ಲೆನೋವೋ ಕಂಪೆನಿಯಿಂದ ಬರಲಿದೆ ವಿಶ್ವದ ಮೊದಲ ಫೋಲ್ಡೇಬಲ್‌ ಲ್ಯಾಪ್‌ಟಾಪ್‌!

|

ಕಳೆದ ವರ್ಷ ಫೋಲ್ಡೇಬಲ್ ಥಿಂಕ್‌ಪ್ಯಾಂಡ್ x1 ಅನ್ನ ಪರಿಚಯಿಸಿದ್ದ ಲೆನೊವೊ ಈ ವರ್ಷ ವಿಶ್ವದ ಮೊದಲ ಫೋಲ್ಡೇಬಲ್‌ ಲ್ಯಾಪ್‌ಟಾಪ್‌ ಅನ್ನ ಪರಿಚಯಿಸಲು ಮುಂದಾಗಿದೆ. 2020ರ ಮಧ್ಯ ಭಾಗದಲ್ಲಿ ಲೆನೊವೋ ಕಂಪನಿಯು ಇದನ್ನು ಮಾರುಕಟ್ಟೆಗೆ ಲಾಂಚ್‌ ಮಾಡಲಿದೆ. ಇದನ್ನ ಥಿಂಕ್‌ಪ್ಯಾಡ್ ಎಕ್ಸ್ 1ಫೋಲ್ಡ್‌ ಎಂದು ಹೆಸರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿದೆ. ಅಲ್ಲದೆ ಥಿಂಕ್‌ಬುಕ್ ಪ್ಲಸ್ ಜೊತೆಗೆ ಯೋಗ 5G ಪಿಸಿಯನ್ನು ಅನಾವರಣಗೊಳಿಸಿದ್ದು, ಇದು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 ಸಿಎಕ್ಸ್ 5G ಕಂಪ್ಯೂಟ್ ಪ್ಲಾಟ್‌ಫಾರ್ಮ್ ಹೊಂದಿದೆ.

ಹೌದು

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ ಲೆನೊವೋ ಕಂಪೆನಿ ಸ್ಮಾರ್ಟ್‌ಪ್ರಾಡಕ್ಟ್‌ ಕ್ಷೇತ್ರದಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ಸದ್ಯ ಬಿಡುಗಡೆಯಾಗ ಬೇಕಿರುವ ಫೋಲ್ಡೇಬಲ್‌ ಲ್ಯಾಪ್‌ಟಾಪ್‌ ಅನ್ನ ಕಂಪನಿಯು ವರ್ಷದ ಮಧ್ಯದಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳಿದೆ. ಇನ್ನು ಈ ಲ್ಯಾಪ್‌ಟಾಪ್ 13.3-ಇಂಚಿನ ಪೋಲ್ಡ್ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದನ್ನು ಎಲ್ಜಿ ಡಿಸ್‌ಪ್ಲೇ ತಯಾರಿಸಿದೆ. ಅಲ್ಲದೆ ಡಿಸ್‌ಪ್ಲೇ ಪ್ಯಾನೆಲ್‌ 2k (2048 x 1536 ಪಿಕ್ಸೆಲ್‌ಗಳು) ರೆಸಲ್ಯೂಶನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಪ್ಯಾನೆಲ್‌

ಈ ಲ್ಯಾಪ್‌ಟಾಪ್‌ನಲ್ಲಿ ಪ್ಯಾನೆಲ್‌ ಅನ್ನ ಗೀರುಗಳಿಂದ ರಕ್ಷಿಸಲು ಡಿಸ್‌ಪ್ಲೇ ಕೆಳಗೆ ಸ್ಟೇನ್‌ಲೆಸ್ ಸ್ಟೀಲ್ ಫಾಯಿಲ್ ಅನ್ನು ನೀಡಲಾಗಿದೆ. ಅಲ್ಲದೆ ಅದರ ಮೇಲೆ ವಿಶೇಷ ಲೇಪನವನ್ನು ಕೂಡ ಸೇರಿಸಲಾಗಿದೆ. ಫೋಟೋ ಮೋಡ್‌ನಲ್ಲಿ, ಹಾಗೂ ಲ್ಯಾಪ್‌ಟಾಪ್‌ನ ಕೆಳಭಾಗದಲ್ಲಿ ಆನ್-ಸ್ಕ್ರೀನ್ ಕೀಬೋರ್ಡ್ ಅನ್ನು ಬಳಸಲು ಅವಕಾಶ ನೀಡಲಾಗಿದೆ. ಜೊತೆಗೆ ಡಿಸ್‌ಪ್ಲೇಯನ್ನ ಕೋನಾದಾಕಾರದಲ್ಲಿ ಮಡಚಲು ಅವಕಾಶ ಕಲ್ಪಿಸಲಾಗಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ ಅನ್ನ ಉಪಯೋಗಿಸಲು ಬ್ಲೂಟೂತ್ ಕೀಬೋರ್ಡ್‌ಅನ್ನು ಬಳಸಬಹುದಾಗಿದ್ದು, ಇದನ್ನ ಕನೆಕ್ಟ್‌ ಮಾಡುವುದಕ್ಕೆ ಡಿಸ್‌ಪ್ಲೇ ಕೆಳಗಿನ ಅರ್ಧಭಾಗದಲ್ಲಿ ಕನೆಕ್ಟಿವಿಟಿ ಆಯ್ಕೆಯನ್ನ ನೀಡಲಾಗಿರುತ್ತದೆ. ಈ ಲ್ಯಾಪ್‌ ಟಾಪ್‌ ಅನ್ನ ಸಂಫೂರ್ಣವಾಗಿ ತೆರೆದರೆ ಟ್ಯಾಬ್ಲೆಟ್‌ ಮಾದರಿಯಲ್ಲಿ ಬಳಸಬಹುದಾಗಿದೆ. ಅಲ್ಲದೆ ಅರ್ಧ ಪ್ರಮಾಣದಲ್ಲಿ ಮಡಚಿದರೆ ಮಾನಿಟರ್‌ ಆಗಿಯೂ ಬಳಸಬಹುದಾಗಿದ್ದು, ನೀವು ಸ್ಪ್ಲಿಟ್-ಸ್ಕ್ರೀನ್ ಮೋಡ್‌ನಲ್ಲಿ ಕೂಡ ಥಿಂಕ್‌ಪ್ಯಾಡ್ X1ಫೋಲ್ಡ್‌ ಅನ್ನ ಬಳಸಬಹುದು.

