ಭಾರತದಲ್ಲಿ 'ಲೆನೊವೊ ಟ್ಯಾಬ್‌ K10' ಲಾಂಚ್; ಬೆಲೆ ಎಷ್ಟು?..ಫೀಚರ್ಸ್‌ ಏನು?

|

ಪ್ರಮುಖ ಮೊಬೈಲ್‌ ತಯಾರಿಕಾ ಕಂಪನಿಗಳಲ್ಲಿ ಒಂದಾದ ಲೆನೊವೊ ಸಂಸ್ಥೆಯು ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿದೆ. ಲೆನೊವೊ ಫೋನ್‌ಗಳ ಜೊತೆಗೆ ಟ್ಯಾಬ್ಲೆಟ್ ಡಿವೈಸ್‌ಗಳನ್ನು ಲಾಂಚ್ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಲೆನೊವೊ ತನ್ನ ಟ್ಯಾಬ್‌ಗಳ ಲಿಸ್ಟ್‌ಗೆ ನೂತನವಾಗಿ 'ಲೆನೊವೊ ಟ್ಯಾಬ್‌ K10' ಡಿವೈಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೊಸದಾಗಿ

ಹೌದು, ಲೆನೊವೊ ಸಂಸ್ಥೆಯು ಭಾರತದಲ್ಲಿ ಹೊಸದಾಗಿ 'ಲೆನೊವೊ ಟ್ಯಾಬ್‌ K10' ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಈ ಟ್ಯಾಬ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ P22T SOC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಹಾಗೆಯೇ 7,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಹಾಗಾದರೇ 'ಲೆನೊವೊ ಟ್ಯಾಬ್‌ K10' ಡಿವೈಸ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಲಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ

ಲೆನೊವೊ ಕಂಪೆನಿ ಹೊಸ ಟ್ಯಾಬ್‌ K10 ಟ್ಯಾಬ್ಲೆಟ್‌ 1,920x1,200 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ 10.3 ಇಂಚಿನ ಫುಲ್‌ ಹೆಚ್‌ಡಿ TDDI ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇಯು 400 ನಿಟ್ಸ್‌ ಬ್ರೈಟ್ನೆಸ್‌ ಅನ್ನು ಪಡೆದಿದೆ. ಹಾಗೆಯೇ 70.3 ಪರ್ಸೆಂಟ್ NTSC ಕವರೇಜ್ ಪಡೆದಿದೆ.

ಪ್ರೊಸೆಸರ್‌ ಬಲ ಯಾವುದು?

ಪ್ರೊಸೆಸರ್‌ ಬಲ ಯಾವುದು?

ಲೆನೊವೊ ಕಂಪೆನಿ ಹೊಸ ಟ್ಯಾಬ್‌ K10 ಟ್ಯಾಬ್ಲೆಟ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ P22T SOC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಇದರೊಂದಿಗೆ 3GB RAM + 32GB, 4GB RAM + 64GB ಹಾಗೂ 4GB RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 2TB ವರೆಗೆ ವಿಸ್ತರಿಸಲು ಅವಕಾಶ ನೀಡಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಲೆನೊವೊ ಕಂಪೆನಿ ಹೊಸ ಟ್ಯಾಬ್‌ K10 ಟ್ಯಾಬ್ಲೆಟ್‌ ಹಿಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಸೆನ್ಸಾರ್ ಅನ್ನು ಪಡೆದಿದೆ. ಇದರೊಂದಿಗೆ 5 ಮೆಗಾ ಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಅನ್ನು ಹೊಂದಿದೆ. ಹಾಗೆಯೇ ಕೆಲವು ಅಗತ್ಯ ಫೋಟೊ ಎಡಿಟಿಂಗ್ ಆಯ್ಕೆಗಳನ್ನು ಇವೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ಲೆನೊವೊ ಸಂಸ್ಥೆಯ ಹೊಸ ಟ್ಯಾಬ್‌ K10 ಡಿವೈಸ್ 7,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಅಲ್ಲದೇ ಈ ಡಿವಯಸ್ 244x153x8.15 ಅಳತೆ ಮತ್ತು 460 ಗ್ರಾಂ ತೂಕ ಹೊಂದಿದೆ. ಅಲ್ಲದೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಬ್ಲೂಟೂತ್ v5, ಯುಎಸ್‌ಬಿ ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿರುವ ಡ್ಯುಯಲ್-ಬ್ಯಾಂಡ್ Wi-Fi ಸಂಪರ್ಕ ಆಯ್ಕೆಗಳಲ್ಲಿ ಒಳಗೊಂಡಿದೆ. ಹಾಗೆಯೇ ಟ್ಯಾಬ್ಲೆಟ್ ಡಾಲ್ಬಿ ಅಟ್ಮೋಸ್‌ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ

ಬೆಲೆ ಎಷ್ಟು ಮತ್ತು ಲಭ್ಯತೆ

ಲೆನೊವೊ ಸಂಸ್ಥೆಯ ಹೊಸ ಟ್ಯಾಬ್‌ K10 ಡಿವೈಸ್ ಮೂರು ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯ ಇದೆ. 3GB RAM + 32GB (Wi-Fi ಮತ್ತು Wi-Fi + 4G LTE ಆವೃತ್ತಿ) ವೇರಿಯಂಟ್‌ 13,999ರೂ. ಆಗಿದೆ. 4GB RAM + 64GB ಸ್ಟೋರೇಜ್‌ Wi-Fi ಆವೃತ್ತಿ ಬೆಲೆಯು 15,999ರೂ. ಆಗಿದೆ. ಹಾಗೂ Wi-Fi + 4G LTE ಆವೃತ್ತಿ ಬೆಲೆಯು 16,999ರೂ. ಆಗಿದೆ. ಇನ್ನು 4GB RAM ಮತ್ತು 128GB ವೇರಿಯಂಟ್‌ ಬೆಲೆ ಇನ್ನೂ ಬಹಿರಂಗ ಪಡಿಸಿಲ್ಲ.

ಪ್ರೊಸೆಸರ್

ಲೆನೊವೊ ಕಂಪೆನಿ ಈ ಹಿಂದೆ ಲೆನೆವೊ ಟ್ಯಾಬ್‌ M10 ಡಿವೈಸ್‌ ಅನ್ನು ಪರಿಚಯಿಸಿತ್ತು. ಅದು 1920 x 1200 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ 10.1-ಇಂಚಿನ ಫುಲ್‌ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 450 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಅಲ್ಲದೆ 3GB RAM + 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಒಳಗೊಂಡಿದ್ದು, ಮೈಕ್ರೋ ಯುಎಸ್‌ಬಿ ಪೋರ್ಟ್ ಮೂಲಕ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

Best Mobiles in India

English summary
Lenovo Tab K10 With 7,500mAh Battery Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X