Home
ಸುದ್ದಿಜಾಲ

Lenovo K11 ಟ್ಯಾಬ್ ಎಂಟ್ರಿಗೆ ಟೆಕ್‌ ವಲಯದಲ್ಲಿ ಕಂಪೆನಿ! ಸ್ಟನ್ನಿಂಗ್‌ ಡಿಸೈನ್‌!

ಲೆನೊವೊ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸ್ಮಾರ್ಟ್‌ ಟ್ಯಾಬ್ಲೆಟ್‌ ವಲಯದಲ್ಲಿಯೂ ಕೂಡ ಸೈ ಎನಿಸಿಕೊಂಡಿದೆ. ಇದರ ಮುಂದುವರೆದ ಭಾಗವೆಂಬಂತೆ ಹೊಸದಾಗಿ ಲೆನೊವೊ K11 ಸ್ಮಾರ್ಟ್‌ ಟ್ಯಾಬ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟ್ಯಾಬ್‌ ಸೈಲೆಂಟ್‌ ಆಗಿ ಟೆಕ್‌ ವಲಯಕ್ಕೆ ಎಂಟ್ರಿ ನೀಡಿದ್ದು, ಸ್ಟೈಲಿಶ್‌ ಲುಕ್‌ನಿಂದ ಸದ್ದು ಮಾಡುತ್ತಿದೆ.

ಹೌದು, Lenovo K11 ಟ್ಯಾಬ್ ಯಾವುದೇ ಸದ್ದಿಲ್ಲದೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಹೆಚ್ಚಿನ ರಿಫ್ರೆಶ್ ರೇಟ್ ಡಿಸ್‌ಪ್ಲೇ ಮತ್ತು ಮೀಡಿಯಾ ಟೆಕ್ ಚಿಪ್ ಅನ್ನು ಒಳಗೊಂಡಿರುವ ಮಿಡ್‌ರೇಂಜ್‌ ಟ್ಯಾಬ್ಲೆಟ್ ಆಗಿದೆ. ಇದು ಸಾಕಷ್ಟು ಸ್ಲಿಮ್ ಬಾಡಿಯನ್ನು ಒಳಗೊಂಡಿದ್ದು, ಬಿಗ್‌ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ ಪೀಚರ್ಸ್‌ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

Lenovo K11 ಟ್ಯಾಬ್ ಎಂಟ್ರಿಗೆ ಟೆಕ್‌ ವಲಯದಲ್ಲಿ ಕಂಪೆನಿ! ಸ್ಟನ್ನಿಂಗ್‌ ಡಿಸೈನ್‌!

Lenovo Tab K11 ಫೀಚರ್ಸ್‌ ಹೇಗಿದೆ?
Lenovo Tab K11 ಟ್ಯಾಬ್ಲೆಟ್ 10.95 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 1920 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದ್ದು, 220 ಪಿಪಿಐ ಸಾಂದ್ರತೆಯನ್ನು ಪಡೆದಿದೆ.

Lenovo Tab K11 ಟ್ಯಾಬ್‌ ಪ್ರೊಸೆಸರ್‌ ಯಾವುದು?
Lenovo Tab K11 ಟ್ಯಾಬ್ಲೆಟ್ 2.2GHz ನಲ್ಲಿ ಕ್ಲಾಕ್‌ ಮಾಡುವ ಹಿಲಿಯೋ G88 ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

Lenovo Tab K11 ಟ್ಯಾಬ್‌ ಕ್ಯಾಮೆರಾ ಸೆಟಪ್‌
Lenovo Tab K11 ಟ್ಯಾಬ್ಲೆಟ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದರ ಜೊತೆಗೆ LED flash ಅನ್ನು ಸಹ ಜೋಡಿಸಲಾಗಿದೆ.

Lenovo K11 ಟ್ಯಾಬ್ ಎಂಟ್ರಿಗೆ ಟೆಕ್‌ ವಲಯದಲ್ಲಿ ಕಂಪೆನಿ! ಸ್ಟನ್ನಿಂಗ್‌ ಡಿಸೈನ್‌!

Lenovo Tab K11 ಟ್ಯಾಬ್‌ ಬ್ಯಾಟರಿ
Lenovo Tab K11 ಟ್ಯಾಬ್‌ 7,040mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB-C ಪೋರ್ಟ್ ಮೂಲಕ 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಲೆನೊವೊ ಫ್ರೀಸ್ಟೈಲ್ ವೈಶಿಷ್ಟ್ಯವು ಬಳಕೆದಾರರಿಗೆ ಟ್ಯಾಬ್ಲೆಟ್ ಅನ್ನು ಎರಡನೇ ಸ್ಕ್ರೀನ್ ಅಥವಾ ರೈಟಿಂಗ್ ಪ್ಯಾಡ್ ಆಗಿ ಬಳಸಲು ಅನುಮತಿಸುತ್ತದೆ. ಇನ್ನು ಟ್ಯಾಬ್ಲೆಟ್ ಮತ್ತು ಪಿಸಿ ನಡುವೆ ಫೈಲ್‌ಗಳನ್ನು ಮನಬಂದಂತೆ ವರ್ಗಾಯಿಸಬಹುದಾಗಿದೆ.

Lenovo Tab K11 ಟ್ಯಾಬ್‌ ಇತರೆ ಫೀಚರ್ಸ್‌
Lenovo Tab K11 ಟ್ಯಾಬ್‌ ಡಾಲ್ಬಿ ಅಟ್ಮಾಸ್-ಟ್ಯೂನ್ಡ್ ಕ್ವಾಡ್ ಸ್ಪೀಕರ್‌ಗಳೊಂದಿಗೆ ಬರಲಿದೆ. ಈ ಡಿವೈಸ್‌ ಡ್ಯುಯಲ್-ಟೋನ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ. ಇದು 255.3 x 166.3 x 7.2mm ಅಳತೆ ಮತ್ತು 465 ಗ್ರಾಂ ತೂಗುತ್ತದೆ. ಪ್ರಸ್ತುತ ಈ ಟ್ಯಾಬ್‌ ಅನ್ನು ಜಪಾನ್‌ನಲ್ಲಿ ಮಾತ್ರ ಬಿಡುಗಡೆ ಆಗಲಿದೆ.

Lenovo Tab K11 ಟ್ಯಾಬ್‌ ಬೆಲೆ ಮತ್ತು ಲಭ್ಯತೆ
Lenovo Tab K11 ಟ್ಯಾಬ್‌ ಸದ್ಯ ಜಪಾನ್‌ನಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದು Wi-Fi-ಮಾತ್ರ ಮತ್ತು LTE ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಆದಾಗ್ಯೂ, ಈ ಡಿವೈಸ್‌ನ ಬೆಲೆ ಅಥವಾ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯನ್ನು ಇಡಲಾಗಿದೆ.

Best Mobiles in India

English summary
Lenovo Tab K11 tablet with Helio G88, 7,040mAh battery launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+