ಹೊಸ 'ಲಾವಾ Z71' ಸ್ಮಾರ್ಟ್‌ಫೋನ್‌ ಬಿಡುಗಡೆ!..ಬೆಲೆ 6,299ರೂ.!

|

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ Z41 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನಮತರ ಹೆಚ್ಚು ಕಡಿಮೆ ಕಣ್ಮರೆಯಾಗಿರುವ ಲಾವಾ ಮೊಬೈಲ್ ಕಂಪೆನಿ ಇದೀಗ ಹೊಸ ಫೀಚರ್ ಫೋನ್ ಮೂಲಕ ಮತ್ತೆ ಮಾರುಕಟ್ಟೆ ಪ್ರವೇಶಿಸಿದೆ. ಲಾವಾ Z71 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಫ್ಲ್ಯಾಷ್ ಬೆಂಬಲ ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಅಪ್ ಹೊಂದಿದೆ. ಅಲ್ಲದೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ A22SOC ಪ್ರೊಸೆಸರ್‌ ಹೊಂದಿದೆ.

ದೇಶದ

ದೇಶದ ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ಒಂದಾದ ಲಾವಾ ಸ್ಮಾರ್ಟ್‌ಫೋನ್‌ ಕಂಪೆನಿ Z71 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೊನ್‌ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು, ಗೂಗಲ್ ಅಸಿಸ್ಟೆಂಟ್ ಕೀ, ವಾಟರ್‌ಡ್ರಾಪ್ ನಾಚ್, ಮತ್ತು 3,200mAh ಬ್ಯಾಟರಿ ಪ್ಯಾಕ್‌ಆಪ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಫೇಸ್ ಅನ್‌ಲಾಕ್ ಅನ್ನು ಹೊಂದಿದೆ. ಸದ್ಯ ಮತ್ತೆ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಲಾವಾZ71 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಲಾವಾ Z71 ಸ್ಮಾರ್ಟ್‌ಫೋನ್‌ 720x1520 ಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿರುವ 5.7-ಇಂಚಿನ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು, ವಾಟರ್‌ಡ್ರಾಪ್-ಸ್ಟೈಲ್ ನಾಚ್ ಶೈಲಿಯ ಡಿಸ್‌ಪ್ಲೇ ಇದಾಗಿದೆ. ಈ ಡಿಸ್‌ಪ್ಲೇಯು 295 ಪಿಪಿ ಪಿಕ್ಸೆಲ್ ಸೆನ್ಸರ್‌ ಅನ್ನು ಹೊಂದಿದ್ದು, 19:9 ಆಸ್ಪೆಕ್ಟ್‌ ರೇಶಿಯೋ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಲಾಕ್‌ ಜೊತೆಗೆ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ವೈಶಿಷ್ಟ್ಯವನ್ನು ಸಹ ನೀಡಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು 2GHz ಮೀಡಿಯಾ ಟೆಕ್ ಹೆಲಿಯೊ A22 ಕ್ವಾಡ್-ಕೋರ್ SoC ಪ್ರೊಸೆಸರ್‌ ಹೊಂದಿದ್ದು,ಆಂಡ್ರಾಯ್ಡ್ ಪೈ ಓಎಸ್ 5.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 2GB RAM ಮತ್ತು 32GB ಸಂಗ್ರಹ ಸಾಮರ್ಥ್ಯವನ್ನ ಹೊಂದಿದ್ದು. ಮೆಮೊರಿ ಕಾರ್ಡ್‌ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನ ಹೊಂದಿದೆ. ಅಲ್ಲದೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಇದು F/ 2.2 ಲೆನ್ಸ್‌ ಸೆನ್ಸಾರ್‌ ಜೊತೆಗೆ ಸಾಫ್ಟ್‌ ಫ್ಲ್ಯಾಷ್ ಹೊಂದಿದೆ. ಈ ಕ್ಯಾಮೆರಾಗಳು ಪ್ರೊಪೆಷನಲ್‌ ಮೋಡ್, ಮತ್ತು ಎಐ ಸ್ಟುಡಿಯೋ ಮೋಡ್ ಅನ್ನು ಒಳಗೊಂಡಿದ್ದು, ಆರು ಹಂತದಲ್ಲಿ ಫೋಟೊಗಳನ್ನ ಕ್ಲಿಕ್ಕಿಸಬಹುದಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ನಲ್ಲಿ ಗಮನಿಸಬೇಕಾದ ಪ್ರಮುಖ ಫೀಚರ್ಸ್‌ ಎಂದರೆ ಈ ಫೋನ್ 3,200mAh ಬ್ಯಾಟರಿ ಪ್ಯಾಕ್ಆಪ್‌ ಹೊಂದಿರುವುದು. ಇದು 50 ಗಂಟೆಗಳ ಟಾಕ್ ಟೈಮ್, ಒಂಬತ್ತು ಗಂಟೆಗಳ ವೆಬ್ ಬ್ರೌಸಿಂಗ್, 8.5 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಮತ್ತು 485 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ

4G LTE, ವೈ-ಫೈ 802.11 B/G/N, ಮೈಕ್ರೋ ಯುಎಸ್‌ಬಿ, ಜಿಪಿಎಸ್, ಯುಎಸ್‌ಬಿ ಒಟಿಜಿ, 3.5 ಎಂಎಂ ಆಡಿಯೊ ಜ್ಯಾಕ್, ಬ್ಲೂಟೂತ್ 5.0, ಜೊತೆಗೆ ಆಕ್ಸಿಲರೊಮೀಟರ್, ಪ್ರಾಕ್ಸಿಮಿಟಿ ಸೆನ್ಸರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಲಾವಾ Z71 ಸ್ಮಾರ್ಟ್‌ಫೋನ್‌ 6,299,ರೂ ಬೆಲೆಯನ್ನ ಹೊಂದಿದ್ದು, ಈ ಸ್ಮಾರ್ಟ್‌ಫೋನ್‌ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಸ್ಟೀಲ್ ಬ್ಲೂ ಮತ್ತು ರೂಬಿ ರೆಡ್ ಎರಡು ಕಲರ್‌ಗಳ ಆಯ್ಕೆಗಳಲ್ಲಿ ಲಭ್ಯವಿದೆ.

Most Read Articles
Best Mobiles in India

English summary
The Lava Z71 smartphone has been launched in India, and it comes with a price label of Rs 6,299. The handset will be available for purchase via Flipkart in two color variants. These include Steel Blue and Ruby Red with mirror finish design. As for the offers, Lava Z71 buyers can get Rs 1,200 cashback, which will be credited in the form of 24 cashback vouchers of Rs 50 each. One will find these vouchers in the MyJio app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X