ಭಾರತೀಯ ಮಾರುಕಟ್ಟೆಗೆ ಲೆನೊವಾ ಸ್ಮಾರ್ಟ್‌ ಪ್ರಾಡಕ್ಟ್‌ಗಳು ಎಂಟ್ರಿ!

|

ಎಲೆಕ್ಟ್ರಾನಿಕ್‌ ಬ್ರ್ಯಾಂಡ್‌ಗಳಿಗೂ ಹೆಸರುವಾಸಿ ಆಗಿರುವ ಲೆನೊವಾ ಕಂಪೆನಿ ಸದ್ಯ ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್ ಡಿಸ್ಪ್ಲೇ, ಸ್ಮಾರ್ಟ್ ಬಲ್ಬ್ ಮತ್ತು ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಕೆಲವು ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಪ್ರಾಡಕ್ಟ್‌ಗಳೆಲ್ಲವೂ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲದಿಂದ ಧ್ವನಿ ಸಂಕೇತಗಳ ಮೂಲಕ ಕಾರ್ಯನಿರ್ವಹಿಸುತ್ತವೆ.

ಸ್ಮಾರ್ಟ್‌ಹೋಮ್‌

ಹೌದು ಸ್ಮಾರ್ಟ್‌ಹೋಮ್‌ ಪ್ರಾಡಕ್ಟ್‌ಗಳ ಉತ್ಪನದಲ್ಲಿ ಸಖತ್‌ ಸೌಂಡ್‌ ಮಾಡೋ ಲೆನೊವಾ ಭಾರತೀಯ ಗ್ರಾಹಕರಿಗೆ ಗೂಗಲ್ ಅಸಿಸ್ಟೆಂಟ್ ಮೂಲಕ ಕಾರ್ಯನಿರ್ವಹಣೆ ಮಾಡೋ ಸ್ಮಾರ್ಟ್ ಸಾಧನಗಳ ಶ್ರೇಣಿಯನ್ನು ಪರಿಚಯಿಸಿದೆ. 7 ಇಂಚಿನ ಡಿಸ್‌ಪ್ಲೇ, ಧ್ವನಿ ಸಂಕೇತವನ್ನ ಅನುಸರಿಸೋ ಸ್ಮಾರ್ಟ್ ಬಲ್ಬ್ ಮತ್ತು ಸ್ಮಾರ್ಟ್ ಕ್ಯಾಮೆರಾಗಳನ್ನ ಮಾರುಕಟ್ಟೆಗೆ ಬಿಟ್ಟಿದೆ. ಇನ್ನು ಈ ವರ್ಷದ ಆರಂಭದಲ್ಲಿ ಲೆನೊವೊ 10 ಇಂಚಿನ ಸ್ಮಾರ್ಟ್ ಡಿಸ್ಪ್ಲೇಯನ್ನು 14,999 ರೂ. ಬೆಲೆಯಲ್ಲಿ ಬಿಡುಗಡೆ ಮಾಡಿತ್ತು, ಅಲ್ಲದೆ ಸ್ಮಾರ್ಟ್ ಕ್ಲಾಕ್ ಅನ್ನು ಸಹ ಮಾರುಕಟ್ಟೆಗೆ ಪರಿಚಯಿಸಿತ್ತು.

ಲೆನೊವಾ

ಸದ್ಯ ಇದೀಗ ಮಾರುಕಟ್ಟೆಗ ಬಂದಿರುವ ಲೆನೊವಾ ಸ್ಮಾರ್ಟ್‌ ಹೋಮ್‌ ಪ್ರಾಡಕ್ಟ್‌ಗಳು ಅಗ್ಗದ ಬೆಲೆಯಿಂದ ಕೂಡಿದ್ದು, ಗ್ರಾಹಕರಿಗೆ ಕೈ ಗೆಟಕುವ ದರದಲ್ಲಿ ದೊರೆಯಲಿದೆ. ಹೊಸ 7 ಇಂಚಿನ ಸ್ಮಾರ್ಟ್ ಡಿಸ್ಪ್ಲೇ 10 ಇಂಚಿನ ಡಿಸ್ಪ್ಲೇನ ಅಗ್ಗದ ಆವೃತ್ತಿಯಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಅಂದರೆ 8,999 ರೂ. ಗಳಿಗೆ ದೊರೆಯಲಿದೆ. ಹಾಗಾದ್ರೆ ಲೆನೊವಾ ಇದೀಗ ಬಿಡುಗಡೆ ಮಾಡಿರೋ ಸ್ಮಾರ್ಟ್‌ಹೋಮ್‌ ಪ್ರಾಡಕ್ಟ್‌ಗಳ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ನೋಡೋಣ ಬನ್ನಿ.

