ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

By Ashwath
|

ವಿಶ್ವದಲ್ಲಿ ಇಂದು ಐಟಿ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಪುರುಷರ ಪ್ರಾಬಲ್ಯ ಹೆಚ್ಚಾದ್ರೂ ಪುರುಷರಂತೆ ಸರಿ ಸಮಾನವಾಗಿ ದುಡಿಮೆ ಮಾಡಿ ಯಶಸ್ವಿಯಾದ ಮಹಿಳೆಯರು ಈ ಕ್ಷೇತ್ರದಲ್ಲಿದ್ದಾರೆ.ಪ್ರಸಿದ್ಧ ಕಂಪೆನಿಗಳಾದ ಮೈಕ್ರೋಸಾಫ್ಟ್‌ ,ಒರೆಕಾಲ್, ಜೆರಾಕ್ಸ್‌,ಯಾಹೂ,ಫೇಸ್‌ಬುಕ್‌ ಕಂಪೆನಿಗಳ ಯಶಸ್ಸಿನ ಹಿಂದೆ ಕೆಲ ಮಹಿಳೆಯರು ಶ್ರಮಿಸಿದ್ದಾರೆ. ಈ ಮಹಿಳೆಯರ ಕೆಲಸ ನಿರ್ವಹಣೆಗೆ ವಿಶ್ವದ ಅನೇಕ ಕಂಪೆನಿಗಳು ಗುರುತಿಸಿ ಗೌರವಿಸಿದ್ದಾರೆ. ಹೀಗಾಗಿ ಗಿಜ್ಬಾಟ್‌ ವಿಶ್ವದ ಟಾಪ್‌ 5 ಟೆಕ್‌ ಮಹಿಳೆಯರ ಪಟ್ಟಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ಅವರ ಸಾಧನೆಗಳನ್ನು ಓದಿಕೊಂಡು ಹೋಗಿ.

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ಮೈಕ್ರೋಸಾಫ್ಟ್ ವಿಂಡೋಸ್‌ ಸಾಫ್ಟ್‌ವೇರ್‌ ರೂಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದಾಕೆ ಜ್ಯೂಲಿ ಲರ್ಸನ್‌ ಗ್ರೀನ್‌.ಮೈಕ್ರೋಸಾಫ್ಟ್‌ ಕಂಪೆನಿಯಲ್ಲಿ ಕಳೆದ 19 ವರ್ಷಗಳಿಂದ ಸೇವೆ. ವಿಂಡೋಸ್‌ ಸಾಫ್ಟ್‌ವೇರ್‌ ರೂಪಿಸಿದಕ್ಕೆ 2003ರ ಟೆಕ್ನಿಕಲ್‌ ಲೀಡರ್‌ಶಿಪ್‌ ಪ್ರಶಸ್ತಿ. ಸದ್ಯ ವಿಂಡೋಸ್‌ ಸಾಫ್ಟ್‌ವೇರ್‌ನ ಎಂಜಿನಿಯರಿಂಗ್‌ ವಿಭಾಗದ ಮಹತ್ವದ ಜವಾಬ್ದಾರಿಯನ್ನು ಲರ್ಸನ್ ಗ್ರೀನ್‌ ನಿಭಾಯಿಸುತ್ತಿದ್ದಾರೆ.

