5G ನೆಟ್‌ವರ್ಕ್‌ ಬೆಂಬಲಿಸುವ ವಿಶ್ವದ ಮೊದಲ ವಿಂಡೋಸ್ ಲ್ಯಾಪ್‌ಟಾಪ್ ಬಿಡುಗಡೆ!

|

ಟೆಕ್‌ ವಲಯದಲ್ಲಿ ಈಗಾಗಲೇ ಹಲವು ವೈವಿಧ್ಯಮಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಹಲವು ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಹಲವು ಕಂಪೆನಿಗಳು ಈಗಾಗಲೇ ಪರಿಚಯಿಸಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರಾಂಡ್‌ ಕಂಪೆನಿಗಳ ಲ್ಯಾಪ್‌ಟಾಪ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ಲೆನೊವೊ ಕಂಪೆನಿ ಕೂಡ ಒಂದಾಗಿದೆ. ಲೆನೊವೊ ಕಂಪೆನಿ ಈಗಾಗಲೇ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ತನ್ನ ಹೊಸ ಲೆನೊವೊ ಫ್ಲೆಕ್ಸ್‌ 5G ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಿದೆ. ಇನ್ನು ಈ ಹೊಸ ಲ್ಯಾಪ್‌ಟಾಪ್‌ 2 ಇನ್‌ 1 ಕನ್‌ವರ್ಟಿಬಲ್‌ ಲ್ಯಾಪ್‌ಟಾಪ್‌ ಇದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ 5G ನೆಟ್‌ವರ್ಕ್‌ ಅನ್ನು ಬೆಂಬಲಿಸುವ ವಿಶ್ವದ ಮೊದಲ ವಿಂಡೋಸ್ 10 ಲ್ಯಾಪ್‌ಟಾಪ್ ಆಗಿದೆ. ಸದ್ಯ ಈ ಹೊಸ ಲ್ಯಾಪ್‌ಟಾಪ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8CX 5G ಪ್ರೊಸೆಸರ್ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ

ಲೆನೊವೊ ಫ್ಲೆಕ್ಸ್ 5G ಲ್ಯಾಪ್‌ಟಾಪ್‌ 1080x1920 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು IPS ಡಿಸ್‌ಪ್ಲೇ 300 ನಿಟ್ಸ್ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ನ ಡಿಸ್‌ಪ್ಲೇ 16:9 ರಚನೆಯ ಅನುಪಾತವನ್ನು ಹೊಂದಿದೆ. ಅಷ್ಟೇ ಅಲ್ಲ ಲೆನೊವೊ ಕಂಪನಿಯು 2160x3840 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ ಮಾರುಕಟ್ಟೆಗಳಲ್ಲಿ UHD ಆಯ್ಕೆಯನ್ನು ಸಹ ನೀಡುತ್ತದೆ.

ಲ್ಯಾಪ್‌ಟಾಪ್‌

ಇದಲ್ಲದೆ ಈ ಲ್ಯಾಪ್‌ಟಾಪ್‌ 2.84GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8cx 5G ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೇಯೇ 8GB RAM ಮತ್ತು 512GB ಸಂಗ್ರಹ ಸಾಮರ್ಥ್ಯದ ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ 360 ಡಿಗ್ರಿ ಹಿಂಜ್ ಬಳಕೆದಾರರಿಗೆ ಸಾಧನವನ್ನು ತಿರುಗಿಸಲು ಮತ್ತು ಅದನ್ನು ಟ್ಯಾಬ್ಲೆಟ್ ಆಗಿ ಬಳಸಲು ಸಹ ಇದರಲ್ಲಿ ಅವಕಾಶವನ್ನ ನೀಡಲಾಗಿದೆ. ಅಲ್ಲದೆ ಇದನ್ನು ಟೆಂಟ್ ಮೋಡ್‌ನಲ್ಲಿ ಮೇಜಿನ ಮೇಲೆ ಜೋಡಿಸಬಹುದಾಗಿದೆ ಜೊತೆಗೆ ಉತ್ತಮ ಸೃಜನಶೀಲತೆಗಾಗಿ ಸಂಪೂರ್ಣವಾಗಿ ಸಮತಟ್ಟಾಗಿ ಇರಿಸಬಹುದಾಗಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ ಥಿಂಕ್‌ಶಟರ್ ಗೌಪ್ಯತೆ ಹೊದಿಕೆಯೊಂದಿಗೆ ಎಚ್‌ಡಿ 720p ವೆಬ್ ಕ್ಯಾಮೆರಾ ಇದೆ. ಹೆಚ್ಚುವರಿ ಐಆರ್ ಕ್ಯಾಮೆರಾ ಸಹ ಇದೆ ಮತ್ತು ಇದು ಫಿಂಗರ್ಪ್ರಿಂಟ್ ರೀಡರ್ ಅನ್ನು ಸಹ ಬೆಂಬಲಿಸುತ್ತದೆ. ಲೆನೊವೊ ಫ್ಲೆಕ್ಸ್ 5G ಎರಡು ಮುಂಭಾಗದ ಫೈರಿಂಗ್ ಸ್ಪೀಕರ್‌ಗಳನ್ನು ಡಾಲ್ಬಿ ಅಟ್ಮೋಸ್‌ನೊಂದಿಗೆ ಹೊಂದುವಂತೆ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ V5.0, 5G, ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌, ಒಂದು ಸಿಮ್ ಕಾರ್ಡ್ ಸ್ಲಾಟ್ ಮತ್ತು ಹೆಡ್‌ಫೋನ್ ಅನ್ನು ಹೊಂದಿದೆ.

ಲ್ಯಾಪ್‌ಟಾಪ್‌

ಸದ್ಯ ಈ ಲ್ಯಾಪ್‌ಟಾಪ್‌ ಕನ್ವರ್ಟಿಬಲ್ ಬದಿಯಲ್ಲಿ ಟಾಗಲ್ ಅನ್ನು ಹೊಂದಿದ್ದು, ಅದು ವೈ-ಫೈ ಮತ್ತು ಏರ್‌ಪ್ಲೇನ್ ಮೋಡ್ ನಡುವೆ ಸುಲಭವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಲೆನೊವೊ ಫ್ಲೆಕ್ಸ್ 5G 60Whr ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 24 ಗಂಟೆಗಳ ಲೋಕಲ್‌ ವೀಡಿಯೊ ಪ್ಲೇಬ್ಯಾಕ್ ಅನ್ನು ಹೊಂದಿದೆ.ಅಲ್ಲದೆ ವೈವಿಧ್ಯಮಯ ಮೋಡ್‌ಗಳಲ್ಲಿ ಬಳಕೆಯನ್ನು ಸಕ್ರಿಯಗೊಳಿಸಲು 360 ಡಿಗ್ರಿ ಹಿಂಜ್ ಹೊಂದಿದೆ. ಇನ್ನು ಲೆನೊವೊ ಫ್ಲೆಕ್ಸ್ 5G USನಲ್ಲಿ $1,399 (ಸುಮಾರು ರೂ .1,06,500) ಬೆಲೆಯನ್ನು ಹೊಂದಿದೆ.

Best Mobiles in India

English summary
Lenovo Flex 5G has been unveiled as the world's first Windows 10 laptop with 5G connectivity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X