ಕೆ ಮುಂದಾಗಿಲ್ಲ. ಬದಲಿಗೆ ಈಗಲೂ ಕೂಡ ಆಫ್‌ಲೈನ್ ಹಣಕಾಸು ವ್ಯವಹಾರವನ್ನು ಮಾಡುತ್ತಿದ್ದಾರೆ. ಇಂತಹ ಸಮಸ್ಯೆಯನ್ನ ಪರಿಹರಿಸಬೇಕು ಎಂಬ ಉದ್ದೇಶದಿಂದ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೆ ಡಿಜಿಟಲ್ ಪೇಮೆಂಟ್‌ ಮಾಡಲು ಲಾವಾ ಪೇ ಆಪ್‌ ಪರಿಚಯಿಸಲಾಗಿದೆ ಎಂದು ಲಾವಾ ಪ್ರೊಡಕ್ಟ್‌ ಹೆಡ್‌ ತೇಜಿಂದರ್ ಸಿಂಗ್ ಹೇಳಿದ್ದಾರೆ.

ಡಿಜಿಟಲ್‌ ಇಂಡಿಯಾ ಪರಿಕಲ್ಪನೆ!

ಇದಲ್ಲದೆ ಲಾವಾ ಪೇ ಅಪ್ಲಿಕೇಶನ್ ಅನ್ನು ನಿಮ್ಮ ಬ್ಯಾಂಕ್‌ ಖಾತೆಯ ಜೊತೆಗೆ ಕಾನ್ಫಿಗರ್ ಮಾಡಲು ಮತ್ತು ಟ್ರಾನ್ಸಾಕ್ಶನ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ತಮ್ಮ ಖಾತೆಯಿರುವ ಬ್ಯಾಂಕ್‌ಗೆ ಭೇಟಿ ನೀಡಬಹುದಾಗಿದೆ. ಇನ್ನು ಈ ಲಾವಾ ಪೇ ಆಪ್‌ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯಲ್ಲಿ ಮೂಡಿಬರುತ್ತಿದ್ದು, ಇದು ಜನರಲ್ಲಿ ಡಿಜಿಟಲ್‌ ಪೇಮೆಂಟ್‌ ಅನ್ನು ಉತ್ತೇಜಿಸುವ ಕೆಲಸ ಮಾಡಲಿದೆ ಎಂದು ಕಂಪೆನಿ ಅಭಿಪ್ರಾಯ ಪಟ್ಟಿದೆ. ಒಟ್ಟಾರೆ ಇಂಟರ್‌ನೆಟ್‌ ಇಲ್ಲದೆ ಹಣಕಾಸು ವರ್ಗಾವಣೆ ಮಾಡುವ ಅವಕಾಶವನ್ನ ಲಾವಾ ಪೇ ಕಲ್ಪಿಸಿರುವುದರಿಂದ ಈ ಆಪ್‌ ಮುಂದಿನ ದಿನಗಳಲ್ಲಿ ಸಾಕಷ್ಟು ಸೌಂಡ್‌ ಮಾಡೋ ಲಕ್ಷಣ ಎದ್ದು ಕಾಣ್ತಿದೆ.

Most Read Articles
Best Mobiles in India

English summary
Lava Pay is a mobile payment solution designed specifically for feature phones. It works without internet. Here is how.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X