ಲೆನೊವೊ ಲೀಜನ್ ಫೋನ್ ಡ್ಯುಯಲ್ 2 ಸ್ಮಾರ್ಟ್‌ಫೋನ್‌ ಬಿಡುಗಡೆ! ವಿಶೇಷತೆ ಏನು?

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಲೆನೊವೊ ಸಂಸ್ಥೆ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಡಿದೆ. ಸದ್ಯ ಇದೀಗ ಲೆನೊವೊ ಲೀಜನ್ ಫೋನ್ ಡ್ಯುಯೆಲ್ 2 ಅನ್ನು ಲಾಂಚ್‌ ಮಾಡಿದೆ. ಇದು ಲೆನೊವೊ ಲೀಜನ್ ಫೋನ್ ಡ್ಯುಯಲ್ ಸ್ಮಾರ್ಟ್‌ಫೋನ್‌ನ ಉತ್ತರಾಧಿಕಾರಿಯಾಗಿ ಜಾಗತಿಕ ಮಾರುಕಟ್ಟೆಗೆ ಎಟ್ರಿ ನೀಡಿದೆ.

ಲೆನೊವೊ

ಹೌದು, ಲೆನೊವೊ ಸಂಸ್ಥೆ ಲೆನೊವೊ ಲೀಜನ್ ಫೋನ್ ಡ್ಯುಯಲ್ 2 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಗೇಮಿಂಗ್ ಫೋನ್ ಆಗಿದ್ದು, ಗೇಮಿಂಗ್ ಅನುಭವವನ್ನು ಸುಧಾರಿಸಲು ಉದ್ದೇಶಿಸಿರುವ ಹಲವಾರು ಫಿಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಡ್ಯುಯಲ್ ಕೂಲಿಂಗ್ ಫ್ಯಾನ್‌ಗಳು, ಅಲ್ಟ್ರಾಸಾನಿಕ್ ಶೋಲ್ಡರ್ಸ್‌ ಟ್ರಿಗರ್ಸ್‌, ಸೈಡ್-ಮೌಂಟೆಡ್ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಲೆನೊವೊ ಲೀಜನ್ ಫೋನ್ ಡ್ಯುಯಲ್ 2 ಸ್ಮಾರ್ಟ್‌ಫೋನ್‌ 1,080x2,460 ಪಿಕ್ಸೆಲ್‌ ಸ್ಕ್ರೀನ್‌ ರೆಸ್ಯೂಶನ್‌ ಸಾಮರ್ಥ್ಯದ 6.92-ಇಂಚಿನ ಫುಲ್‌-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು 8-ಬಿಟ್ ಹೆಚ್‌ಡಿಆರ್ ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌, 20.5: 9 ರಚನೆಯ ಅನುಪಾತ, 720Hz ಟಚ್‌ ಸ್ಯಾಪ್ಲಿಂಗ್ ರೇಟ್‌, 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಮತ್ತು HDR10 + ಪ್ರಮಾಣೀಕರಣವನ್ನು ಹೊಂದಿದೆ. ಈ ಡಿಸ್‌ಪ್ಲೇ 111.1 ಶೇಕಡಾ ಡಿಸಿಐ-ಪಿ 3 ಬಣ್ಣದ ಹರವು ವ್ಯಾಪ್ತಿ, ಟಿಯುವಿ ಲೋ ಬ್ಲೂ ಲೈಟ್ ಪ್ರಮಾಣೀಕರಣ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಯುಐಐ 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 18GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಲೆನೊವೊ ಲೀಜನ್ ಫೋನ್ ಡ್ಯುಯಲ್ 2 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಓಮ್ನಿವಿಷನ್ ಒವಿ 64 ಎ ಇಮೇಜ್ ಸೆನ್ಸಾರ್ , ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 44 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನ ಈ ಗೇಮಿಂಗ್ ಫೋನ್‌ 5,500mAh ಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದನ್ನು ಎರಡು 2,750mAh ಯುನಿಟ್‌ಗಳಾಗಿ ವಿಂಗಡಿಸಲಾಗಿದೆ. ಎರಡೂ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳ ಮೂಲಕ ಸಂಪರ್ಕಗೊಂಡಾಗ 90W ವರೆಗೆ ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. ಒಂದೇ ಪೋರ್ಟ್ ಸಂಪರ್ಕವು 65W ವೇಗದ ಚಾರ್ಜಿಂಗ್ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳು 5 ಜಿ, ವೈ-ಫೈ 6, ಜಿಪಿಎಸ್, ಬ್ಲೂಟೂತ್ 5.2, ಮತ್ತು ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ಒಳಗೊಂಡಿವೆ, ಇವೆರಡನ್ನೂ ಪ್ರತ್ಯೇಕವಾಗಿ ಅಥವಾ ಏಕಕಾಲದಲ್ಲಿ ಚಾರ್ಜ್ ಮಾಡಲು ಬಳಸಬಹುದು.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಲೀಜನ್ ಫೋನ್ ಡ್ಯುಯಲ್ 2 ಸ್ಮಾರ್ಟ್‌ಫೋನ್‌ 12 GB RAM + 256GB ಶೇಖರಣಾ ರೂಪಾಂತರಕ್ಕೆ ಯುರೋ 799 (ಸರಿಸುಮಾರು ರೂ. 71,000) ಮತ್ತು 16GB RAM+ 512GB ಶೇಖರಣಾ ರೂಪಾಂತರದ ಬೆಲೆ ಯುರೋ 999 (ಸರಿಸುಮಾರು ರೂ. 88,800) ಆಗಿದೆ. ಇನ್ನು ಈ ಫೋನ್ ಅನ್ನು ಟೈಟಾನಿಯಂ ವೈಟ್ ಮತ್ತು ಅಲ್ಟಿಮೇಟ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಮೇ ತಿಂಗಳಲ್ಲಿ ಏಷ್ಯಾ ಪೆಸಿಫಿಕ್ ಮತ್ತು ಯುರೋಪಿನ ಆಯ್ದ ಮಾರುಕಟ್ಟೆಗಳಲ್ಲಿ ಈ ಫೋನ್ ಮಾರಾಟವಾಗಲಿದೆ.

Best Mobiles in India

English summary
Lenovo Legion Phone Duel 2 is a gaming phone that packs a host of features meant to improve the gaming experience.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X