Home
ಸುದ್ದಿಜಾಲ

ವಿಶ್ವದ ಮೊದಲ ಸೌರಶಕ್ತಿ ಚಾಲಿತ 'ಲ್ಯಾಪ್‌ಟಾಪ್' ಪರಿಚಯಿಸಲು ಲೆನೊವೊ ಸಜ್ಜು?!

ಜನಪ್ರಿಯ ಲ್ಯಾಪ್‌ಟಾಪ್ ತಯಾರಿಕಾ ಬ್ರ್ಯಾಂಡ್ ಲೆನೊವೊ ಮುಂಬರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2025 ರಲ್ಲಿ ಸೌರಶಕ್ತಿ ಚಾಲಿತ ಲ್ಯಾಪ್‌ಟಾಪ್ ಅನ್ನು ಅನಾವರಣಗೊಳಿಸಿದೆ ಎಂಬ ವಿಶೇಷ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮಾರ್ಚ್ 3 ರಿಂದ 6 ರವರೆಗೆ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2025 ರಲ್ಲಿ ಲೆನೊವೊ ಕಂಪೆನಿಯು ಹೊಸ ಲ್ಯಾಪ್‌ಟಾಪ್ ಪರಿಕಲ್ಪನೆಗಳನ್ನು ಪ್ರದರ್ಶಿಸಬಹುದು. ಇದರಲ್ಲಿ ಸೌರಶಕ್ತಿ ಚಾಲಿತ ಲ್ಯಾಪ್‌ಟಾಪ್ ಮತ್ತು ಎರಡು ಹೆಚ್ಚುವರಿ ಡಿಸ್‌ಪ್ಲೇ ಸೇರಿಸುವ ಲ್ಯಾಪ್‌ಟಾಪ್‌ನಂತಹ ವೈಶಿಷ್ಟ್ಯಗಳು ಇರಬಹುದು ಎಂದು ಹೇಳಲಾಗಿದೆ.

ನಂಬಿಕಸ್ಥ ಟೆಕ್ ಮಾಹಿತಿ ಸೋರಿಕೆದಾರ 'ಇವಾನ್ ಬ್ಲಾಸ್' ಅವರು ಬುಧವಾರದ ಎಕ್ಸ್ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿದ್ದು, ಸೌರಶಕ್ತಿ ಚಾಲಿತ ಲ್ಯಾಪ್‌ಟಾಪ್ ಮತ್ತು ಎರಡು ಹೆಚ್ಚುವರಿ ಡಿಸ್‌ಪ್ಲೇ ಸೇರಿಸುವ ಲ್ಯಾಪ್‌ಟಾಪ್‌ನಂತಹ ಎರಡು ಪರಿಕಲ್ಪನೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸೌರಶಕ್ತಿ ಚಾಲಿತ 'ಲೆನೊವೊ ಯೋಗ' ಲ್ಯಾಪ್‌ಟಾಪ್ ಸೌರ ಕೋಶಗಳಿಂದ ಮಾಡಿದ ವಿಶೇಷ ಪ್ಯಾನಲ್‌ಗಳನ್ನು ಇದು ಹೊಂದಿರುತ್ತದೆ. ಬಳಕೆಯಲ್ಲಿರುವಾಗ ಮತ್ತು ನಿಷ್ಕ್ರಿಯವಾಗಿದ್ದಾಗಲೂ ಲ್ಯಾಪ್‌ಟಾಪ್ ಅನ್ನು ನಿರಂತರವಾಗಿ ಚಾರ್ಜ್ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಿಶ್ವದ ಮೊದಲ ಸೌರಶಕ್ತಿ ಚಾಲಿತ 'ಲ್ಯಾಪ್‌ಟಾಪ್' ಪರಿಚಯಿಸಲು ಲೆನೊವೊ ಸಜ್ಜು?!

ಲೆನೊವೊ ಈ ಹಿಂದೆ ಸೌರಶಕ್ತಿ ಚಾಲಿತ ಕೀಬೋರ್ಡ್ ಮತ್ತು ಮೌಸ್ ಅನ್ನು ಪ್ರದರ್ಶಿಸಿತ್ತು. ಇವುಗಳಿಗೆ ಹೆಚ್ಚುವರಿ ಚಾರ್ಜಿಂಗ್ ಅಗತ್ಯವಿರಲಿಲ್ಲ. ಆದರೆ, ಲ್ಯಾಪ್‌ಟಾಪ್‌ಗೆ ವಿದ್ಯುತ್ ಪೂರೈಕೆ ಹೆಚ್ಚು ಬೇಕಾಗುತ್ತದೆ. ಲ್ಯಾಪ್‌ಟಾಪ್‌ಗೆ ವಿದ್ಯುತ್ ಪೂರೈಸಲು ಸೌರಶಕ್ತಿಯನ್ನು ಬಳಸುವುದಕ್ಕೆ ಸ್ಪಷ್ಟವಾಗಿ ಹೆಚ್ಚಿನ ವಿದ್ಯುತ್ ರೇಟಿಂಗ್ ಅಗತ್ಯವಿರುತ್ತದೆ. ಲೆನೊವೊ ಕಂಪೆನಿ ಈ ಸಾಮರ್ಥ್ಯವನ್ನು ಪೂರೈಸಬಲ್ಲದೆ ಎಂಬುದನ್ನು ಕಾದುನೋಡಬೇಕು. ಏಕೆಂದರೆ, ವರ್ಷಗಳ ಪರಿಶೋಧನೆಯ ನಂತರವೂ , ಸೌರ ಲ್ಯಾಪ್‌ಟಾಪ್‌ಗಳು ಜನಪ್ರಿಯವಾಗಿಲ್ಲ. ಹಾಗಾಗಿ, ಲೆನೊವೊ ಈ ಕ್ಷೇತ್ರವನ್ನು ಮತ್ತೆ ವಿಸ್ತರಿಸಬಹುದೇ ಎಂದು ನಾವು ಕಾದು ನೋಡಬೇಕಿದೆ.

