ಲೆನೊವೋ ಐಡಿಯಾಪ್ಯಾಡ್ ಡ್ಯುಯೆಟ್ ಮತ್ತು ಫ್ಲೆಕ್ಸ್ 5 ಬಿಡುಗಡೆ!

|

ಲೆನೊವೋ ಕಂಪೆನಿ ಲಾಸ್‌ವೇಗಸ್‌ ನಲ್ಲಿ ನಡೆಯುತ್ತಿರುವ 2020 ರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ ಮೇಳದಲ್ಲಿ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಡಿಸ್‌ಪ್ಲೇ,ಗೇಮಿಂಗ್‌ ಮಾನಿಟರ್‌, ಪೆರಿಫೆರಲ್ಸ್, ಫೋಲ್ಡೆಬಲ್‌ ಲ್ಯಾಪ್‌ಟಾಪ್‌,ಸೇರಿದಂತೆ ಹೊಸ ಮಾದರಿಯ ವೈವಿಧ್ಯಮಯ ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನ ಲಾಂಚ್‌ ಮಾಡಿದೆ. ಅದರಲ್ಲೂ ರೆಗ್ಯುಲರ್‌ ಲ್ಯಾಪ್‌ಟಾಪ್‌, ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿದೆ. ಇವೆಲ್ಲವುಗಳ ಜೊತೆಗೆ, ಲೆನೊವೋ ಐಡಿಯಾಪ್ಯಾಡ್ ಡ್ಯುಯೆಟ್ ಮತ್ತು ಲೆನೊವೊ ಐಡಿಯಾಪ್ಯಾಡ್ ಫ್ಲೆಕ್ಸ್ 5 ಎಂಬ ಎರಡು ಹೊಸ ಕ್ರೋಮ್‌ಬುಕ್‌ಗಳನ್ನು ಸಹ ಬಿಡುಗಡೆ ಮಾಡಿದೆ.

ಹೌದು

ಹೌದು, ಚೀನಾ ಮೂಲದ ಲೆನೊವೋ ಕಂಪೆನಿ ಈಗಾಗ್ಲೆ ಗ್ರಾಃಕರನ್ನ ಆಕರ್ಷಿಸುವಂತ ಲ್ಯಾಪ್‌ಟಾಪ್‌ಗಳನ್ನ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ ನಲ್ಲಿ ಲಾಂಚ್‌ ಮಾಡಿದ್ದು, ಅವುಗಳ ವಿಶೇಷತೆಯೇನು ಅನ್ನೊದನ್ನ ಬಹಿರಂಗ ಪಡಿಸಿದೆ. ಅದರಲ್ಲೂ ಲೆನೊವೋ ಐಡಿಯಾಪ್ಯಾಡ್ ಡ್ಯುಯೆಟ್ ಮತ್ತು ಲೆನೊವೋ ಐಡಿಯಾಪ್ಯಾಡ್ ಫ್ಲೆಕ್ಸ್ 5 ಎಂಬ ಎರಡು ಕ್ರೋಮ್‌ಗಳನ್ನ ಬಿಡುಗಡೆ ಮಾಡಿದ್ದು, ಗ್ರಾಹಕರನ್ನ ಆಕರ್ಷಿಸಿದೆ. ಅಷ್ಟಕ್ಕೂ ಈ ಕ್ರೋಮ್‌ಬುಕ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ಓದಿ.

ಲೆನೊವೊ ಐಡಿಯಾಪ್ಯಾಡ್ ಡ್ಯುಯೆಟ್

ಲೆನೊವೊ ಐಡಿಯಾಪ್ಯಾಡ್ ಡ್ಯುಯೆಟ್

ಲೆನೊವೊ ಐಡಿಯಾಪ್ಯಾಡ್‌ ಡ್ಯುಯೆಟ್‌ ಪಿಕ್ಸೆಲ್ ಸ್ಲೇಟ್ ವಿನ್ಯಾಸವನ್ನ ಹೊಂದಿದ್ದು, 10.1-ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಡಿಟ್ಯಾಚೇಬಲ್ ಕೀಬೋರ್ಡ್, ಮತ್ತು ಫುಲ್‌ ಕೀಬೋರ್ಡ್ ಮತ್ತು ಟ್ರ್ಯಾಕ್‌ಪ್ಯಾಡ್ ಅನ್ನು ಒಳಗೊಂಡಿದೆ. ಇನ್ನು ಲೆನೊವೊ ಐಡಿಯಾಪ್ಯಾಡ್ ಡ್ಯುಯೆಟ್ 8 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಕ್ರೋಮ್‌ಬುಕ್‌ ಮೀಡಿಯಾ ಟೆಕ್ ಹೆಲಿಯೊ ಪಿ 60ಟಿ ಸೋಕ್ ಪ್ರೊಸೆಸರ್‌ ಹೊಂದಿದ್ದು, 4GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಒಂದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಕಿಕ್‌ಸ್ಟ್ಯಾಂಡ್ ಒಳಗೊಂಡಿದೆ. ಜೊತೆಗೆ ಸಾಫ್ಟ್‌ವೇರ್ ಅಪ್‌ಡೇಟ್ ಬೆಂಬಲವನ್ನು 8 ವರ್ಷಗಳವರೆಗೆ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಐಡಿಯಾಪ್ಯಾಡ್ ಫ್ಲೆಕ್ಸ್ 5

