ಭಾರತದ ಮಾರುಕಟ್ಟೆಯಲ್ಲಿ ಲಾವಾ ಪಲ್ಸ್‌ ಫೀಚರ್‌ ಫೋನ್‌ ಬಿಡುಗಡೆ!

|

ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿರುವ ಲಾವಾ ಕಂಪೆನಿ ತನ್ನ ಮತ್ತೊಂದು ಹೊಸ ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಹಾರ್ಟ್‌ಬಿಟ್‌ ಸೆನ್ಸಾರ್‌, ರಕ್ತದೊತ್ತಡ ಮಾನಿಟರ್‌ ಮಾಡುವ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಇದಕ್ಕೆ ಲಾವಾ ಪಲ್ಸ್ ಫೀಚರ್ ಫೋನ್ ಎಂದು ಹೆಸರಿಸಲಾಗಿದೆ. ಇದರಲ್ಲಿ ಇಂಟರ್‌ಬಿಲ್ಟ್‌ ಹಾರ್ಟ್‌ಬಿಟ್‌ ಮತ್ತು ರಕ್ತದೊತ್ತಡ ಮಾನಿಟರ್‌ ಅನ್ನು ನೀಡಲಾಗಿದೆ. ಅಲ್ಲದೆ ಈ ರೀತಿಯ ಸಾಮರ್ಥ್ಯವನ್ನು ಒಳಗೊಂಡಿರುವ ಮೊದಲ ಫೀಚರ್ಸ್‌ ಫೋನ್ ಇದಾಗಿದೆ.

ಲಾವಾ

ಹೌದು, ಲಾವಾ ಕಂಪೆನಿ ಪರಿಚಯಿಸಿರುವ ಲಾವಾ ಪಲ್ಸ್ ಫೋನ್‌ ಬಳಕೆದಾರರಿಗೆ ತಮ್ಮ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಅಳೆಯಲು ಅನುಮತಿಸುತ್ತದೆ. ಇನ್ನು ಈ ಫೋನ್ 1,800mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು ಆರು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಅಲ್ಲದೆ ಇದರಲ್ಲಿ ಡಯಲರ್‌ನಲ್ಲಿ ನಂಬರ್ ಕೀಯನ್ನು ಪ್ರತಿ ಬಾರಿ ಒತ್ತಿದಾಗ ನಂಬರ್‌ ಟಾಕರ್ ಕ್ರಿಯಾತ್ಮಕತೆಯನ್ನು ಇದು ಒಳಗೊಂಡಿದೆ. ಇನ್ನುಳಿದಂತೆ ಈ ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾವಾ ಪಲ್ಸ್

ಇನ್ನು ಲಾವಾ ಪಲ್ಸ್ 240x320 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 2.4-ಇಂಚಿನ QVGA ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡ್ಯುಯಲ್ ಸಿಮ್ ಸ್ಲಾಟ್‌ಗಳನ್ನು ಬೆಂಬಲಿಸಲಿದೆ. ಇನ್ನು ಈ ಡಿವೈಸ್‌ 32MB RAM ಮತ್ತು 32GB ವರೆಗೆ ವಿಸ್ತರಿಸಬಹುದಾದ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಫೀಚರ್ ಫೋನ್‌ನಲ್ಲಿ 100SMS ಗಳನ್ನು ಮತ್ತು ಫೋನ್‌ಬುಕ್‌ನಲ್ಲಿ 500 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡಲು ಸಾದ್ಯವಾಗಲಿದೆ.

ಲಾವಾ ಪಲ್ಸ್ ಫೋನ್

ಇದಲ್ಲದೆ ಲಾವಾ ಪಲ್ಸ್ ಫೋನ್‌ 1,800mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 6 ದಿನಗಳನ್ನ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-ಯುಎಸ್‌ಬಿ, 3.5mm ಆಡಿಯೊ ಜ್ಯಾಕ್, ವಾಯರ್‌ಲೆಸ್ fm ರೇಡಿಯೋ ಮತ್ತು ಲಾವಾ ಪಲ್ಸ್ ಆಟೋ ಕಾಲ್ ರೆಕಾರ್ಡಿಂಗ್ ಫೀಚರ್ಸ್‌ ಅನ್ನು ಹೊಂದಿದೆ. ಇನ್ನು ಬಳಕೆದಾರರಿಗೆ ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ, ತೆಲುಗು, ಗುಜರಾತಿ, ಮತ್ತು ಪಂಜಾಬಿ ಸೇರಿದಂತೆ ಏಳು ಭಾಷೆಗಳನ್ನು ಟೈಪ್ ಮಾಡಲು ಅನುವು ಮಾಡಿಕೊಡುತ್ತದೆ.

ಲಾವಾ ಪಲ್ಸ್

ಅಲ್ಲದೆ ಲಾವಾ ಪಲ್ಸ್ ಹಾರ್ಟ್‌ಬಿಟ್‌ ಸೆನ್ಸಾರ್‌ ಮತ್ತು ರಕ್ತದೊತ್ತಡ ಮಾನಿಟರ್ ಒಳಗೊಂಡಿರುವುದರಿಂದ ಬಳಕೆದಾರರು ತಮ್ಮ ಬೆರಳನ್ನು ಹಿಂಭಾಗದಲ್ಲಿ ಇಡಬೇಕಾಗುತ್ತದೆ. ಇದಲ್ಲದೆ ರಕ್ತದೊತ್ತಡದಂತಹ ಅಂಕಿಅಂಶಗಳನ್ನು ಬಳಕೆದಾರರಿಗೆ ಪರದೆಯ ಮೇಲೆ ಡಿಸ್‌ಪ್ಲೇ ಮಾಡಲಾಗುತ್ತದೆ. ನಂತರ ಈ ಅಂಕಿ ಅಂಶಗಳನ್ನು ವೈದ್ಯರಿಗೆ ತೋರಿಸಲು ಬಳಕೆದಾರರು ಸೇವ್‌ ಮಾಡಿಕೊಳ್ಳಬಹುದು.

Best Mobiles in India

English summary
Lava Pulse feature phone comes with a 1,800mAh battery that is touted to last for up to six days.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X