Home
ಸುದ್ದಿಜಾಲ

ಲೆನೊವೊದಿಂದ ಪವರ್‌ಫುಲ್‌ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌! ಹೇಗಿದೆ ಫೀಚರ್ಸ್‌?

ಇಂದಿನ ಜಮಾನದಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಅದಕ್ಕೆ ಅನುಗುಣವಾಗಿ ಹಲವು ಬ್ರ್ಯಾಂಡ್‌ಗಳು ಕೂಡ ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದೀಗ ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಲೆನೊವೊ ಕಂಪೆನಿ ಹೊಸ ಲೆನೊವೊ ಲೀಜನ್ ಪ್ರೊ 7i Gen 8 ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ.

ಹೌದು, ಲೆನೊವೊ ಕಂಪೆನಿ ಹೊಸ ಲೆನೊವೊ ಲೀಜನ್ ಪ್ರೊ 7i Gen 8 ಗೇಮಿಂಗ್‌ ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ ಅತ್ಯಂತ ಶಕ್ತಿಶಾಲಿ AI-ಟ್ಯೂನ್ಡ್ ಗೇಮಿಂಗ್‌ ಲ್ಯಾಪ್‌ಟಾಪ್‌ ಎಂದು ಹೇಳಲಾಗಿದೆ. ಇದು ಗೇಮರುಗಳು, ಕಂಟೆಂಟ್‌ ಕ್ರಿಯೆಟರ್ಸ್‌ ಮತ್ತು ಸ್ಟ್ರೀಮರ್‌ಗಳಿಗೆ ಸೂಕ್ತವಾದ ವಿನ್ಯಾಸದೊಂದಿಗೆ ಎಂಟ್ರಿ ನೀಡಿದೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊದಿಂದ ಪವರ್‌ಫುಲ್‌ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌! ಹೇಗಿದೆ ಫೀಚರ್ಸ್‌?

ಲೆನೊವೊ ಲೀಜನ್ ಪ್ರೊ 7i Gen 8 ಗೇಮಿಂಗ್‌ ಲ್ಯಾಪ್‌ಟಾಪ್ ಅಸಾಧಾರಣವಾದ ಕಾರ್ಯಕ್ಷಮತೆಯನ್ನು ನೀಡಲಿದೆ. ಇನ್ನು ಈ ಲ್ಯಾಪ್‌ಟಾಪ್‌ AI-ಟ್ಯೂನ್ ಮಾಡಿದ ಕಾರ್ಯಕ್ಷಮತೆ ಮತ್ತು ಗ್ರಾಫಿಕ್ಸ್‌ನಿಂದಾಗಿ ಕಂಟೆಂಟ್‌ ಅನ್ನು ಮತ್ತೊಂದು ಲೆವೆಲ್‌ಗೆ ಕರೆದೊಯ್ಯಲಿದೆ ಎಂದು ಹೇಳಲಾಗಿದೆ. ಇದು 16 ಇಂಚಿನ ಲೆನೊವೊ ಪ್ಯೂರ್‌ಸೈಟ್ ಗೇಮಿಂಗ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಅದ್ಭುತವಾದ ದೃಶ್ಯವನ್ನು ವ್ಯೂ ಮಾಡಿದ ಅನುಭವ ನೀಡಲಿದೆ.

ಇನ್ನು ಲ್ಯಾಪ್‌ಆಪ್‌ ಡಿಸ್‌ಪ್ಲೇ ಅತ್ಯದ್ಬುತವಾದ ರೆಸಲ್ಯೂಶನ್ ಮತ್ತು ರಿಫ್ರೆಶ್ ರೇಟ್‌ಗಳನ್ನು ನೀಡಲಿದೆ. ಇದರ AI ಸಾಮರ್ಥ್ಯಗಳು HDR ಗಾಗಿ ಗೇಮ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಆಪ್ಟಿಮೈಜ್ ಮಾಡಲು ಅವಕಾಶ ನೀಡಲಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ RGB ಲೈಟ್-ಅಪ್ ಕೀಬೋರ್ಡ್ ವಿನ್ಯಾಸ ಸಾಕಷ್ಟು ಅಡ್ವಾನ್ಸ್‌ ಆಗಿದ್ದು, ಕೂಲಿಂಗ್‌ ಟೆಕ್ನಾಲಜಿಯ ಕಾರಣದಿಂದಾಗಿ ಲೀಜನ್ ಕೋಲ್ಡ್‌ಫ್ರಂಟ್ 5.0 ಕಾರ್ಯನಿರ್ವಹಿಸಲಿದೆ.

