ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ಲಾವಾ ಯುವ 2 ಪ್ರೊ! ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್!
ಇತ್ತೀಚಿನ ದಿನಗಳಲ್ಲಿ ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಲಾವಾ ಕಂಪೆನಿ ಭರ್ಜರಿ ಸೌಂಡ್ ಮಾಡ್ತಿದೆ. ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಮಾರುಕಟ್ಟೆಗೆ ಮರಳಿರುವ ಲಾವಾ ಕಂಪೆನಿ ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಸೈಲೆಂಟ್ ಆಗಿ ಎಂಟ್ರಿ ನೀಡಿರುವ ಈ ಸ್ಮಾರ್ಟ್‌ಫೋನ್ ಅನ್ನು ಲಾವಾ ಯುವ 2 ಪ್ರೊ ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಲಾವಾ ಕಂಪೆನಿ ಭಾರತದಲ್ಲಿ ಹೊಸ ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಎಂದರೆ 9 ರಿಂದ 12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ 12,000ರೂ. ಮೌಲ್ಯದ ಶೈಕ್ಷಣಿಕ ವಸ್ತುಗಳನ್ನು ಒದಗಿಸಲಿದೆ. ಇದಕ್ಕಾಗಿ ಲಾವಾ ಎಡ್‌ಟೆಕ್ ಪ್ಲಾಟ್‌ಫಾರ್ಮ್ ಡೌಟ್‌ನಟ್‌ನೊಂದಿಗೆ ಕೈಜೋಡಿಸಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಇದರ ಬೆಲೆ ಹಾಗೂ ಲಭ್ಯತೆಯ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಲಾವಾ ಯುವ 2 ಪ್ರೊ ಡಿಸ್‌ಪ್ಲೇ ವಿನ್ಯಾಸ ಏನಿದೆ?
ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 269ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 60Hz ರಿಫ್ರೆಶ್ ರೇಟ್ ಅನ್ನು ನೀಡಲಿದೆ. ಇನ್ನು ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯ ವಿನ್ಯಾಸವನ್ನು ಹೊಂದಿದೆ.

ಲಾವಾ ಯುವ 2 ಪ್ರೊ ಪ್ರೊಸೆಸರ್ ಯಾವುದು?
ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೋ G37 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ 3GB ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ. ಈ ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಲಾವಾ ಯುವ 2 ಪ್ರೊ ಕ್ಯಾಮೆರಾ ಸೆಟ್‌ಅಪ್ ಏನಿದೆ?
ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಬ್ಯೂಟಿ, HDR, ನೈಟ್‌ಮೋಡ್, ಭಾವಚಿತ್ರ, AI, ಪ್ರೊ, ಪನೋರಮಾ, ಸ್ಲೋ ಮೋಷನ್, ಫಿಲ್ಟರ್‌ಗಳು, GIF, ಟೈಮ್‌ಲ್ಯಾಪ್ಸ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಲಾವಾ ಯುವ 2 ಪ್ರೊ ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ?
ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB-C ಪೋರ್ಟ್ ಮೂಲಕ 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, 4G VoLTE, Wi-Fi 802.11ac, ಬ್ಲೂಟೂತ್ 5.1, GPS, ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಭಾರತದಲ್ಲಿ ಲಾವಾ ಯುವ 2 ಪ್ರೊ ಬೆಲೆ ಎಷ್ಟು?
ಲಾವಾ ಯುವ 2 ಪ್ರೊ ಸ್ಮಾರ್ಟ್‌ಫೋನ್ ಭಾರತದಲ್ಲಿ 7,999ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಗ್ಲಾಸ್ ವೈಟ್, ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಲ್ಯಾವೆಂಡರ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ನೀವು ಲಾವಾ ಇಂಡಿಯಾದ ಆನ್‌ಲೈನ್ ಸ್ಟೋರ್, ರಿಟೇಲ್ ಸ್ಟೋರ್‌ಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications








