ಲೆನೊವೊ ಕಂಪೆನಿಯಿಂದ 4 ಹೊಸ ಆಡಿಯೋ ಡಿವೈಸ್‌ಗಳು ಬಿಡುಗಡೆ!

|

ಚೀನಾ ಮೂಲದ ಲೆನೊವೊ ಕಂಪೆನಿ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಸ್ಮಾರ್ಟ್‌ ಡಿವೈಸ್‌ಗಳನ್ನು ಸಹ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಅಲ್ಲದೆ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಆಕರ್ಷಕ ಫೀಚರ್ಸ್‌ಗಳನ್ನ ಹೊಂದಿರುವ ಇಯರ್‌ ಫೋನ್‌, ಹೆಡ್‌ಫೋನ್, ಇಯರ್‌ಬಡ್ಸ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಇದೀಗ ಇಕ್ಯೂ ಟೆಕ್ನಾಲಜಿ ಹೊಂದಿರುವ ಆಡಿಯೋ ಪ್ರಾಡಕ್ಟ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು

ಹೌದು, ಲೆನೊವೊ ಕಂಪೆನಿ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ಎಚ್‌ಟಿ 10 ಪ್ರೊ, ಎಚ್‌ಟಿ 20, ಎಚ್‌ಇ 18 ಮತ್ತು ಎಚ್‌ಡಿ 116. ಎಂಬ 4 ಆಡಿಯೋ ಪ್ರಾಡಕ್ಟ್‌ಗಳನ್ನ ಬಿಡುಗಡೆ ಮಾಡಿದೆ. ಈಗಾಗ್ಲೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಇಯರ್‌ಫೋನ್‌ಗಳು ಲಭ್ಯವಿದ್ದರೂ ಗ್ರಾಹಕರನ್ನ ತನ್ನತ್ತ ಸೆಳೆಯಲು ಲೆನೊವೊ ಪ್ಲ್ಯಾನ್‌ ರೂಪಿಸಿಕೊಂಡಿದೆ. ಈ ನಾಲ್ಕು ಆಡಿಯೋ ಪ್ರಾಡಕ್ಟ್‌ಗಳು ಗ್ರಾಹಕರಿಗೆ ಅಗಾದವಾದ ಉತ್ತಮ ಅನುಭವ ನೀಡಲಿದೆ ಎನ್ನಲಾಗ್ತಿದ್ದು, ಒಂದೊಂದು ಪ್ರಾಡಕ್ಟ್‌ ಕೂಡ ತನ್ನದೇ ಆದ ವಿಶೇಷತೆಯನ್ನ ಒಳಗೊಂಡಿದೆ.

ಲೆನೊವೊ HT 10 ಪ್ರೊ

ಲೆನೊವೊ HT 10 ಪ್ರೊ

ಲೆನೊವೊ ಎಚ್‌ಟಿ 10 ಪ್ರೊ ಟ್ರೂ ವಾಯರ್‌ ಲೆಸ್ ಇಯರ್‌ ಬಡ್‌ಆಗಿದ್ದು, ಇದು ಡ್ಯುಯಲ್ ಇಕ್ಯೂ ಮೋಡ್‌ ಅನ್ನು ಒಳಗೊಂಡಿದೆ. ಅಲ್ಲದೆ ಈ ಇಯರ್‌ಬಡ್ಸ್‌ಗಳು ಹೆಚ್ಚುವರಿ ಬಾಸ್ ಮೋಡ್ ಅನ್ನು ಬೆಂಬಲಿಸಲಿವೆ. ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಮೋಡ್ ಸ್ಟ್ಯಾಂಡರ್ಡ್ ಮೋಡ್‌ಗೆ ಹೆಚ್ಚಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ 48 ಗಂಟೆಗಳ ಪ್ಲೇಬ್ಯಾಕ್‌ ಟೈಂ ನೀಡಲಿದ್ದು, 200 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿವೆ. ಇದಲ್ಲದೆ ಇವುಗಳ ಬ್ಯಾಟರಿ ಪ್ಯಾಕ್‌ಅಪ್‌ ದೀರ್ಘಕಾಲದವರೆಗೆ ಬಾಳಿಕೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದ್ದು, 20 ಮೀಟರ್ ವಾಯರ್‌ಲೆಸ್‌ ರೇಂಜ್‌ ಅನ್ನು ಹೊಂದಿದೆ. ಇನ್ನು ಇದರ ಬೆಲೆ 4,499 ರೂ. ಆಗಿದ್ದು, ಸದ್ಯ ಇದೀಗ 4,199 ರೂ. ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ.