ಲೆನೊವೊ ಸ್ಮಾರ್ಟ್ ಡಿಸ್‌ಪ್ಲೇ

ಲೆನೊವೊ ಸ್ಮಾರ್ಟ್ ಡಿಸ್‌ಪ್ಲೇ

ಲೆನೊವೊ ಸ್ಮಾರ್ಟ್‌ ಡಿಸ್‌ಪ್ಲೇ 7 ಇಂಚಿನ ಪರದೆ ಹೊಂದಿದ್ದು, ಡಿಸ್‌ಪ್ಲೇ ಸ್ವಚ್ಚ ಮತ್ತು ಆರ್ಗ್ಯಾನಿಕ್‌ ವಿನ್ಯಾಸವನ್ನು ಹೊಂದಿದ್ದು. ಇದು ಗೂಗಲ್‌ ಅಸಿಸ್ಟೆಂಟ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. Google ಸಹಾಯಕ ಆಧಾರಿತ ನಿಯಂತ್ರಕದ ಮೂಲಕ ಸರಳ ಧ್ವನಿ ಆಜ್ಞೆ ಮೂಲಕ ಬಳಕೆದಾರರಿಗೆ ಸಹಾಯ ಮಾಡಲಿದೆ, ಮತ್ತು ಇದರ ಮೂಲಕ 5,000 ಕ್ಕೂ ಹೆಚ್ಚಿನ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಲು ಅವಕಾಶವಿದ್ದು. ಇದರ ಮೂಲಕ ವೀಡಿಯೊ ಕರೆಗಳಿಗೆ ಉತ್ತರಿಸಬಹುದಾಗಿದೆ.ಅಲ್ಲದೆ ಸ್ಮಾರ್ಟ್‌ ಕ್ಯಾಮೆರಾಗೂ ಸಂಪರ್ಕ ನೀಡಬಹುದಾಗಿದೆ

ಸ್ಮಾರ್ಟ್‌ ಡಿಸ್‌ಪ್ಲೇ ಬೆಲೆ

ಸ್ಮಾರ್ಟ್‌ ಡಿಸ್‌ಪ್ಲೇ ಬೆಲೆ

7-ಇಂಚಿನ ಈ ಹೊಸ ಸ್ಮಾರ್ಟ್ ಡಿಸ್ಪ್ಲೇ ಡ್ಯುಯಲ್-ಅರೇ ಮೈಕ್ರೊಫೋನ್ ಮತ್ತು ಫುಲ್‌ರೆಂಜ್ ಸ್ಪೀಕರ್‌ ಒಳಗೊಂಡಿದ್ದು, ಇದು ಬಳಕೆದಾರರ ಆಜ್ಞೆಗೆ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಇನ್ನು ಈ ಲೆನೊವೊ ಸ್ಮಾರ್ಟ್ ಡಿಸ್ಪ್ಲೇ 7 ಇಂಚಿನ ಬೆಲೆ 8,999 ರೂ.ಆಗಿದ್ದು, ಲೆನೊವೊ.ಕಾಮ್, ಫ್ಲಿಪ್‌ಕಾರ್ಟ್ ಮತ್ತು ಲೆನೊವೊ ಎಕ್ಸ್‌ಕ್ಲೂಸಿವ್ ಮಳಿಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಲಭ್ಯವಿದೆ.

