Just In
- 13 hrs ago
ನಾಯ್ಸ್ ಬಡ್ಸ್ ಸೋಲೋ ಇಯರ್ಫೋನ್ ಲಾಂಚ್! 36 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
- 14 hrs ago
ಹೆಚ್ಪಿ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್ಟಾಪ್ ಬಿಡುಗಡೆ! ವಿಶೇಷತೆ ಏನು?
- 14 hrs ago
ಕಡಿಮೆ ಪ್ರೈಸ್ಟ್ಯಾಗ್ನಲ್ಲಿ ಲಭ್ಯವಿರುವ ಜಿಯೋ ಡೇಟಾ ವೋಚರ್ಗಳು!
- 15 hrs ago
ಭಾರತದ ಮಾರುಕಟ್ಟೆಯಲ್ಲಿ ರಿಯಲ್ಮಿ ನಾರ್ಜೊ 30 ಪ್ರೊ 5G ಸ್ಮಾರ್ಟ್‌ಫೋನ್ ಬಿಡುಗಡೆ!
Don't Miss
- News
ಅಮೆರಿಕಾದಲ್ಲಿ ಒಂದೇ ದಿನ 72721 ಜನರಿಗೆ ಕೊರೊನಾವೈರಸ್!
- Lifestyle
ಗುರುವಾರದ ಭವಿಷ್ಯ ಹೇಗಿದೆ ನೋಡಿ
- Automobiles
ಸಿಎನ್ಜಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಮಾರುತಿ ಸುಜುಕಿ
- Sports
ಐಎಸ್ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ
- Education
University Of Mysore Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Movies
ಬಿಗ್ಬಾಸ್ ಗೆ ಇನ್ನು ನಾಲ್ಕೇ ದಿನ: ಮನೆ ಹೇಗಿದೆ ಗೊತ್ತಾ?
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Lenovo Tab M10: ಲೆನೊವೊ ಕಂಪೆನಿಯಿಂದ ಹೊಸ ಟ್ಯಾಬ್ M10 ಲಾಂಚ್!
ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್‌ಗಳ ಮೂಲಕ ಲೆನೊವೊ ಕಂಪೆನಿ ಜನಪ್ರಿಯತೆ ಗಳಿಸಿದೆ. ಈಗಾಗ್ಲೆ ಹಲವು ವೈವಿದ್ಯ ಬಗೆಯ ಟ್ಯಾಬ್‌ಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿರೋ ಲೆನೊವೋ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಆವೃತ್ತಿಯ ಟ್ಯಾಬ್ ಅನ್ನ ಲಾಂಚ್ ಮಾಡಿದೆ. ನವೀನ ಮಾದರಿಯ ಫೀಚರ್ಸ್‌ಗಳನ್ನ ಹೊಂದಿರುವ ಈ ಟ್ಯಾಬ್ ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಹೌದು ಸ್ಮಾರ್ಟ್ ಪ್ರಾಡಕ್ಟ್‌ಗಳ ಜನಪ್ರಿಯ ಕಂಪೆನಿ ಲೆನೊವೊ ಭಾರತದಲ್ಲಿ ಹೊಸ ಟ್ಯಾಬ್ M10 ಆರ್‌ಇಎಲ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದು, ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರಲ್ಲಿ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 13,990 ರೂ. ಬೆಲೆಯನ್ನ ಹೊಂದಿರುವ ಈ ಟ್ಯಾಬ್ಲೆಟ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿದೆ.
ಜೊತೆಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇಖಡಾ 5ರಷ್ಟು ರಿಯಾಯಿತಿ ದರದಲ್ಲಿ ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

ಇನ್ನು ಲೆನೊವೊ ಕಂಪೆನಿ ಹೊಸ ಟ್ಯಾಬ್ M10 ಟ್ಯಾಬ್ಲೆಟ್ 1920 x 1200 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 10.1-ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಹೊಂದಿದೆ. ಜೊತೆಗೆ ಈ ಟ್ಯಾಬ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 450 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ 3GB RAM + 32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನ ಒಳಗೊಂಡಿದ್ದು, ಮೈಕ್ರೋ ಯುಎಸ್‌ಬಿ ಪೋರ್ಟ್ ಮೂಲಕ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಲೆನೊವೊ ಕಂಪೆನಿಯ ಹೊಸ ಟ್ಯಾಬ್ M10 REL ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನ ಒಳಗೊಂಡಿದೆ. ಇದಲ್ಲದೆ, ಈ ಟ್ಯಾಬ್ 7,000mAh ಬ್ಯಾಟರಿ ಪ್ಯಾಕ್ ಆಪ್ ಹೊಂದಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ವಿ 4.2, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ವೈ-ಫೈ 802.11 ಎ/ ಬಿ/ ಜಿ/ ಎನ್/ ಎಸಿ, 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ ವೈರ್‌ಲೆಸ್ ಸಂಪರ್ಕವನ್ನು ಬೆಂಬಲಿಸುತ್ತದೆ.

ಲೆನೊವೊ ತನ್ನ ಟ್ಯಾಬ್ಲೆಟ್‌ನಲ್ಲಿ 1 ವರ್ಷದ ವಾರೆಂಟಿಯನ್ನು ಸಹ ನೀಡಿದ್ದು, 13,990 ರೂ. ಬೆಲೆಯನ್ನ ಹೊಂದಿದೆ. ಇನ್ನು ಈ ಟ್ಯಾಬ್ ಅನ್ನು ನೋ ಕಾಸ್ಟ್ ಇಎಂಐ ನಲ್ಲಿ ಖರೀದಿಸ ಬಹುದಾಗಿದ್ದು, ತಿಂಗಳಿಗೆ 1,166 ರೂಗಳಿಂದ ಪ್ರಾರಂಭವಾಗುತ್ತದೆ. ಇದಲ್ಲದೆ ಎಕ್ಸಚೇಂಜ್ ಆಫರ್‌ನಲ್ಲಿ 10,800 ರೂ.ಗಳವರೆಗೆ ರಿಯಾಯಿತಿ ನೀಡಲಾಗಿದ್ದು, ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190