Home
ಸುದ್ದಿಜಾಲ

ಸದ್ಯದಲ್ಲೇ ಬರಲಿದೆ ಲೆನೊವೊ ಯೋಗ ಏರ್ 14s 2023 ಲ್ಯಾಪ್‌ಟಾಪ್‌! ಫೀಚರ್ಸ್‌ ಹೇಗಿದೆ?

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಕಂಪೆನಿಗಳಲ್ಲಿ ಲೆನೊವೊ (Lenovo) ಕೂಡ ಒಂದಾಗಿದೆ. ತನ್ನ ವಿಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳ ಮೂಲಕ ಗ್ರಾಹಕರ ನೆಚ್ಚಿನ ಆಯ್ಕೆ ಎನಿಸಿಕೊಂಡಿದೆ. ಇದರಲ್ಲಿ ಲೆನೊವೊ ಯೋಗ ಲ್ಯಾಪ್‌ಟಾಪ್‌ಗಳು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಇದೀಗ ಲೆನೊವೊ ಯೋಗ ಶ್ರೇಣಿಯಲ್ಲಿ ಹೊಸ ಯೋಗ ಏರ್ 14s 2023 ಪರಿಚಯಿಸಲು ಮುಂದಾಗಿದೆ.

ಹೌದು, ಲೆನೊವೊ ಯೋಗ ಏರ್ 14s 2023 ಲ್ಯಾಪ್‌ಟಾಪ್‌ ಬಿಡುಗಡೆಗೆ ಸಿದ್ಧವಾಗಿದೆ. ಇದು 3K OLED ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಈ ಲ್ಯಾಪ್‌ಟಾಪ್ ಕಸ್ಟಮ್-ನಿರ್ಮಿತ AMD R7 7840S ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯದಲ್ಲೇ ಬರಲಿದೆ ಲೆನೊವೊ ಯೋಗ ಏರ್ 14s 2023 ಲ್ಯಾಪ್‌ಟಾಪ್‌! ಫೀಚರ್ಸ್‌ ಹೇಗಿದೆ

ಲೆನೊವೊ ಯೋಗ ಏರ್‌ 14s 2023 ಲ್ಯಾಪ್‌ಟಾಪ್‌ 14.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 3K OLED ಡಿಸ್‌ಪ್ಲೇ ಆಗಿರಲಿದ್ದು, 90Hz ರಿಫ್ರೆಶ್ ರೇಟ್‌ ಮತ್ತು 100% P3 ಕಲರ್‌ ಗ್ಯಾಮಟ್‌ ಅನ್ನು ನೀಡಲಿದೆ. ಇನ್ನು ಡಿಸ್‌ಪ್ಲೇ 600 ನೀಟ್ಸ್‌ ಬ್ರೈಟ್‌ನೆಸ್‌ ನೀಡಲಿದೆ.

ಇನ್ನು ಈ ಲ್ಯಾಪ್‌ಟಾಪ್‌ ಕಸ್ಟಮ್-ನಿರ್ಮಿತ AMD R7 7840S ಪ್ರೊಸೆಸರ್‌ನಲ್ಲಿ ರನ್‌ ಆಗಲಿದೆ. ಇದು R7 7840U ಪ್ರೊಸೆಸರ್‌ನ FP8 ಪ್ಯಾಕೇಜ್ಡ್ ಆವೃತ್ತಿಯಾಗಿದೆ. ಈ ಲ್ಯಾಪ್‌ಟಾಪ್ 32GB ಮತ್ತು 1TB SSD ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಇದು 70Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, 65W ಪವರ್ ಅಡಾಪ್ಟರ್ ಅನ್ನು ಬೆಂಬಲಿಸಲಿದೆ.

ಈ ಲ್ಯಾಪ್‌ಟಾಪ್‌ ಬೆಂಬಲಿಸುವ R7 7840S ಪ್ರೊಸೆಸರ್ ಒಂದು ಉನ್ನತ-ಕಾರ್ಯಕ್ಷಮತೆಯ ಪ್ರೊಸೆಸರ್ ಆಗಿದೆ. ಇದನ್ನು ತೆಳುವಾದ ಮತ್ತು ಹಗುರವಾದ ಲ್ಯಾಪ್‌ಟಾಪ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಲ್ಯಾಪ್‌ಟಾಪ್‌ನಲ್ಲಿ 6 ಸ್ಪೀಕರ್ ಸಂಯೋಜನೆಯನ್ನು ಬಳಸಲು ಸಾಧ್ಯವಿದೆ. ಅಲ್ಲದೆ ಲ್ಯಾಪ್‌ಟಾಪ್‌ ಬಾಡಿ ಮೇಲೆ CNC ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಸದ್ಯದಲ್ಲೇ ಬರಲಿದೆ ಲೆನೊವೊ ಯೋಗ ಏರ್ 14s 2023 ಲ್ಯಾಪ್‌ಟಾಪ್‌! ಫೀಚರ್ಸ್‌ ಹೇಗಿದೆ

ಪ್ರಸ್ತುತ ಈ ಲ್ಯಾಪ್‌ಟಾಪ್‌ನ ಪ್ರಮುಖ ಫೀಚರ್ಸ್‌ಗಳನಷ್ಟೇ ಲೆನೊವೊ ಬಹಿರಂಗಪಡಿಸಿದೆ. ಇದರ ಬೆಲೆ ಹಾಗೂ ಲಭ್ಯತೆ ವಿವರಗಳನ್ನು ಇನ್ನು ಕೂಡ ಬಹಿರಂಗಪಡಿಸಿಲ್ಲ. ಆದರಿಂದ ಈ ಲ್ಯಾಪ್‌ಟಾಪ್‌ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡುವ ನಿರೀಕ್ಷೆಯಿದೆ.

ಇನ್ನು ಲೆನೊವೊ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಲೆನೊವೊ ಟ್ಯಾಬ್‌ M9 ಬಿಡುಗಡೆ ಮಾಡಿದೆ. ಇದು M9 9 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 1,340 x 800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದೆ. ಇನ್ನು ಡಿಸ್‌ಪ್ಲೇ 78.1% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಟ್ಯಾಬ್‌ ಹಿಂಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿದೆ.

ಇನ್ನು ಲೆನೊವೊ ಟ್ಯಾಬ್‌ M9 ಮೀಡಿಯಾ ಟೆಕ್ ಹೆಲಿಯೊ G80 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದು ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಿದೆ ಎಂದು ಹೇಳಲಾಗಿದೆ.

ಲೆನೊವೊ ಟ್ಯಾಬ್‌ M9 ಹಿಂಭಾಗದಲ್ಲಿ ಆಟೋಫೋಕಸ್‌ ಲೆನ್ಸ್‌ ಹೊಂದಿರುವ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಆದರೆ ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ಲೆನೊವೊ ಟ್ಯಾಬ್‌ M9 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ಅನ್ನು ಮಾತ್ರ ಬೆಂಬಲಿಸುತ್ತದೆ. ಇದು ಬ್ಲೂಟೂತ್ 5.1, ಫೇಸ್ ಅನ್‌ಲಾಕ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Lenovo announces the Yoga Air 14s 2023 Notebook: Expected features details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+