ಭಾರತದಲ್ಲಿ ಲೆನೊವೊದಿಂದ ಹೊಸ ಲ್ಯಾಪ್‌ಟಾಪ್ ಬಿಡುಗಡೆ: ಫೀಚರ್ಸ್ ಮಾತ್ರ ಬೆಂಕಿ
ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳು ಸದ್ದು ಮಾಡುತ್ತಿವೆ. ಇದರಲ್ಲಿ ಲೆನೊವೊ ಕಂಪೆನಿ ಕೂಡ ಒಂದಾಗಿದೆ. ಇದೀಗ Lenovo Legion 9i ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದು ಕೂಲರ್ ಮಾಸ್ಟರ್‌ನಿಂದ ಇಂಟಿಗ್ರೇಟೆಡ್ ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.
ಹೌದು, ಲೆನೊವೊ ಭಾರತದಲ್ಲಿ ಹೊಸದಾಗಿ Lenovo Legion 9i ಲ್ಯಾಪ್‌ಟಾಪ್ ಪರಿಚಯಿಸಿದೆ. ಇನ್ನು ಲ್ಯಾಪ್‌ಟಾಪ್ 13 ನೇ ಜನ್ ಇಂಟೆಲ್ ಕೋರ್ i9-ಸರಣಿ ಪ್ರೊಸೆಸರ್ ಜೊತೆಗೆ Nvidia GeForce RTX 4090 ಗ್ರಾಫಿಕ್ಸ್‌ನಿಂದ ಚಾಲಿತವಾಗಿದೆ. ಇದು Windows 11 ಹೋಮ್‌ನೊಂದಿಗೆ ಮೊದಲೇ ಲೋಡ್ ಆಗಿದ್ದು, 3.2K ರೆಸಲ್ಯೂಶನ್ ಡಿಸ್‌ಪ್ಲೇಯೊಂದಿಗೆ ಬರಲಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಲೀಜನ್ 9i ಲ್ಯಾಪ್‌ಟಾಪ್ ಫೀಚರ್ಸ್ ಏನಿದೆ?
ಲೆನೊವೊ ಲೀಜನ್ 9i ಲ್ಯಾಪ್‌ಟಾಪ್ 16 ಇಂಚಿನ 3.2K ಮಿನಿ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2,000x3,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಜೊತೆಗೆ 165Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್, 3ms ರೆಸ್ಪಾನ್ಸ್ ಟೈಂ ಅನ್ನು ನೀಡಲಿದೆ. ಇದಲ್ಲದೆ ಡಿಸ್‌ಪ್ಲೇ 1200nits ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಅಲ್ಲದೆ DCI-P3 ಬಣ್ಣದ ಹರವು 100 ಪ್ರತಿಶತ ಕವರೇಜ್ ಅನ್ನು ನೀಡಲಿದ್ದು, HDR 1000 ಪ್ರಮಾಣೀಕರಣವನ್ನು ಹೊಂದಿದೆ.
ಇನ್ನು ಈ ಲ್ಯಾಪ್‌ಟಾಪ್ 13ನೇ ಜನ್ ಇಂಟೆಲ್ ಕೋರ್ i9-13980HX CPUನಲ್ಲಿ ಕಾರ್ಯನಿರ್ವಹಿಸಲಿದೆ. ಇದು ವಿಂಡೋಸ್ 11 ಹೋಮ್‌ನಲ್ಲಿ ರನ್ ಆಗಲಿದೆ. ಜೊತೆಗೆ Nvidia GeForce RTX 4090 ಮತ್ತು 16GB GDDR6 ಮೀಸಲಾದ ಗ್ರಾಫಿಕ್ಸ್ ಮೆಮೊರಿಯಿಂದ ಚಾಲಿತವಾಗಿದೆ. ಅಲ್ಲದೆ 5,600MHz ಆವರ್ತನವನ್ನು ಹೊಂದಿರುವ 64GB DDR5 RAM ಸಹ ಇದೆ. ಇದು ಗರಿಷ್ಠ 2TB SSD M.2 ಸ್ಟೋರೇಜ್ ಕ್ಯಾಪಾಸಿಟಿಯನ್ನು ಸಹ ಹೊಂದಿದೆ. ಲ್ಯಾಪ್‌ಟಾಪ್ RGB ಲೈಟಿಂಗ್‌ನೊಂದಿಗೆ ಪೂರ್ಣ-ಗಾತ್ರದ ಕೀಬೋರ್ಡ್ ಅನ್ನು ಒಳಗೊಂಡಿದೆ.

Lenovo Legion 9i ಎಲೆಕ್ಟ್ರಾನಿಕ್ ಇ-ಶಟರ್‌ನೊಂದಿಗೆ 1080p ವೆಬ್‌ಕ್ಯಾಮ್ ಅನ್ನು ಹೊಂದಿದೆ. ಕೂಲರ್ ಮಾಸ್ಟರ್‌ನೊಂದಿಗೆ ಸಹ-ಇಂಜಿನಿಯರಿಂಗ್ ಮಾಡಿದ ಆಟೋ-ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನೊಂದಿಗೆ ಯಂತ್ರವನ್ನು ಮೊದಲೇ ಲೋಡ್ ಮಾಡಲಾಗಿದೆ. ಇದು ಉಷ್ಣ ನಿರ್ವಹಣೆಗಾಗಿ 6,333 ಪ್ರತ್ಯೇಕ ದ್ವಾರಗಳೊಂದಿಗೆ AI-ಟ್ಯೂನ್ಡ್ ಟ್ರಿಪಲ್-ಫ್ಯಾನ್ ಏರ್ ಸಿಸ್ಟಮ್ ಅನ್ನು ಒಳಗೊಂಡಿದೆ. ಜೊತೆಗೆ Lenovo LA-2 AI ಚಿಪ್ ಅನ್ನು ಸಹ ಅಳವಡಿಸಲಾಗಿದೆ.
Lenovo Legion 9i ಲ್ಯಾಪ್‌ಟಾಪ್ ರಾಪಿಡ್ ಚಾರ್ಜ್ ತಂತ್ರಜ್ಞಾನದೊಂದಿಗೆ 99.99 Whr ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6E, ಬ್ಲೂಟೂತ್ 5.1, ಎರಡು Thunderbolt 4 ಪೋರ್ಟ್‌ಗಳು, USB ಟೈಪ್-A ಪೋರ್ಟ್, RJ45 ಈಥರ್ನೆಟ್ ಮತ್ತು HDMI ಪೋರ್ಟ್ ಸಹ ನೀಡಲಾಗಿದೆ. ಇದು ವೇಗದ ಚಾರ್ಜಿಂಗ್ ಟೆಕ್ನಾಲಜಯನ್ನು ಬೆಂಬಲಿಸಲಿದ್ದು, 30 ನಿಮಿಷಗಳಲ್ಲಿ 0% ನಿಂದ 70%ವರೆಗೆ ಚಾರ್ಜಿಂಗ್ ಮಾಡಲಿದೆ.


Click it and Unblock the Notifications