ಸ್ಯಾಮ್‌ಸಂಗ್ 2011 ರಲ್ಲಿ ವಿಶ್ವದ ಮೊದಲ ಸೌರಶಕ್ತಿ ಚಾಲಿತ ಲ್ಯಾಪ್‌ಟಾಪ್ NC215S ಅನ್ನು ಪರಿಚಯಿಸಿತ್ತು. ಈ ಲ್ಯಾಪ್‌ಟಾಪ್ ಅದರ ಮೇಲ್ಮೈಯಲ್ಲಿ ಸೌರ ಫಲಕವನ್ನು ಒಳಗೊಂಡಿತ್ತು. ಇದು ಸುಮಾರು ಎರಡು ಗಂಟೆಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಂಡ ನಂತರ ಸುಮಾರು ಒಂದು ಗಂಟೆ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಹೇಳಿಕೊಂಡಿದೆ. NC215S ಇಂಟೆಲ್ ಆಟಮ್ N455 ಅಥವಾ N570 ಪ್ರೊಸೆಸರ್ ಅನ್ನು ಹೊಂದಿತ್ತು. ಇದಲ್ಲದೆ, ಕೆನಡಾದ ಕಂಪನಿ ವೆವಿ 2013 ರಲ್ಲಿ ಸೋಲ್ ಎಂಬ ಸೌರಶಕ್ತಿ ಚಾಲಿತ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿತ್ತು. ಈ ಸಾಧನವು ಕೇವಲ ಎರಡು ಗಂಟೆಗಳ ಕಾಲ ಸೌರಶಕ್ತಿಯಿಂದ ಚಾರ್ಜ್ ಮಾಡಿದ ನಂತರ ಹತ್ತು ಗಂಟೆಗಳ ಬಳಕೆಯನ್ನು ನೀಡುತ್ತದೆ ಎಂದು ವರದಿಯಾಗಿತ್ತು. ಆದರೆ, ಮತ್ತೆ ಸುದ್ದಿಯಾಗಿರಲಿಲ್ಲ.

ಹೆಚ್ಚುವರಿ ಡಿಸ್‌ಪ್ಲೇ ಸೇರಿಸುವ ಲ್ಯಾಪ್‌ಟಾಪ್‌?

ಇವಾನ್ ಬ್ಲಾಸ್ ಅವರು ಹೇಳಿರುವಂತೆ, ಲೆನೊವೊ ಕಂಪೆನಿಯು ಹೊಸದಾಗಿ ಎರಡು ಹೆಚ್ಚುವರಿ ಡಿಸ್‌ಪ್ಲೇ ಸೇರಿಸುವ ಲ್ಯಾಪ್‌ಟಾಪ್‌ ಸಹ ಪರಿಚಯಿಸಲಿದೆ ಎಂದು ಹೇಳಲಾಗಿದೆ. ಇದು ಡ್ಯುಯಲ್-ಹಿಂಜ್ ಫೋಲ್ಡಬಲ್ ಆಗಿರುತ್ತದೆ ಮತ್ತು ಎರಡು ನಿಯಮಿತ ಡಿಸ್ಪ್ಲೇಗಳನ್ನು ಒಂದರ ಮೇಲೊಂದು ಜೋಡಿಸಿ ಒಂದು ಮೆಗಾ ಲಂಬ ಫಲಕವನ್ನು ರೂಪಿಸುತ್ತದೆ ಎಂದು ತಿಳಿದುಬಂದಿದೆ. ಆದರೆ, ವಾಸ್ತವವಾಗಿ ಇದರ ಕಾರ್ಯವಿಧಾನ ಹೇಗಿರಲಿದೆ ಎಂಬ ಕುರಿತಂತೆ ಮತ್ತಷ್ಟು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಒಂದು ವರದಿಯ ಪ್ರಕಾರ, ಇದು ಕೇವಲ ಡಿಟ್ಯಾಚೇಬಲ್ ಬೋರ್ಡ್ ಆಗಿರುವುದಿಲ್ಲ ಎಂದು ಹೇಳಿದೆ. ಹಾಗಾಗಿ, ಈ ಕುರಿತು ಮತ್ತಷ್ಟು ಕುತೂಹಲ ಹೆಚ್ಚಿದೆ.

Best Mobiles in India

English summary
MWC 2025: Lenovo May Showcase Innovative Solar-Powered Laptop And Magic Bay Module. check the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+