ಭಾರತದಲ್ಲಿ ಲೆನೊವೊ ಟ್ಯಾಬ್ ಪಿ 11 ಪ್ರೊ ಬಿಡುಗಡೆ!..ಬೆಲೆ ಎಷ್ಟು?

|

ಜನಪ್ರಿಯ ಕಂಪೆನಿ ಲೆನೊವೊ ತನ್ನ ಭಿನ್ನ ಮಾದರಿಯ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ಲೆನೊವೊ ಸಂಸ್ಥೆ ತನ್ನ ಹೊಸ ಲೆನೊವೊ ಟ್ಯಾಬ್ P11 ಪ್ರೊ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರಯಾಣದ ಸಂದರ್ಭದಲ್ಲಿ ಯಾವುದೇ ವಿಷಯವನ್ನು ವೀಕ್ಷಿಸಲು ಟ್ಯಾಬ್ಲೆಟ್ ಅಗತ್ಯವಿರುವ ಜನರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ಹೊಸ ಟ್ಯಾಬ್ಲೆಟ್ ಅನ್ನು ತಯಾರಿಸಲಾದಿದೆ. ಇನ್ನು ಈ ಲೆನೊವೊ ಟ್ಯಾಬ್ ಪಿ 11 ಪ್ರೊ ಅನ್ನು 2020 ರಲ್ಲಿ ಜಾಗತಿಕವಾಗಿ ಘೋಷಿಸಲಾಗಿತ್ತು. ಸದ್ಯ ಇದೀಗ ಭಾರತಕ್ಕೆ ಎಂಟ್ರಿ ನೀಡಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ತನ್ನ ಹೊಸ ಟ್ಯಾಬ್ P11 ಪ್ರೊ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಟ್ಯಾಬ್‌ ಕೀಬೋರ್ಡ್ ಮತ್ತು ಸ್ಟೈಲಸ್‌ನಂತಹ ಐಚ್ಛಿಕ ಪರಿಕರಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಟ್ಯಾಬ್ಲೆಟ್ ಆಗಿದ್ದು, ಇದು ಟ್ಯಾಬ್ಲೆಟ್ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಇದು ಪ್ರಯಾಣದಲ್ಲಿ ತಣ್ಣಗಾಗಲು, ಆಟವಾಡಲು ಮತ್ತು ಕೆಲಸ ಮಾಡಲು ಆದ್ಯತೆ ನೀಡುವವರಿಗೆ ಉತ್ತಮ ಟ್ಯಾಬ್‌ ಆಗಿದೆ. ಒಎಲ್ಇಡಿ ಡಿಸ್‌ಪ್ಲೇ, ಕ್ವಾಡ್ ಸ್ಪೀಕರ್‌ಗಳು, ಡ್ಯುಯಲ್ ರಿಯರ್ ಮತ್ತು ಫ್ರಂಟ್ ಕ್ಯಾಮೆರಾ, ಬೃಹತ್ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ ಈ ಟ್ಯಾಬ್ಲೆಟ್‌ನ ಫೀಚರ್ಸ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಟ್ಯಾಬ್ ಪಿ 11 ಪ್ರೊ

