Home
ಸುದ್ದಿಜಾಲ

ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಯುವ 3 ಪ್ರೊ! ಶುರುವಾಯ್ತು ಸ್ವದೇಶಿ ದರ್ಬಾರ್‌!

ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದ್ದ ಲಾವಾ ಯುವ 3 ಪ್ರೊ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅನಾವರಣಗೊಂಡಿದೆ. ದೇಶಿ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡುತ್ತಿರುವ ಸ್ವದೇಶಿ ಬ್ರ್ಯಾಂಡ್‌ ಲಾವಾ ಈ ಫೋನ್‌ ಮೂಲಕ ಇನ್ನಷ್ಟು ಸಂಚಲನ ಮೂಡಿಸುವ ಸೂಚನೆ ನೀಡಿದೆ. ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಎಂಟ್ರಿ ನೀಡಿರುವುದು ವಿಶೇಷವಾಗಿದೆ.

ಹೌದು, ಲಾವಾ ಯುವ 3 ಪ್ರೊ (Lava Yuva 3 Pro) ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಫ್ಲಾಟ್ ಫ್ರೇಮ್ ವಿನ್ಯಾಸ ಮತ್ತು ಗ್ಲಾಸ್‌ ರಿಯರ್‌ ಪ್ಯಾನಲ್‌ ಅನ್ನು ಹೊಂದಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಅನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಯುವ 3 ಪ್ರೊ! ಸ್ವದೇಶಿ ದರ್ಬಾರ್‌!

ಲಾವಾ ಯುವ 3 ಪ್ರೊ ಡಿಸ್‌ಪ್ಲೇ ರಚನೆ
ಲಾವಾ ಯುವ 3 ಪ್ರೊ ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 269 PPI ಪಿಕ್ಸೆಲ್‌ ಸಾಂದ್ರತೆಯೊಂದಿಗೆ, 90Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಸೆಲ್ಫಿ ಶೂಟರ್ ಅನ್ನು ಇರಿಸಲು ಡಿಸ್‌ಪ್ಲೇ ಮಧ್ಯದಲ್ಲಿ ಹೋಲ್‌ ಪಂಚ್ ಕಟೌಟ್ ಅನ್ನು ಹೊಂದಿದೆ.

ಲಾವಾ ಯುವ 3 ಪ್ರೊ ಪ್ರೊಸೆಸರ್‌ ಸಾಮರ್ಥ್ಯ?
ಲಾವಾ ಯುವ 3 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ Unisoc T616 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ವರ್ಚುವಲ್ RAM ಫೀಚರ್ಸ್‌ ಹೊಂದಿದ್ದು, ಹೆಚ್ಚುವರಿ ಬಳಕೆಯಾಗದ ಸಂಗ್ರಹಣೆ ಆನ್‌ಬೋರ್ಡ್ ಮೆಮೊರಿಯನ್ನು 16GB ವರೆಗೆ ವಿಸ್ತರಿಸಬಹುದಾಗಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು.

ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಯುವ 3 ಪ್ರೊ! ಸ್ವದೇಶಿ ದರ್ಬಾರ್‌!

ಲಾವಾ ಯುವ 3 ಪ್ರೊ ಕ್ಯಾಮೆರಾ ಸೆಟಪ್‌ ಏನಿದೆ?
ಲಾವಾ ಯುವ 3 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ಇದಲ್ಲದೆ AI ಸೆನ್ಸಾರ್‌ನೊಂದಿಗೆ LED ಫ್ಲ್ಯಾಷ್‌ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ HDR, ಪೋರ್ಟ್ರೇಟ್, ಪನೋರಮಾ, ಬರ್ಸ್ಟ್, ಸ್ಲೋ ಮೋಷನ್, ನೈಟ್ ಮತ್ತು ಟೈಮ್ ಲ್ಯಾಪ್ಸ್ ಫೋಟೋಗ್ರಫಿ ಸೇರಿದಂತೆ ಅನೇಕ ಕ್ಯಾಮೆರಾ ಮೋಡ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಲಾವಾ ಯುವ 3 ಪ್ರೊ ಬ್ಯಾಟರಿ ಮತ್ತು ಇತರೆ
ಲಾವಾ ಯುವ 3 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದು ಒಟ್ಟು 38 ಗಂಟೆಗಳ ಟಾಕ್ ಟೈಮ್ ಮತ್ತು 500 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ಸಿಂಗಲ್‌ ಚಾರ್ಜ್‌ನಲ್ಲಿ ನೀಡಲಿದೆ. ಇದಲ್ಲದೆ ಸಿಂಗಲ್‌ ಚಾರ್ಜ್‌ನಲ್ಲಿ 468 ನಿಮಿಷಗಳವರೆಗೆ YouTube ಪ್ಲೇಬ್ಯಾಕ್ ಟೈಂ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, ಬ್ಲೂಟೂತ್ 5, GPRS, OTG, Wi-Fi 802.11 b/g/n/ac, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಹೊಂದಿದೆ.

ದೇಶಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಲಾವಾ ಯುವ 3 ಪ್ರೊ! ಸ್ವದೇಶಿ ದರ್ಬಾರ್‌!

ಲಾವಾ ಯುವ 3 ಪ್ರೊ ಬೆಲೆ ಮತ್ತು ಲಭ್ಯತೆ
ಲಾವಾ ಯುವ 3 ಪ್ರೊ ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB + 128GB ಸ್ಟೋರೇಜ್‌ ಆಯ್ಕೆಗೆ 8,999ರೂ ಬೆಲೆಯನ್ನು ಹೊಂದಿದೆ. ಇದನ್ನು ಡಸರ್ಟ್ ಗೋಲ್ಡ್, ಫಾರೆಸ್ಟ್ ವಿರಿಡಿಯನ್ ಅಥವಾ ಮೆಡೋ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಇಂದಿನಿಂದ(ಡಿಸೆಂಬರ್ 14) ಲಾವಾ ಇ-ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಪ್ರಿ-ಬುಕಿಂಗ್‌ಗೆ ಸಿದ್ಧವಾಗಿದೆ.

Best Mobiles in India

English summary
Lava Yuva 3 Pro With 5,000mAh Battery Launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+