Home
ಸುದ್ದಿಜಾಲ

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಲಾವಾ Z4 ಪ್ಲಸ್‌ ಸ್ಮಾರ್ಟ್‌ಫೋನ್‌! ಹೇಗಿರಲಿದೆ ಫೀಚರ್ಸ್‌?

ಸ್ವದೇಶಿ ಮೊಬೈಲ್‌ ಬ್ರ್ಯಾಂಡ್‌ ಲಾವಾ ಕಂಪೆನಿ ಶೀಘ್ರದಲ್ಲೇ ಹೊಸ ಲಾವಾ Z4 ಪ್ಲಸ್‌ ಫೋನ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ ಫೋನ್ FCC ಪ್ರಮಾಣೀಕರಣದ ವೆಬ್‌ಸೈಟ್‌ನಲ್ಲಿ ಗುರುತಿಸಲ್ಪಟ್ಟಿದೆ.

ಹೌದು, ಲಾವಾ Z4 ಪ್ಲಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹೆಲಿಯೋ G99SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಎಂಟ್ರಿ ನೀಡಲಿದೆ ಲಾವಾ Z4 ಪ್ಲಸ್‌ ಫೋನ್‌! ಹೇಗಿರಲಿದೆ ಫೀಚರ್ಸ್‌?

ಲಾವಾ Z4 ಪ್ಲಸ್‌ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಲಾವಾ Z4 ಪ್ಲಸ್‌ ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 270 PPI ಪಿಕ್ಸೆಲ್‌ ಸಾಂದ್ರತೆಯನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.

ಲಾವಾ Z4 ಪ್ಲಸ್‌ ಪ್ರೊಸೆಸರ್‌ ಯಾವುದು?
ಲಾವಾ Z4 ಪ್ಲಸ್‌ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G35 SoC ಪ್ರೊಸೆಸರ್‌ ವೇಗದೊಂದಿಗೆ ಬರಲಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸಲಿದೆಯಾ ಅನ್ನೊದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಲಾವಾ Z4 ಪ್ಲಸ್‌ ಕ್ಯಾಮೆರಾ ಸೆಟ್‌ಅಪ್‌
ಲಾವಾ Z4 ಪ್ಲಸ್‌ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದರ ಮೂರನೇ ಕ್ಯಾಮೆರಾ ವಿವರಗಳು ತಿಳಿದುಬಂದಿಲ್ಲ ಎಂದು ಅಂದಾಜಿಸಲಾಗಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ ಎಂದು ನಿರೀಕ್ಷಿಸಲಾಗಿದೆ.

ಲಾವಾ Z4 ಪ್ಲಸ್‌ ಬ್ಯಾಟರಿ ಯಾವುದು?
ಲಾವಾ Z4 ಪ್ಲಸ್‌ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 7.5W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ನೊಂದಿಗೆ ಬರಲಿದೆ ಎಂದು ಪಟ್ಟಿ ತೋರಿಸುತ್ತದೆ ಎಂದು ವರದಿ ಹೇಳುತ್ತದೆ.

ಲಾವಾ Z4 ಪ್ಲಸ್‌ ಬೆಲೆ ಮತ್ತು ಲಭ್ಯತೆ
ಲಾವಾ Z4 ಪ್ಲಸ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ 12,472ರೂ. ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಆಕ್ವಾ ಬ್ಲೂ ಮತ್ತು ಫ್ಲೇಮ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಎಂದು ವರದಿಯಾಗಿದೆ.

ಇದಲ್ಲದೆ ಲಾವಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಲಾವಾ ಪ್ರೊಬಡ್ಸ್‌ 22 TWS ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ 12mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಪ್ರಭಾವಶಾಲಿ ಬಾಸ್ ಕಾರ್ಯಕ್ಷಮತೆಯನ್ನು ನೀಡಲಿದೆ. ಇದರ ಕ್ವಾಡ್ ಮೈಕ್ರೊಫೋನ್‌ಗಳು ಬ್ಯಾಕ್‌ಗ್ರೌಂಡ್‌ ನಾಯ್ಸ್‌ ಅನ್ನು ಎಫ್ಫೆಕ್ಟಿವ್‌ಲಿ ಕಡಿಮೆ ಮಾಡಲಿದೆ. ಇದಲ್ಲದೆ ಲಾವಾ ಪ್ರೊಬಡ್ಸ್‌ 22 TWS ಇಯರ್‌ಬಡ್ಸ್‌ ಪಾಕೆಟ್ ಸ್ನೇಹಿಯಾಗಿದೆ. ಇದರ ಪ್ರತಿ ಇಯರ್‌ಬಡ್ 46mAh ಬ್ಯಾಟರಿಯನ್ನು ಹೊಂದಿವೆ. ಇದರ ಚಾರ್ಜಿಂಗ್‌ ಕೇಸ್ 500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ.

Best Mobiles in India

English summary
Lava Z4 Plus Reportedly Spotted on FCC Website: Expected Features details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+