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ಒರೆಕಲ್‌ ಕಂಪೆನಿಯ ಜಾವಾ ಸಾಫ್ಟ್‌ವೇರ್‌ ವಿಭಾಗದ ಮುಖ್ಯಸ್ಥೆ. ಕಳೆದ 20 ವರ್ಷಗಳಿಂದ ಡೇಟಾ ಬೇಸ್‌ ವಿಷಯಗಳಲ್ಲಿ ಲಿಂಡಾ ಡಿ ಮಿಚೆಲ್‌ ಉತ್ತಮ ಪರಿಣಿತಿ ಪಡೆದಿದ್ದಾರೆ.ಐಬಿಎಂನಲ್ಲಿ ಕೆಲಕಾಲ ಡೇಟಾಬೇಸ್‌ ವಿಭಾಗದಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ಲಿಂಡಾ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ಯಾಹೂ ಕಂಪೆನಿಯ ಸಿಇಒ. 199ರಲ್ಲಿ ಗೂಗಲ್‌ ಕಂಪೆನಿಗೆ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಕೀರ್ತಿ ಮರಿಸ್ಸಾ ಮೇಯರ್‌ಗಿದೆ.13 ವರ್ಷದ ಇಂಜಿನಿಯರಿಂಗ್‌ ವೃತ್ತಿಯಲ್ಲಿ ಎಂಜಿನಿಯರ್‌,ವಿನ್ಯಾಸಗಾರ್ತಿ, ಪ್ರೊಡಕ್ಸ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದಾರೆ. ಗೂಗಲ್‌ ಕಂಪೆನಿಯ ಗೂಗಲ್‌ ಸರ್ಚ್‌, ಗೂಗಲ್‌ ಇಮೇಜಸ್‌, ಗೂಗಲ್‌ ನ್ಯೂಸ್‌,ಗೂಗಲ್‌ ಮ್ಯಾಪ್‌,ಗೂಗಲ್‌ ಬುಕ್ಸ್‌,ಗೂಗಲ್‌ ಟೂಲ್‌ಬಾರ್‌,ಐ ಗೂಗಲ್‌, ಜಿಮೇಲ್‌ ರೂಪಿಸುವಲ್ಲಿ ಮರಿಸ್ಸಾ ಮುಖ್ಯಪಾತ್ರವನ್ನು ವಹಿಸಿದ್ದಾರೆ. ಇವರ ಈ ಉತ್ತಮ ಕಾರ್ಯಕ್ಷಮತೆ ಮತ್ತು ಪ್ರತಿಭೆಯನ್ನು ಗೌರವಿಸಿ ಯಾಹೂ ಮ್ಯಾನೇಜ್‌ಮೆಂಟ್‌ ಕಳೆದ ವರ್ಷ ಜುಲೈನಲ್ಲಿ ಮರಿಸ್ಸಾರನ್ನು ಯಾಹೂವಿನ ಸಿಇಒ ಮತ್ತು ಅಧ್ಯಕ್ಷೆಯನ್ನಾಗಿ ನೇಮಿಸಿದೆ.

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

2009ರಲ್ಲಿ ಜೆರಾಕ್ಸ್‌ ಕಂಪೆನಿಯ ಸಿಇಒವಾಗಿ, 2010ರಲ್ಲಿ ಜೆರಾಕ್ಸ್ ಕಂಪೆನಿಯ ಮುಖ್ಯಸ್ಥಳಾಗಿ ಅಧಿಕಾರ ಸ್ವೀಕಾರ.ಫಾರ್ಚ್ಯೂನ್‌ ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ವಿಶ್ವದ 500 ಜನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಆಫ್ರಿಕನ್‌ ಮಹಿಳೆ. 2009ರಲ್ಲಿ ಫೊರ್ಬ್ಸ ವಿಶ್ವದ 14ನೇ ಪ್ರಭಾವಿ ಮಹಿಳೆ ಎಂದು ಗುರುತಿಸಿ ಗೌರವಿಸಿತ್ತು.

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ಫೇಸ್‌ಬುಕ್‌ ಇಂಜಿನಿಯರಿಂಗ್‌ ವಿಭಾಗದ ನಿರ್ದೇಶಕಿ. ಫೇಸ್‌ಬುಕ್‌ನ್ನು ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗುವಂತೆ ರೂಪಿಸುವಲ್ಲಿ ದೊಡ್ಡ ಪಾತ್ರವಹಿಸಿದಾಕೆ. ಫೇಸ್‌ಬುಕ್‌ನ ಸುದ್ದಿ ಸಾರ, ಸರ್ಚ್‌,ಫೋಟೋ ವಿಭಾಗದ ಉಸ್ತುವಾರಿ ಹೊತ್ತು ಟೆಕ್‌ ಪಂಡಿತರಿಂದ ಶ್ಲಾಘನೆಗೆ ಒಳಗಾದ ಮಹಿಳೆ.ಗೋಲ್ಡ್‌ಫೀನ್‌ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X