ಲೆನೊವೊ ಸಂಸ್ಥೆಯಿಂದ ಶಿಕ್ಷಣ ಕೇಂದ್ರಿತ ನಾಲ್ಕು ಹೊಸ ಕ್ರೋಮ್‌ಬುಕ್‌ ಲಾಂಚ್‌!

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಕಂಪೆನಿಗಳಲ್ಲಿ ಲೆನೊವೊ ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ತನ್ನದೇ ಆದ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಸದ್ಯ ಇದೀಗ ಶಿಕ್ಷಣ ಕೇಂದ್ರಿತ ನಾಲ್ಕು ಹೊಸ ಕ್ರೋಮ್‌ಬುಕ್‌ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಲೆನೊವೊ 14e ಜನ್ 2, ಲೆನೊವೊ 100e ಜನ್ 3, ಲೆನೊವೊ 300e ಜನ್ 3, ಮತ್ತು ಲೆನೊವೊ 500e ಜನ್ 3 ಎಂದು ಹೆಸರಿಸಲಾಗಿದೆ. ಇದರಲ್ಲಿ ಲೆನೊವೊ 14e ಜನ್ 2, ಲೆನೊವೊ 100e, ಮತ್ತು ಲೆನೊವೊ 300e ಕ್ರೋಮ್‌ಬುಕ್‌ಗಳನ್ನು ಎಎಮ್‌ಡಿ ಪ್ರೊಸೆಸರ್‌ ಹೊಂದಿದ್ದರೆ, ಲೆನೊವೊ 500e ಇಂಟೆಲ್ ಸೆಲೆರಾನ್ ಪ್ರೊಸೆಸರ್ ಹೊಂದಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳು ಶಿಕ್ಷಣ ಕೇಂದ್ರಿತ ವಿಚಾರಕ್ಕೆ ಸಾಕಷ್ಟು ಅನುಕೂಲಕರವಾಗಲಿದೆ ಎನ್ನಲಾಗಿದೆ. ಇನ್ನು ಈ ಎಲ್ಲಾ ಲ್ಯಾಪ್‌ಟಾಪ್‌ಗಳು ಕ್ರೋಮ್‌ OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಜೊತೆಗೆ MIL-SPEC-810H ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಈ ನಾಲ್ಕು ಮಾದರಿಗಳು 10 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿವೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ 14e ಜನ್ 2

ಲೆನೊವೊ 14e ಜನ್ 2

ಲೆನೊವೊ 14e ಜನ್ 2 ಕ್ರೋಮ್‌ಬುಕ್‌ ಹೆಚ್‌ಡಿ ರೆಸಲ್ಯೂಶನ್, ಫುಲ್-ಹೆಚ್‌ಡಿ ರೆಸಲ್ಯೂಶನ್, 220 ನಿಟ್ಸ್ / 250 ನಿಟ್ಸ್ / 300 ನಿಟ್ಸ್ ಬ್ರೈಟ್‌ನೆಸ್, ಮತ್ತು ಟಚ್ ಇನ್‌ಪುಟ್ ಆಯ್ಕೆಗಳೊಂದಿಗೆ 14 ಇಂಚಿನ ಡಿಸ್‌ಪ್ಲೆ ಹೊಂದಿದೆ. ಇನ್ನು ಈ ಕ್ರೋಮ್‌ಬುಕ್‌ AMD ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಕ್ರೋಮ್‌ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8GB RAM ಮತ್ತು 64GB ವರೆಗೆ EMMC ಸ್ಟೋರೇಜ್‌ ಅನ್ನು ಹೊಂದಿದೆ. ಇದು 57Whr ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದು 10 ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6 ಎಎಕ್ಸ್ 200, ಯುಎಸ್ಬಿ ಟೈಪ್-ಸಿ ಪೋರ್ಟ್, ಎರಡು ಯುಎಸ್ಬಿ 3.1 ಪೋರ್ಟ್‌ಗಳು, ಹೆಚ್‌ಡಿಎಂಐ ಪೋರ್ಟ್ ಅನ್ನು ಬೆಂಬಲಿಸಲಿದೆ.

