Home
ಸುದ್ದಿಜಾಲ

ಲೆನೊವೊದಿಂದ ಹೊಸ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ ಅನಾವರಣ! ವಿಶೇಷತೆ ಏನು?

ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯಲ್ಲಿ ಲೆನೊವೊ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಲೆನೊವೊ ಕಂಪೆನಿ ಕೂಡ ವಿವಿಧ ಮಾದರಿಯ ಪ್ರಾಡಕ್ಟ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಲೆನೊವೊ ಐಡಿಯಾಪ್ಯಾಡ್‌ ಫ್ಲೆಕ್ಸ್‌ 3i ಟು ಇನ್‌ ಒನ್‌ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ ಅನಾವರಣಗೊಳಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES) 2023 ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇನ್ನು ಈ ಈವೆಂಟ್‌ ಇದೇ ಜನವರಿ 5 ಮತ್ತು ಜನವರಿ 8 ರ ನಡುವೆ ಲಾಸ್ ವೇಗಾಸ್‌ನಲ್ಲಿ ನಡೆಯಲಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಹೊಸ ಐಡಿಯಾಪ್ಯಾಡ್ ಫ್ಲೆಕ್ಸ್ 3i ಕ್ರೋಮ್‌ಬುಕ್‌ ಬಿಡುಗಡೆ ಮಾಡಿದೆ. ಇದು 12 ಗಂಟೆಗಳವರೆಗೆ ಲಾಂಗ್‌ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಲೆನೊವೊ ಹೇಳಿಕೊಂಡಿದೆ. ಇನ್ನು ಈ ಕ್ರೋಮ್‌ಬುಕ್‌ ಫಿಸಿಕಲ್‌ ಶಟರ್‌ನೊಂದಿಗೆ HD ಅಥವಾ ಫುಲ್‌ಹೆಚ್‌ಡಿ ಕ್ಯಾಮರಾವನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಿದೆ. ಇದಲ್ಲದೆ ಪ್ರೈವೆಸಿಗಾಗಿ ಮ್ಯೂಟ್ ಕೀಯನ್ನು ಕೂಡ ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಕ್ರೋಮ್‌ಬುಕ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

ಲೆನೊವೊ ಐಡಿಯಾಪ್ಯಾಡ್‌ ಫ್ಲೆಕ್ಸ್‌ 3i ಟು ಇನ್‌ ಒನ್‌ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ 12.2 ಇಂಚಿನ IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1920 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. 300 ಗರಿಷ್ಠ ಬ್ರೈಟ್‌ನೆಸ್‌ ಮತ್ತು TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್‌ ಪ್ರಮಾಣೀಕರಣದೊಂದಿಗೆ ಬರುತ್ತದೆ. ಜೊತೆಗೆ ಈ ಲ್ಯಾಪ್‌ಟಾಪ್ ಅನ್ನು ನಿಮಗೆ ಬೇಕಾದ ಹಾಗೇ ಮಡಚಬಹುದಾಗಿದೆ. ಇದಕ್ಕಾಗಿ 360-ಡಿಗ್ರಿ ಹಿಂಜ್ ಅನ್ನು ಕೂಡ ಹೊಂದಿದೆ.

ಕ್ರೋಮ್‌ಬುಕ್‌

ಇನ್ನು ಈ ಕ್ರೋಮ್‌ಬುಕ್‌ ಇಂಟೆಲ್ ಪ್ರೊಸೆಸರ್ N100 ಅಥವಾ ಇಂಟೆಲ್‌ ಪ್ರೊಸೆಸರ್ N200 ವೇಗವನ್ನು ಪಡೆದಿದೆ. ಇದು ಗೂಗಲ್‌ನ ಕ್ರೋಮ್‌OS ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB ಅಥವಾ 8GB RAM ಮತ್ತು 64GB ಅಥವಾ 128GB ಸ್ಟೋರೇಜ್‌ ಬಲವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಈ ಲ್ಯಾಪ್‌ಟಾಪ್‌ 720p ಅಥವಾ 1080p ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಈ ಕ್ರೋಮ್‌ಬುಕ್‌ 12 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ.

ಐಡಿಯಾಪ್ಯಾಡ್‌

ಲೆನೊವೊ ಐಡಿಯಾಪ್ಯಾಡ್‌ ಫ್ಲೆಕ್ಸ್‌ 3i ಕ್ರೋಮ್‌ಬುಕ್‌ ಮ್ಯಾಕ್ಸ್‌ಆಡಿಯೋ ಜೊತೆಗೆ ಎರಡು 2W ಸ್ಟಿರಿಯೊ ಸ್ಪೀಕರ್‌ಗಳನ್ನು ಕೂಡ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇಂಟೆಲ್ Wi-Fi 6 6E, Wi-Fi ಕಾರ್ಡ್‌ನೊಂದಿಗೆ ಬ್ಲೂಟೂತ್ 5.2 ಕಾಂಬೊ, ಮೈಕ್ರೋ SD ಕಾರ್ಡ್ ಸ್ಲಾಟ್, USB 3.2 Gen 2 ಟೈಪ್-C ಪೋರ್ಟ್, ಎರಡು USB 3.2 Gen1 ಟೈಪ್-A ಪೋರ್ಟ್, ಕಾಂಬೊ ಆಡಿಯೊ ಜ್ಯಾಕ್ ಮತ್ತು HDMI 1.4 ಅನ್ನು ಬೆಂಬಲಿಸಲಿದೆ. ಇದಲ್ಲದೆ ವೇವ್ಸ್‌ ಮ್ಯಾಕ್ಸ್‌ ಆಡಿಯೋನಿಂದ ಟ್ಯೂನ್ ಮಾಡಲಾದ ಎರಡು ಯೂಸರ್‌-ಫೇಸಿಂಗ್ ಸ್ಪೀಕರ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಐಡಿಯಾಪ್ಯಾಡ್‌ ಫ್ಲೆಕ್ಸ್‌ 3i ಕ್ರೋಮ್‌ಬುಕ್‌ ಜಾಗತಿಕ ಮಾರುಕಟ್ಟೆಯಲ್ಲಿ $349.99 (ಅಂದಾಜು 28,939ರೂ)ಬೆಲೆಯಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಮೇ 2023 ರಿಂದ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಲೆನೊವೊ ಕಂಪೆನಿ ಹೇಳಿದೆ. ಆದರೆ ಇದರ ದೇಶ-ವಾರು ಲಭ್ಯತೆಯನ್ನು ವಿವರಿಸಿಲ್ಲ. ಇನ್ನು ಈ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ ಕ್ಲೌಡ್ ಗ್ರೇ ಮತ್ತು ಅಬಿಸ್ ಬ್ಲೂ ಬಣ್ಣದ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Lenovo IdeaPad Flex 3i Chromebook launched : Check price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+