ಭಾರತದಲ್ಲಿ ಲೆನೊವೊ HD116 ವೈರ್‌ಲೆಸ್ ಹೆಡ್‌ಫೋನ್ ಬಿಡುಗಡೆ!
ಇತ್ತೀಚಿನ ದಿನಗಳಲ್ಲಿ ಟೆಕ್ ಮಾರುಕಟ್ಟೆಯಲ್ಲಿ ವಾಯರ್‌ಲೆಸ್ ಹೆಡ್‌ಫೋನ್‌ಗಳು ಭಾರಿ ಬೇಡಿಕೆಯನ್ನ ಪಡೆದುಕೊಂಡಿವೆ. ಈಗಾಗ್ಲೆ ಹಲವಾರು ಕಂಪೆನಿಗಳ ವೈವಿಧ್ಯಮಯ ವಾಯರ್‌ಲೆಸ್ ಹೆಡ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯ ಇದೀಗ ಈಗಾಗ್ಲೆ ಎಲೆಕ್ಟ್ರಾನಿಕ್ಸ್ ಉತ್ತನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಲೆನೊವೊ ಕಂಪೆನಿ ತನ್ನ ಹೊಸ ಹೆಡ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು, ಚೀನಾ ಮೂಲದ ಲೆನೊವೊ ಕಂಪೆನಿ ತನ್ನ ಹೊಸ ಎಚ್‌ಡಿ 116 ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ, ಇದು ಇಕ್ಯೂ ಟೆಕ್ನಾಲಜಿಯನ್ನ ಹೊಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ ಎಂದು ಹೇಳಲಾಗ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಈ ಹೆಡ್‌ಫೋನ್‌ಗಳ ಬೆಲೆ 2,499 ರೂ ಆಗಿದ್ದು, ಆಕರ್ಷಕ ಫೀಚರ್ಸ್‌ಗಳನ್ನ ಒಳಗೊಂಡಿದೆ. ಜೊತೆಗೆ ಈ ಹೆಡ್‌ಫೋನ್‌ಗಳು ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸುವ ಸಾಮರ್ಥ್ಯವನ್ನು ಒಳಗೊಂಡಿವೆ.

ಲೆನೊವೊ HD116 ವೈರ್‌ಲೆಸ್ ಹೆಡ್‌ಫೋನ್
ಲೆನೊವೊ ಕಂಪೆನಿಯ ಹೊಸ HD116 ವೈರ್‌ಲೆಸ್ ಹೆಡ್‌ಫೋನ್ ಇಕ್ಯೂ ಟೆಕ್ನಾಲಜಿಯನ್ನ ಒಳಗೊಂಡಿದ್ದು, ಬಳಕೆದಾರರಿಗೆ ಉತ್ತಮ ಆಡಿಯೋ ಅನುಭವವನ್ನು ನೀಡಲಿದೆ. ಅಲ್ಲದೆ ಕಿವಿಗೆ ತಕ್ಕಂತೆ ಹೊಂದಿಕೊಳ್ಳುವ ವಿನ್ಯಾಸವನ್ನ ಈ ಹೆಡ್‌ಫೊನ್‌ಗಳು ಹೊಂದಿದ್ದು.ಸೌಂಡ್ ಸಿಸ್ಟಮ್ ಕೂಡ ಅತ್ಯುತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಈ ಹೆಡ್‌ಫೋನ್‌ಗಳಲ್ಲಿ ಸ್ಟ್ಯಾಂಡರ್ಡ್ ಮೋಡ್ ಸಹ ಇದ್ದು ಇದು ಪ್ಯೂರ್ ಮ್ಯೂಸಿಕ್ ಹಾಗೂ ಹೈಯರ್ ಬಾಸ್ ಸಿಸ್ಟಂ ಅನ್ನು ಹೊಂದಿದೆ

ವಿನ್ಯಾಸ
ಈ ಹೆಡ್‌ಫೋನ್ HSP/HFP/AVRCP/A2DP ಡ್ಯುಯಲ್ ಇಕ್ಯೂ ಮೋಡ್ ಅನ್ನು ಹೊಂದಿದ್ದು, ಪ್ಯೂರ್ ಮ್ಯೂಸಿಕ್ ಹಾಗೂ ಹೈಯರ್ ಬಾಸ್ ಬದಲಾಯಿಸಲು ಇಕ್ಯೂ ಟೆಕ್ ಅನ್ನು ನೀಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಒಂದೇ ಬಟನ್ ಮೂಲಕ ಪ್ಯೂರ್ ಮ್ಯೂಸಿಕ್ ಹಾಗೂ ಹೈಯರ್ ಬಾಸ್ ಈ ಎರಡು ವಿಧಾನಗಳನ್ನ ಬದಲಾಯಿಸಲು ಇಕ್ಯೂ ಮೋಡ್ ನಿಮಗೆ ಅವಕಾಶ ನೀಡಲಿದೆ.

ವಿಶೇಷತೆ
ಇನ್ನು ಈ ಹೊಸ ಲೆನೊವೊ ಹೆಡ್‌ಫೋನ್‌ಗಳು 240 ಹೆಚ್ ಸ್ಟ್ಯಾಂಡ್‌ಬೈ ಟೈಂ ಬ್ಯಾಟರಿ ಬ್ಯಾಕ್‌ಆಪ್ ಹೊಂದಿದ್ದು, 24 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೆ HD116 ಹೆಡ್‌ಫೋನ್ ಅನ್ನು ಗ್ರಾಹಕರಿಗೆ ಧ್ವನಿ ಗುಣಮಟ್ಟ ಮತ್ತು ವೈರ್‌ಲೆಸ್ ಅನುಕೂಲತೆಯ ನಾನ್‌ಸ್ಟಾಪೆಬಲ್ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಉತ್ತಮ ಧ್ವನಿ ಮತ್ತು ಉತ್ತಮ ಬ್ಲೂಟೂತ್ ಕನೆಕ್ಟಿವಿಟಿಯ ಬೆಂಬಲವನ್ನು ಹೊಂದಿದ್ದು, ಉತ್ತಮ ಅನುಭವ ನೀಡಲಿದೆ.

ಬೆಲೆ ಮತ್ತು ಲಭ್ಯತೆ
HD116 ವಾಯರ್ ಲೆಸ್ ಹೆಡ್‌ಫೋನ್‌ಗಳು 2,499ರೂ ಬೆಲೆಯನ್ನ ಹೊಂದಿದ್ದು, ಇ-ಕಾಮರ್ಸ್ ದೈತ್ಯ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ. ಅಲ್ಲದೆ ಅತಿ ಶೀಘ್ರದಲ್ಲೇ ಈ ತಿಂಗಳ ಅಂತ್ಯದ ವೇಳೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಕೂಡ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.


Click it and Unblock the Notifications