ಲೆನೊವೊ 100e ಜನ್ 3

ಲೆನೊವೊ 100e ಜನ್ 3

ಲೆನೊವೊ 100e ಜನ್ 3 ಕ್ರೋಮ್‌ಬುಕ್‌ 1,366x768 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 11.6-ಇಂಚಿನ ಹೆಚ್‌ಡಿ ಟಿಎನ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 250 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ಇಂಟಿಗ್ರೇಟೆಡ್ ಎಎಮ್‌ಡಿ ರೇಡಿಯನ್ ಗ್ರಾಫಿಕ್ಸ್, 4GB RAM ಮತ್ತು 32GB EMMC ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಕ್ರೋಮ್‌ಬುಕ್‌ ಸಿಂಗಲ್‌ ಚಾರ್ಜ್‌ನಲ್ಲಿ 10 ಗಂಟೆಗಳವರೆಗೆ ಇರುತ್ತದೆ ಮತ್ತು ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎಂದು ಲೆನೊವೊ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ 3.2 ಜನ್ 1 ಪೋರ್ಟ್, ಎರಡು ಯುಎಸ್‌ಬಿ ಟೈಪ್-ಎ 3.2 ಜನ್ 1 ಪೋರ್ಟ್‌ಗಳು, ಎಚ್‌ಡಿಎಂಐ ಪೋರ್ಟ್, ಮೈಕ್ರೊ ಎಸ್‌ಡಿ ಕಾರ್ಡ್ ರೀಡರ್ ಅನ್ನು ಬೆಂಬಲಿಸಲಿದೆ.

ಲೆನೊವೊ 300e ಜನ್ 3

ಲೆನೊವೊ 300e ಜನ್ 3

ಲೆನೊವೊ 300e ಜನ್ 3 ಲ್ಯಾಪ್‌ಟಾಪ್‌ 11.6 ಇಂಚಿನ ಹೆಚ್‌ಡಿ ಐಪಿಎಸ್ ಟಚ್ ಡಿಸ್‌ಪ್ಲೇ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಜೊತೆಗೆ ಇದು Chromebooks ಮತ್ತು AMD ರೇಡಿಯನ್ ಗ್ರಾಫಿಕ್ಸ್‌ಗಾಗಿ AMD ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ನಲ್ಲಿ 4GB RAM ಮತ್ತು 64GB EMMC ಸ್ಟೋರೇಜ್‌ ಅನ್ನು ನೀಡಲಾಗಿದೆ. ಇದಲ್ಲದೆ ಪ್ರೈವೆಸಿ ಶಟರ್ ಹೊಂದಿರುವ 720p ಸೆಲ್ಫಿ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ವರ್ಲ್ಡ್‌ ಫೇಸ್‌ ಕ್ಯಾಮೆರಾದ ಆಯ್ಕೆ ಇದೆ.

ಲೆನೊವೊ 500e ಜನ್ 3

ಲೆನೊವೊ 500e ಜನ್ 3

ಲೆನೊವೊ 500e ಜನ್ 3 ಲ್ಯಾಪ್‌ಟಾಪ್‌ ಲೆನೊವೊ 300e ಜನ್ 3 ರಂತೆಯೇ 11.6-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ, ಆದರೆ ಇಂಟೆಲ್ ಸೆಲೆರಾನ್ ಎನ್ 5100 ಪ್ರೊಸೆಸರ್‌ನಿಂದ ಚಾಲಿತವಾದ ನಾಲ್ಕರಲ್ಲಿ ಏಕೈಕ ಕ್ರೋಮ್‌ಬುಕ್ ಇದಾಗಿದೆ. ಇದು 8GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಬ್ಯಾಟರಿ 10 ಗಂಟೆಗಳವರೆಗೆ ಬಾಳಿಕೆ ಬರಲಿದೆ. ಇದು ಕೂಡ 5 ಮೆಗಾಪಿಕ್ಸೆಲ್ "ವರ್ಲ್ಡ್‌-ಫೇಸ್‌" ರಿಯರ್‌ ಕ್ಯಾಮೆರಾವನ್ನು ಇಲ್ಲಿ ಪ್ರಮಾಣಕವಾಗಿ ಸೇರಿಸಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ 14e ಜನ್ 2 ಕ್ರೋಮ್‌ ಬೆಲೆ $334 (ಸುಮಾರು ರೂ. 24,300), ಲೆನೊವೊ 100e ಜನ್ 3 ಬೆಲೆ $ 299 (ಸುಮಾರು ರೂ. 21,800), ಲೆನೊವೊ 300e ಜನ್ 3 ಬೆಲೆ $ 359 (ಸುಮಾರು ರೂ. 26,000) ಮತ್ತು ಲೆನೊವೊ 500e ಜನ್ 3 ಬೆಲೆ $ 429 (ಸುಮಾರು 31,200 ರೂ.)ಬೆಲೆಯನ್ನು ಹೊಂದಿವೆ. ಇನ್ನು ಲೆನೊವೊ 100e, 300e, ಮತ್ತು 500e ಬೂದು ಬಣ್ಣದ ಫಿನಿಶ್ ಹೊಂದಿದ್ದು, ಎಲ್ಲಾ ನಾಲ್ಕು ಮಾದರಿಗಳು ಮೇ ತಿಂಗಳಲ್ಲಿ ಸೇಲ್‌ ಆಗಲಿವೆ.

Best Mobiles in India

English summary
Lenovo 14e Gen 2, 100e Gen 3, 300e Gen 3, 500e Gen 3 Education-Focussed Chromebook Models Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X