Home
ಸುದ್ದಿಜಾಲ

ಇಂದಿನಿಂದ ಲಾವಾ ಯುವ 3 ಫೋನ್‌ ಫಸ್ಟ್‌ ಸೇಲ್‌ ಶುರು: ಆರಂಭಿಕ ಬೆಲೆ 6,799ರೂ!

ಲಾವಾ ಕಂಪೆನಿ ಇತ್ತೀಚಿಗೆ ಬಿಡುಗಡೆ ಮಾಡಿದ್ದ ಲಾವಾ ಯುವ 3 ಸ್ಮಾರ್ಟ್‌ಫೋನ್‌ ಇಂದು (ಫೆ.7) ಫಸ್ಟ್‌ ಸೆಲ್‌ ಆರಂಭಿಸಲಿದೆ. ಭಾರತದಲ್ಲಿ ಇಂದು ಫಸ್ಟ್‌ ಸೆಲ್‌ ನಡೆಯುತ್ತಿದ್ದು, ಮಧ್ಯಾಹ್ನ 12 ಗಂಟೆಯ ನಂತರ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 6,799ರೂ ಆಗಿದ್ದು, ಎಂಟ್ರಿ ಲೆವೆಲ್‌ ಫೋನ್‌ ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಹೌದು, Lava Yuva 3 ಸ್ಮಾರ್ಟ್‌ಫೋನ್‌ ಇಂದಿನಿಂದ ಮಾರಾಟಕ್ಕೆ ಬರಲಿದೆ. ಈ ಸ್ಮಾರ್ಟ್‌ಫೋನ್‌ 4GB RAM + 64GB ಮತ್ತು 4GB RAM + 128GB ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಫೋನ್‌ UniSoC T606 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಹಾಗಾದ್ರೆ ಲಾವಾ ಯುವ 3 ಸ್ಮಾರ್ಟ್‌ಫೋನ್‌ ಫೀಚರ್ಸ್‌ ಏನಿದೆ? ಇದರ ಬೆಲೆ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂದಿನಿಂದ ಲಾವಾ ಯುವ 3 ಫೋನ್‌ ಫಸ್ಟ್‌ ಸೇಲ್‌ ಶುರು: ಆರಂಭಿಕ ಬೆಲೆ 6,799ರೂ!

Lava Yuva 3 ಬೆಲೆ ಮತ್ತು ಲಭ್ಯತೆ
Lava Yuva 3 ಸ್ಮಾರ್ಟ್‌ಫೋನ್‌ ಇಂದಿನಿಂದ ಅಮೆಜಾನ್ ಮೂಲಕ ಫಸ್ಟ್‌ ಸೇಲ್‌ ಆರಂಭಿಸಲಿದೆ. ಇದು ಮಧ್ಯಾಹ್ನ 12 ಗಂಟೆಯ ನಂತರ ಖರೀದಿಗೆ ಲಭ್ಯವಿರುತ್ತದೆ. ಅದರಂತೆ ಈ ಸ್ಮಾರ್ಟ್‌ಫೋನ್‌ನ 4GB + 64GB ಕಾನ್ಫಿಗರೇಶನ್ ಆಯ್ಕೆಯು 6,799 ರೂ.ಬೆಲೆಯನ್ನು ಹೊಂದಿದೆ. ಇದರ 4GB + 128GB ಸ್ಟೋರೇಜ್‌ ಆಯ್ಕೆಯು 7,299 ರೂ.ಬೆಲೆಯಲ್ಲಿ ಲಭ್ಯವಾಗಲಿದೆ.

Lava Yuva 3 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
Lava Yuva 3 ಸ್ಮಾರ್ಟ್‌ಫೋನ್‌ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 720 × 1600 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 269ppi ಪಿಕ್ಸೆಲ್ ಸಾಂದ್ರತೆಯಲ್ಲಿ ಬರಲಿದೆ. ಜೊತೆಗೆ 90Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ.

Lava Yuva 3 ಪ್ರೊಸೆಸರ್‌ ಯಾವುದು?
Lava Yuva 3 ಯೂನಿಸೋಕ್‌ T606 ಆಕ್ಟಾ-ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 4GB RAM + 64GB ಮತ್ತು 4GB RAM + 128GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಇದು 4GB ವರ್ಚುವಲ್ RAM ಅನ್ನು ಸಹ ಬೆಂಬಲಿಸಲಿದೆ.

ಇಂದಿನಿಂದ ಲಾವಾ ಯುವ 3 ಫೋನ್‌ ಫಸ್ಟ್‌ ಸೇಲ್‌ ಶುರು: ಆರಂಭಿಕ ಬೆಲೆ 6,799ರೂ!

Lava Yuva 3 ಕ್ಯಾಮೆರಾ ರಚನೆ ಹೇಗಿದೆ?
Lava Yuva 3 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಈ ಸೆನ್ಸಾರ್‌ಗಳು ಎಐ ಫೀಚರ್ಸ್‌ನಲ್ಲಿ ಕೆಲಸ ಮಾಡಲಿವೆ. ಇದರೊಂದಿಗೆ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ. ಇದರಿಂದ ಅತ್ಯುತ್ತಮ ವಿಡಿಯೋ ಹಾಗೂ ಫೋಟೋ ಸೆರೆಹಿಡಿಯುವುದಕ್ಕೆ ಸಾಧ್ಯವಾಗಲಿದೆ.

Lava Yuva 3 ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಇತರೆ
Lava Yuva 3 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ವರ್ಧಿತ ಭದ್ರತೆಗಾಗಿ ಫೇಸ್ ಅನ್‌ಲಾಕ್ ಫೀಚರ್ಸ್, ಬಾಟಮ್-ಫೈರಿಂಗ್ ಸ್ಪೀಕರ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

Lava Yuva 3 ಕಲರ್‌ ಆಯ್ಕೆ ಮತ್ತು ಲಭ್ಯತೆ
Lava Yuva 3 ಸ್ಮಾರ್ಟ್‌ಫೋನ್‌ ಎಕ್ಲಿಪ್ಸ್ ಬ್ಲಾಕ್, ಕಾಸ್ಮಿಕ್ ಲ್ಯಾವೆಂಡರ್ ಮತ್ತು ಗ್ಯಾಲಕ್ಸಿ ವೈಟ್ ಕಲರ್‌ ಆಯ್ಕೆಗಳಲ್ಲಿ ಮಾರಾಟವಾಗಲಿದೆ.

Best Mobiles in India

English summary
Lava Yuva 3 Smartphone First Sale Starts Today: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+