ಲೆನೊವೊ HT 20

ಲೆನೊವೊ HT 20

ಲೆನೆವೊ HT20 ಕೂಡ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಆಗಿದ್ದು, ಇದು ಡ್ಯುಯೆಲ್‌ ಇಕ್ಯೂ ಮೋಡ್‌ ಬೆಂಬಲವನ್ನು ಹೊಂದಿದೆ. ಅಲ್ಲದೆ ಈ ಇಯರ್‌ಬಡ್ಸ್‌ ಕೂಡ ಸೂಪರ್‌ ಹೆಚ್ಚುವರಿ ಬಾಸ್‌ ಮೋಡ್‌ ಅನ್ನು ಬೆಂಬಲಿಸಲಿದ್ದು, ಸ್ಟ್ಯಾಂಡರ್ಡ್ ಮೋಡ್‌ ಅನ್ನು ಸಹ ಬೆಂಬಲಿಸಲಿದೆ. ಜೊತೆಗೆ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ಹೊಂದಿಕೊಲ್ಳುವ ಸಾಮರ್ಥ್ಯವನ್ನ ಹೊಂದಿದ್ದು, ಉತ್ತಮ ಆಡಿಯೋ ಅನುಭವವನ್ನು ನೀಡಲಿದೆ. ಇದಲ್ಲದೆ 25ಗಂಟೆಗಳ ಪ್ಲೇಬ್ಯಾಕ್‌ ಟೈಂ ಹಾಗೂ 200h ಸ್ಟ್ಯಾಂಡ್‌ಬೈ ಟೈಂ ಅನ್ನು ಸಹ ಹೊಂದಿದ್ದು, ಉತ್ತಮ ಬ್ಯಾಟರಿ ಪ್ಯಾಕ್‌ಅಪ್‌ ಒಳಗೊಂಡಿದೆ. ಅಲ್ಲದೆ ಈ ಇಯರ್‌ ಬಡ್ಸ್‌ IPX5 ವಾಟರ್‌ ಪ್ರೂಪ್‌ ಹಾಗೂ ಬೆವರು ನಿರೋಧಕವನ್ನು ಒಳಗೊಂಡಿದೆ. ಇದರ ಬೆಲೆ 3,799 ರೂ, ಆಗಿದೆ.

ಲೆನೊವೊ HE18

ಲೆನೊವೊ HE18

ಲೆನೊವೊ HE18 ಇದು ಇಯರ್‌ಫೋನ್‌ ಆಗಿದ್ದು, ಈ ಇಯರ್‌ಫೋನ್‌ ಕೂಡ ಪ್ಯೂರ್‌ ಮ್ಯೂಸಿಕ್‌ ಹಾಗೂ ಎಕ್ಸ್ಟ್ರಾ ಬಾಸ್‌ ಬೆಂಬಲಿಸುವ ಇಕ್ಯೂ ಟೆಕ್ನಾಲಜಿಯನ್ನ ಹೊಂದಿದೆ. ಇದು ಡ್ಯುಯೆಲ್‌ ಇಕ್ಯೂ ಮೋಡ್‌ ಅನ್ನು ಒಳಗೊಂಡಿದೆ. ಅಲ್ಲದೆ ಈ ಇಯರ್‌ಫೋನ್‌ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಬಳಕೆದಾರರಿಗೆ ಉತ್ತಮ ಆಡಿಯೋ ಅನುಭವ ನೀಡಲಿದೆ. ಇದಲ್ಲದೆ ಇದು ಸ್ಟ್ಯಾಂಡರ್ಡ್ ಮೋಡ್‌ ಅನ್ನು ಬೆಂಬಲಿಸಲಿದ್ದು, 12 ಗಂಟೆಗಳ ಪ್ಲೇಬ್ಯಾಕ್‌ ಟೈಂ ಹಾಗೂ 240h ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಅಲ್ಲದೆ ಒಂದೇ ಬಾರಿಗೆ ಎರಡು ಡಿವೈಸ್‌ಗಳನ್ನು ಸಹ ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ 1,999 ರೂ.ಆಗಿದೆ.

ಲೆನೊವೊ HD116

ಲೆನೊವೊ HD116

ಲೆನೊವೊ HD116 ಇದು ಹೆಡ್‌ಫೋನ್‌ ಆಗಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದೆ. ಈ ಹೆಡ್‌ಫೊನ್‌ ಕೂಡ ಡ್ಯುಯೆಲ್‌ ಇಕ್ಯೂ ಮೋಡ್‌ ಅನ್ನು ಬೆಂಬಲಿಸಲಿದ್ದು, ಎಕ್ಸ್ಟ್ರಾ ಬಾಸ್‌ ಮೋಡ್‌ ಹಾಗೂ ಸ್ಟ್ಯಾಂಡರ್ಡ್ ಮೋಡ್‌ ಅನ್ನು ಬೆಂಬಲಿಸಲಿದೆ. ಆಡಿಯೋ ಕೇಳುವಾಗ ಉತ್ತಮ ಅನುಭವ ನೀಡಲಿದ್ದು, ಕರೆ ಸ್ವೀಕರಿಸಿದಾಗಲೂ ಉತ್ತಮ ಅನುಭವ ನೀಡಲಿದೆ. ಇನ್ನು ಈ ಹೆಡ್‌ಫೋನ್‌ ಬ್ಲೂಟೂತ್‌ 5.0, ಹಾಗೂ HSP/HFP/AVRCP/A2DP ಅನ್ನು ಬೆಂಬಲಿಸಲಿದ್ದು, ಬ್ಲೂಟೂತ್‌ ಕನೆಕ್ಟಿವಿಟಿಯಲ್ಲಿ ಉತ್ತಮ ಬೆಂಬಲವನ್ನು ನೀಡಲಿದೆ. ಜೊತೆಗೆ 24 ಗಂಟೆಗಳ ಪ್ಲೇಬ್ಯಾಕ್‌ ಟೈಂ ಹಾಗೂ 240H ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಇದರ ಬೆಲೆ 2,499 ರೂ. ಆಗಿದೆ.

Most Read Articles
Best Mobiles in India

English summary
Lenovo has launched two new true wireless earbuds, a headset and a earphone in the country. Check out the price and key features of these audio products. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X