ಮೇಲಿನ

ಇನ್ನು ಲ್ಯಾಪ್‌ಟಾಪ್‌ ಮೇಲಿನ ಅರ್ಧ ಭಾಗವು ಸಂಪೂರ್ಣವಾಗಿ ಅರ್ಧದಷ್ಟು ಮಡಚಲ್ಪಟ್ಟಾಗ ಇದು ಮಾನಿಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಲ್ಯಾಪ್‌ಟಾಪ್‌ನಲ್ಲಿ ಡಾಲ್ಬಿ ಸ್ಟಿರಿಯೊ ಸ್ಪೀಕರ್‌ಗಳು, ಐದು ಮೆಗಾಪಿಕ್ಸೆಲ್ ಐಆರ್ ಕ್ಯಾಮೆರಾ ಕೂಡ ಒಳಗೊಂಡಿದೆ. ಅಲ್ಲದೆ ಲ್ಯಾಪ್‌ಟಾಪ್‌ ಅನ್ನು ನ್ಯಾವಿಗೇಟ್ ಮಾಡಲು ಅಥವಾ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಇದು ಸಕ್ರಿಯ ಪೆನ್ ಅನ್ನು ಸಹ ಒಳಗೊಂಡಿದೆ.

ಜೊತೆಗೆ

ಜೊತೆಗೆ ಲೆನೊವೊ ಲ್ಯಾಪ್‌ಟಾಪ್‌ ಕಾರ್ಯನಿರ್ವಹಿಸುವಾಗ ಅದರ ಒತ್ತಾಸೆಗಾಗಿ ನಿರ್ಮಿಸಲಾದ ಸ್ಟ್ಯಾಂಡ್ ಅನ್ನು ಸಹ ನೀಡುತ್ತಿದೆ, ಆದರೆ ಅದಕ್ಕಾಗಿ ನೀವು ಸುಮಾರು$23.99 (ಅಂದಾಜು 1,720ರೂ) ಖರ್ಚು ಮಾಡಬೇಕಾಗುತ್ತದೆ. ಇನ್ನು ಲೆನೊವೊ ಥಿಂಕ್‌ಪ್ಯಾಡ್ X1ಫೋಲ್ಡ್‌ ವಿಂಡೋಸ್ 10 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಈ ಲ್ಯಾಪ್‌ಟಾಪ್‌ 8GB RAM ಮತ್ತು 1TB ವರೆಗೆ ಶೇಖರಣಾ ಸಾಮರ್ಥ್ಯವನ್ನ ಹೊಂದಿರಲಿದೆ.

ಬಳಕೆದಾರರಿಗೆ

ಇನ್ನು ಪಿಸಿ ಬಳಕೆದಾರರಿಗೆ ತುಂಬಾ ಅನುಕೂಲಕರವಾಗಿರಲಿದ್ದು 50 ವ್ಯಾಟ್ ಬ್ಯಾಟರಿ ಪ್ಯಾಕ್‌ಅಪ್‌ ಅನ್ನ ಹೊಂದಿರಲಿದೆ. ಇದರಿಂದ ಒಂದೇ ಚಾರ್ಜ್‌ನಲ್ಲಿ 11 ಗಂಟೆಗಳ ಬ್ಯಾಟರಿ ಅವಧಿಯವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ರಾಪಿಡ್ ಚಾರ್ಜಿಂಗ್‌ಗೆ ಬೆಂಬಲವನ್ನು ಸಹ ನೀಡುತ್ತದೆ. ಸದ್ಯ ಲೆನೊವೊ ಥಿಂಕ್‌ಪ್ಯಾಡ್ ಎಕ್ಸ್ 1ಫೋಲ್ಡ್‌ $ 2,499 (ಅಂದಾಜು 1,79,200 ರೂ.) ಬೆಲೆಯನ್ನ ಹೊಂದಿರಲಿದೆ ಎಂದು ಕಂಪನಿ ಹೇಳಿದೆ.

Best Mobiles in India

English summary
Lenovo will be selling the ThinkPad X1 Fold for a whopping $2,499 (approximately Rs 1,79,200). The company revealed that this device will be available for purchase mid-year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X