ಸ್ಮಾರ್ಟ್ ಕ್ಯಾಮೆರಾ

ಸ್ಮಾರ್ಟ್ ಕ್ಯಾಮೆರಾ

ಲೆನೊವಾ ಸ್ಮಾರ್ಟ್‌ ಕ್ಯಾಮೆರಾ ನೈಟ್‌ಸ್ಟ್ಯಾಂಡ್‌ನಲ್ಲಿ ಸಂಪೂರ್ಣವಾಗಿ ಹೊಂದಿಕೊಳ್ಳುವ ವಿಶೇಷತೆಯನ್ನ ಹೊಂದಿದ್ದು. ಪೂರ್ಣ ಫ್ಯಾಬ್ರಿಕ್ ಸಾಫ್ಟ್-ಟಚ್ ಕವರ್‌ ಒಳಗೊಂಡಿದೆ. ಇನ್ನು ಈ ಕ್ಯಾಮೆರಾ ಉತ್ತಮ ರೀತಿಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ನೀಡುತ್ತದೆ. ಜೊತೆಗೆ 355 ಡಿಗ್ರಿ ಪ್ರದೇಶವನ್ನು ಸ್ಕ್ಯಾನ್‌ ಮಾಡೋ ಸಾಮರ್ಥ್ಯ ಹೊಂದಿದ್ದು 120 ಡಿಗ್ರಿ ಮೇಲಕ್ಕೆ ಮತ್ತು ಕೆಳಕ್ಕೆ ಸ್ಕ್ಯಾನ್ ಮಾಡುತ್ತದೆ. ಈ ಸ್ಮಾರ್ಟ್ ಕ್ಯಾಮೆರಾ ಅಂತರ್ನಿರ್ಮಿತ ಮೈಕ್ ಮತ್ತು ಸ್ಪೀಕರ್‌ ಒಳಗೊಂಡಿದ್ದು, ದ್ವಿಮುಖ ಆಡಿಯೊ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ ಮತ್ತು ಲಭ್ಯತೆಯನ್ನು ಲೆನೊವೊ ಇನ್ನೂ ಪ್ರಕಟಿಸಿಲ್ಲ.

ಸ್ಮಾರ್ಟ್ ಬಲ್ಬ್

ಸ್ಮಾರ್ಟ್ ಬಲ್ಬ್

ಲೆನೊವಾ ಬಿಡುಗಡೆ ಮಾಡಿರುವ ಈ ಹೊಸ ಸ್ಮಾರ್ಟ್ ಬಲ್ಬ್ ಧ್ವನಿ ಆಜ್ಞೆಯ ಸಹಾಯದಿಂದ ಬಣ್ಣ, ತಾಪಮಾನ ಮತ್ತು ಹೊಳಪನ್ನು ನಿಯಂತ್ರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಜೊತೆಗೆ ಇದು ಪ್ಲಗ್ ಮತ್ತು ಪ್ಲೇ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ಎರಡರಲ್ಲೂ ಕಾರ್ಯನಿರ್ವಹಿಸುತ್ತಿರುವುದರಿಂದ ಲೆನೊವೊ ಲಿಂಕ್ ಅಪ್ಲಿಕೇಶನ್ ಅಥವಾ ಧ್ವನಿಯ ಸಹಾಯದಿಂದ ಇದನ್ನ ಬಳಕೆ ಮಾಡಬಹುದಾಗಿದೆ. ಈ ಸ್ಮಾರ್ಟ್ ಬಲ್ಬ್‌ನ ಬೆಲೆ ಮತ್ತು ಲಭ್ಯತೆಯನ್ನು ಲೆನೊವೊ ಇನ್ನೂ ಪ್ರಕಟಿಸಿಲ್ಲ.

Most Read Articles
Best Mobiles in India

English summary
Lenovo has introduced a range of smart devices powered by Google Assistant for the Indian consumers. The company introduced a smart display with a 7-inch screen, a smart bulb and a smart camera. Earlier this year Lenovo launched a 10-inch Smart Display with a price of Rs 14,999 and its Smart Clock in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X