Home
ಸುದ್ದಿಜಾಲ

Lava: ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಸ್ಟ್ರಾಮ್‌ 5G! ಕೈಗೆಟಕುವ ಬೆಲೆಯಲ್ಲಿ 5G ಫೋನ್‌!

ದೇಶಿ ಸ್ಮಾರ್ಟ್‌ಫೋನ್‌ ತಯಾರಕ ಲಾವಾ ಕಂಪೆನಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇದನ್ನು ಲಾವಾ ಸ್ಟ್ರಾಮ್‌ 5G ಎಂದು ಹೆಸರಿಸಲಾಗಿದೆ. ಇದು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ 5G ಸ್ಮಾರ್ಟ್‌ಫೋನ್ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ.

ಹೌದು, ಲಾವಾ ಸ್ಟ್ರಾಮ್‌ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ ಲಾವಾ ಥಂಡರ್ ಬ್ಲಾಕ್ ಮತ್ತು ಗೇಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ಲಾವಾ ಸ್ಟ್ರಾರ್ಮ್‌ 5G ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Lava: ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಸ್ಟ್ರಾಮ್‌ 5G!

ಲಾವಾ ಸ್ಟಾರ್ಮ್ 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಲಾವಾ ಸ್ಟಾರ್ಮ್‌ 5G ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 396ppi ಪಿಕ್ಸೆಲ್ ಸಾಂದ್ರತೆಯನ್ನು ನೀಡಲಿದೆ. ಇದು Widevine L1 ಪ್ರಮಾಣೀಕರಣವನ್ನು ಬೆಂಬಲಿಸುತ್ತದೆ.

ಲಾವಾ ಸ್ಟಾರ್ಮ್ 5G ಪ್ರೊಸೆಸರ್‌ ಯಾವುದು?
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು 2.4GHz ನಲ್ಲಿ ಎರಡು ಕಾರ್ಟೆಕ್ಸ್ A76 ಕೋರ್‌ಗಳನ್ನು ಹೊಂದಿದೆ, 2.0GHz ನಲ್ಲಿ ಆರು ಕಾರ್ಟೆಕ್ಸ್ A55 ಕೋರ್‌ಗಳು ಮತ್ತು ಮಾಲಿ G57 MP2 GPU ಹೊಂದಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 13 ನಲ್ಲಿ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

Lava: ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಸ್ಟ್ರಾಮ್‌ 5G!

ಲಾವಾ ಸ್ಟಾರ್ಮ್ 5G ಕ್ಯಾಮೆರಾ ಸೆಟಪ್‌ ಏನಿದೆ?
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾದೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾವ 8 ಮೆಗಾಪಿಕ್ ಅಲ್ಟ್ರಾವೈಡ್ ಲೆನ್ಸ್ ಜೊತೆಗೆ LED ಫ್ಲ್ಯಾಶ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಸ್ಕ್ರೀನ್ ಫ್ಲ್ಯಾಶ್ಡ್ಯುಯಲ್ ವೈಯಕ್ತಿಕ ಕ್ಯಾಮೆರಾ ರಿಂಗ್‌ಗಳನ್ನು ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್‌ಗಾಗಿ ಪ್ರತ್ಯೇಕ ರಿಂಗ್ ಅನ್ನು ನೀಡುತ್ತದೆ.

ಲಾವಾ ಸ್ಟಾರ್ಮ್ 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರಿಂದ ಫೋನ್‌ ಅನ್ನು 82 ನಿಮಿಷಗಳಲ್ಲಿ 0 ರಿಂದ 100 ವರೆಗೆ ಚಾರ್ಜ್ ಮಾಡಬಹುದು ಎಂದು ಲಾವಾ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಒಟಿಜಿ ಸಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.0, ಅನ್ನು ಬೆಂಬಲಿಸಲಿದೆ. ಇದಲ್ಲದೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಸಾಫ್ಟ್‌ವೇರ್ ಆಧಾರಿತ ಫೇಸ್ ಅನ್‌ಲಾಕ್ ಹೊಂದಿದೆ.

Lava: ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಸ್ಟ್ರಾಮ್‌ 5G!

ಲಾವಾ ಸ್ಟಾರ್ಮ್ 5G ಬೆಲೆ ಮತ್ತು ಲಭ್ಯತೆ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯು 11,999ರೂ ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಸಬಹುದು ಎಂದು ಲಾವಾ ಕಂಪೆನಿ ಹೇಳಿದೆ. ಇದನ್ನು ಲಾವಾ ಥಂಡರ್ ಬ್ಲಾಕ್ ಮತ್ತು ಗೇಲ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್ ಇಂಡಿಯಾ ಮತ್ತು ಲಾವಾದ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದು. ಇದು ಡಿಸೆಂಬರ್ 28 ರಿಂದ ಮಾರಾಟವಾಗಲಿದೆ ಎಂದು ಹೇಳಲಾಗಿದೆ.
Best Mobiles in India

English summary
Lava Storm 5G with 5000mAh Battery Launched in India: Price and Specifications Details in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+