ಲೆನೊವೊದಿಂದ ಪವರ್‌ಫುಲ್‌ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌! ಹೇಗಿದೆ ಫೀಚರ್ಸ್‌?

ಇದಲ್ಲದೆ ಈ ಲ್ಯಾಪ್‌ಟಾಪ್‌ 13 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಎನ್‌ವಿಡಿಯಾ ಜಿಫೋರ್ಸ್‌ RTX 40 ಸರಣಿ GPU ನೊಂದಿಗೆ ಬರಲಿದೆ. ಇನ್ನು ಲ್ಯಾಪ್‌ಟಾಪ್ ರೇ ಟ್ರೇಸಿಂಗ್ ಕ್ಯಾಪಸಿಟಿ ಮತ್ತು ಅತ್ಯುತ್ತಮ ಗ್ರಾಫಿಕ್ಸ್ ಅನ್ನು ನೀಡಲಿದ್ದು, ಗೇಮಿಂಗ್‌ಗೆ ಉತ್ತಮ ಆಯ್ಕೆಯಾಗಿದೆ.

ಲೆನೊವೊ ಲೀಜನ್ ಪ್ರೊ 7i Gen 8 ಗೇಮಿಂಗ್‌ ಲ್ಯಾಪ್‌ಟಾಪ್‌ ಬೆಲೆ £2,817 (ಅಂದಾಜು 2,78,988ರೂ) ಆಗಿದೆ. ಆದರೆ ಚೆಕ್‌ಔಟ್‌ನಲ್ಲಿ SAVE15 ಕೋಡ್ ಅನ್ನು ಬಳಸಿದರೆ Lenovo ಪ್ರಸ್ತುತ ತನ್ನ ವೆಬ್‌ಸೈಟ್‌ನಲ್ಲಿ 15% ರಿಯಾಯಿತಿಯನ್ನು ನೀಡುತ್ತಿದೆ.

ಲೆನೊವೊದಿಂದ ಪವರ್‌ಫುಲ್‌ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌! ಹೇಗಿದೆ ಫೀಚರ್ಸ್‌?

ಇನ್ನು ಲೆನೊವೊ ಕಂಪೆನಿ ಇತ್ತೀಚಿಗೆ ಲೆನೊವೊ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಇದು 15 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ವೀಡಿಯೋ ವೀಕ್ಷಣೆ ಮತ್ತು ಗೇಮಿಂಗ್‌ನಲ್ಲಿ ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ AMD Ryzen 3 7320U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, AMD Radeon 610M ಗ್ರಾಫಿಕ್ಸ್‌ ಕಾರ್ಡ್‌ ಹೊಂದಿದೆ.

ಈ ಲ್ಯಾಪ್‌ಟಾಪ್ ಮೂಲಕ ಬಳಕೆದಾರರು ಮಲ್ಟಿಟಾಸ್ಕ್ ಅನ್ನು ಸುಲಭವಾಗಿ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ನೀವು ಆನ್‌ಲೈನ್‌ ತರಗತಿಗಳನ್ನು ಅಟೆಂಡ್‌ ಮಾಡುವುದಕ್ಕೆ ಹಾಗೂ ಸ್ನೇಹಿತರ ಜೊತೆಗೆ ಸಂವಹನ ನಡೆಸುವುದಕ್ಕೆ ಅವಕಾಶ ದೊರೆಯಲಿದೆ. ಜೊತೆಗೆ ನಿಮ್ಮ ನೆಚ್ಚಿನ ಆನ್‌ಲೈನ್‌ ಪ್ರೋಗ್ರಾಂಗಳನ್ನು ಸ್ಟ್ರೀಮ್‌ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಆದರಿಂದ ಇದು ವಿಸ್ತೃತ ಖಾತರಿ ಮತ್ತು ಅತ್ಯುತ್ತಮ-ದರ್ಜೆಯ ಕಾರ್ಯಕ್ಷಮತೆಯ ಡಿವೈಸ್‌ ಆಗಿದೆ ಎಂದು ಲೆನೊವೊ ಇಂಡಿಯಾದ ಡೈರೆಕ್ಟರ್ ಆಪ್‌ ಕನ್ಸೂಮರ್ ಬಿಸಿನೆಸ್ ದಿನೇಶ್ ನಾಯರ್ ಹೇಳಿದ್ದಾರೆ.

Best Mobiles in India

English summary
The Lenovo Legion Pro 7i Gen 8 takes things to the next level with its AI-tuned performance and graphics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+