ಲೆನೊವೊ ಟ್ಯಾಬ್ ಪಿ 11 ಪ್ರೊ ಅನ್ನು ಅಲ್ಯೂಮಿನಿಯಂ ಮಿಶ್ರಲೋಹ ಯುನಿಬೊಡಿಯಿಂದ ಡ್ಯುಯಲ್-ಟೋನ್ ಫಿನಿಶ್ ಮತ್ತು ನಿಖರ ವಜ್ರ-ಕಟ್ ವಿನ್ಯಾಸದಿಂದ ನಿರ್ಮಿಸಲಾಗಿದೆ. ಇದು 2560x1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 11.5 ಇಂಚಿನ ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಸ್ಕ್ರೀನ್‌ ಟು ಬಾಡಿ ನಡುವಿನ ಅನುಪಾತ 87% ಹೊಂದಿದೆ. ಮತ್ತು ಬದಿಗಳಲ್ಲಿ 6.9 ಎಂಎಂ ತೆಳುವಾದ ಬೆಜೆಲ್‌ಗಳನ್ನು ಹೊಂದಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಇತರ ಒಟಿಟಿ ಅಪ್ಲಿಕೇಶನ್‌ಗಳ ವಿಷಯವನ್ನು ಹೈ ಡೆಫಿನಿಷನ್‌ನಲ್ಲಿ ಸ್ಟ್ರೀಮಿಂಗ್ ಮಾಡಲು ಡಿಸ್‌ಪ್ಲೇ ಹೆಚ್‌ಡಿ ಪ್ರಮಾಣೀಕರಿಸಲ್ಪಟ್ಟಿದೆ. ಕಡಿಮೆ ನೀಲಿ ಬೆಳಕಿನ ಬಳಕೆಗಾಗಿ ಇದನ್ನು ಟಿಯುವಿ ರೈನ್‌ಲ್ಯಾಂಡ್ ಪ್ರಮಾಣೀಕರಿಸಿದೆ. ಎಚ್‌ಡಿಆರ್ ಮತ್ತು ಡಾಲ್ಬಿ ವಿಷನ್ ವಿಷಯವನ್ನು ಸಹ ಬೆಂಬಲಿಸಲಾಗುತ್ತದೆ, ಆದರೆ ಗರಿಷ್ಠ ಹೊಳಪು 500 ನಿಟ್‌ಗಳಲ್ಲಿರುತ್ತದೆ.

ಲೆನೊವೊ ಟ್ಯಾಬ್ P11 ಪ್ರೊ

ಇನ್ನು ಲೆನೊವೊ ಟ್ಯಾಬ್ P11 ಪ್ರೊ ಸ್ನಾಪ್‌ಡ್ರಾಗನ್ 730G ಪ್ರೊಸೆಸರ್ ಅನ್ನು ಹೊಂದಿದೆ. ಇದು 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬಳಸಿ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಇದಲ್ಲದೆ ಈ ಟ್ಯಾಬ್ಲೆಟ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮೊದಲನೇ ಕ್ಯಾಮೆರಾ13 ಎಂಪಿ ಮತ್ತು ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಜೊತೆಗೆ ಡ್ಯುಯಲ್ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ.

ಲೆನೊವೊ

ಲೆನೊವೊ ಟ್ಯಾಬ್‌ P11 ಪ್ರೊ 8,600 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು ಟೈಪ್-ಸಿ ಪೋರ್ಟ್ ಮೂಲಕ ಕ್ವಿಕ್ ಚಾರ್ಜ್ 3.0 ಅನ್ನು ಬೆಂಬಲಿಸಲಿದೆ. ಇನ್ನು ಈ ಟ್ಯಾಬ್‌ ಸಿಂಗಲ್‌ ಚಾರ್ಜ್‌ನಲ್ಲಿ 15 ಗಂಟೆಗಳ ವೀಡಿಯೊ ಪ್ಲೇಬ್ಯಾಕ್‌ನವರೆಗೆ ರೇಟ್ ಮಾಡಲಾಗಿದೆ. ಇದಲ್ಲದೆ ಈ ಟ್ಯಾಬ್‌ ಡಾಲ್ಬಿ ಅಟ್ಮೋಸ್ ಬೆಂಬಲವನ್ನು ಹೊಂದಿದ್ದು, ಕ್ವಾಡ್ ಜೆಬಿಎಲ್ ಸ್ಪೀಕರ್‌ಗಳು ಆಡಿಯೊ ವಿಭಾಗವನ್ನು ಹೊಂದಿವೆ. ಸದ್ಯ ಲೆನೊವೊ ಟ್ಯಾಬ್ P11 ಪ್ರೊ ಬೆಲೆ 44,999 ರೂ.,ಆಗಿದೆ. ಇದು ಫೆಬ್ರವರಿ 14 ರಿಂದ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಲೆನೊವೊ.ಕಾಂನಲ್ಲಿ ಮಾರಾಟವಾಗಲಿದೆ.

Most Read Articles
Best Mobiles in India

English summary
Lenovo Tab P11 Pro with OLED display, quad speakers launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X