ಐಡಿಯಾಪ್ಯಾಡ್ ಫ್ಲೆಕ್ಸ್ 5

ಐಡಿಯಾಪ್ಯಾಡ್ ಫ್ಲೆಕ್ಸ್ 5, 10th gen ಇಂಟೆಲ್ ಕೋರ್ i5 ಹೊಂದಿದ್ದು, ಇದು 360 ಡಿಗ್ರಿ ಹಿಂಜ್ ಹೊಂದಿರುವ 2-ಇನ್ -1 ಡಿವೈಸ್‌ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ 13.3 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 300 ನಿಟ್ಸ್ ಗರಿಷ್ಠ ಶೈನಿಂಗ್‌ ಬ್ರೈಟ್‌ನೆಶ್‌ ಅನ್ನ ಒಳಗೊಂಡಿದೆ. ಅಲ್ಲದೆ 8GB RAM ಮತ್ತು 64GB emmc ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಜೊತೆಗೆ ಐಡಿಯಾಪ್ಯಾಡ್ ಫ್ಲೆಕ್ಸ್ 5 ನಲ್ಲಿನ ಕೀಬೋರ್ಡ್ ಬ್ಯಾಕ್-ಲಿಟ್ ಆಗಿದೆ. ಅಲ್ಲದೆ ಇದು ಎರಡೂ ಬದಿಗಳಲ್ಲೂ 2W ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಈ ಕ್ರೋಮ್‌ಬುಕ್‌ 10 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ವೈ-ಫೈ 6 ಅನ್ನು ಸಹ ಹೊಂದಿದೆ.

ಇನ್ನು

ಇನ್ನು ಸಿಇಎಸ್‌ ಸಮ್ಮೇಳನದಲ್ಲಿ ಆಸುಸ್ ಕಂಪೆನಿ ಕೂಡ 15.6-ಇಂಚಿನ ಡಿಸ್‌ಪ್ಲೇ ಹೊಂದಿರುವ A15 ಮತ್ತು 17.3-ಇಂಚಿನ ಡಿಸ್ಪ್ಲೇ ಹೊಂದಿರುವ A17 ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದ್ದು. ಈ 2 ಲ್ಯಾಪ್‌ಟಾಪ್‌ಗಳು 10th gen ಇಂಟೆಲ್ ಕೋರ್ ಪ್ರೊಸೆಸರ್ ಹೊಂದಿದೆ. ಇನ್ನು ಸ್ಯಾಮ್‌ಸಂಗ್‌ ಕಂಪೆನಿ ಕೂಡ ಪ್ರೀಮಿಯಂ ಕ್ರೋಮ್‌ಬುಕ್ ಅನ್ನು ಬಿಡುಗಡೆ ಮಾಡಿದೆ. ಇದು ಕೇವಲ 0.4 ಇಂಚು ದಪ್ಪವಿರುವ 13.3-ಇಂಚಿನ 4 ಕೆ ಯುಹೆಚ್‌ಡಿ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದ್ದು, ಇದು 10th gen ಇಂಟೆಲ್ ಕೋರ್ ಐ 5 ಪ್ರೊಸೆಸರ್ ಹೊಂದಿದೆ. ಅಲ್ಲದೆ ಏಸರ್‌ ಕಂಪೆನಿ ಕೂಡ ಟ್ರಾವೆಲ್‌ಮೇಟ್ ಪಿ 6 ಮತ್ತು ಟ್ರಾವೆಲ್ಮೇಟ್ ಪಿ 2 ಲಾಂಚ್‌ ಮಾಡಿದ್ದು, ಇದು 23 ಗಂಟೆಗಳ ಬ್ಯಾಟರಿ ಅವಧಿ ಬಾಳಿಕೆ ಬರಲಿದ್ದು, ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Lenovo IdeaPad Duet is powered by MediaTek Helio P60T SoC with 4GB RAM and 128GB internal storage. The company also promises software update support for up to 8 years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X