128GB RAM, 6TB ಸ್ಟೋರೆಜ್ ಸಾಮರ್ಥ್ಯದ ವಿಶ್ವದ ಮೊದಲ ಲ್ಯಾಪ್‌ಟಾಪ್ ಬಿಡುಗಡೆ!!

|

ವಿಶ್ವದ ಗ್ಯಾಜೆಟ್ ಪ್ರಪಂಚವೇ ನಂಬಲು ಸಾಧ್ಯವಿಲ್ಲದಂತಹ ಲ್ಯಾಪ್‌ಟಾಪ್ ಒಂದು ಲೋಕಾರ್ಪಣೆಯಾಗಿದೆ ಎನ್ನುವ ಅಂತರಾಷ್ಟ್ರೀಯ ಸುದ್ದಿಯೊಂದನ್ನು ನೋಡಿದಾಕ್ಷಣ ಒಂದು ಕ್ಷಣ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದವು. ಆ ನಂತರ ಆ ಸುದ್ದಿಯನ್ನು ತೆರೆದು ಓದಿದ ನಂತರ ಮನಸ್ಸಿನಲ್ಲಿ ಮೂಡಿದ್ದು 'ಅಬ್ಬಾ' ಎಂಬ ಒಂದೇ ಮಾತು.

ಹೌದು, ನಿಮಗಿದು ನಂಬಲೂ ಸಾಧ್ಯವಿಲ್ಲವಿಲ್ಲದ ವಿಷಯವಾದರೂ ಇದು ಸತ್ಯ. 8ಜಿಬಿ RAM ಹೊಂದಿರುವ ಸ್ಮಾರ್ಟ್‌ಫೋನ್ ಅಸ್ತಿತ್ವದಲ್ಲಿದೆ ಎಂದು ಊಹಿಸಿಕೊಳ್ಳಲಾಗದ ನಮಗೆ 128ಜಿಬಿ RAM ಹೊಂದಿರುವ ಲ್ಯಾಪ್‌ಟಾಪ್ ಬಿಡುಗಡೆಯಾಗಿದೆ ಎಂದರೆ ನಂಬಲು ಕಷ್ಟವಾಗಬಹುದು. ಆದರೆ, 128ಜಿಬಿ RAM ಸಾಮರ್ಥ್ಯದ ಲ್ಯಾಪ್‌ಟಾಪ್ ಒಂದು ಲೋಕಾರ್ಪಣೆಯಾಗಿದೆ.

128GB RAM, 6TB ಸ್ಟೋರೆಜ್ ಸಾಮರ್ಥ್ಯದ ವಿಶ್ವದ ಮೊದಲ ಲ್ಯಾಪ್‌ಟಾಪ್ ಬಿಡುಗಡೆ!!

ನೆಕ್ಸ್ಟ್ ಬಿಎಲ್‌ಡಿ ಕಾನ್ಫೆರೆನ್ಸ್‌ನಲ್ಲಿ (NXT BLD) 128ಜಿಬಿ RAM ಲ್ಯಾಪ್‌ಟಾಪ್ 6ಟಿಬಿ ಸ್ಟೋರೆಜ್ ವ್ಯವಸ್ಥೆಯನ್ನು ಹೊಂದಿರುವ ಜಗತ್ತಿನ ಮೊದಲ ಲ್ಯಾಪ್‌ಟಾಪ್ ಅನಾವರಣಗೊಂಡಿದೆ. ಹಾಗಾದರೆ, ನಂಬಲು ಸಾಧ್ಯವಿಲ್ಲದಂತಹ ಈ ನೂತನ 128ಜಿಬಿ RAM ಲ್ಯಾಪ್‌ಟಾಪ್ 6ಟಿಬಿ ಸ್ಟೋರೆಜ್ ಸಾಮರ್ಥ್ಯದ ಲ್ಯಾಪ್‌ಟಾಪ್ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಲೆನೊವೊ ಥಿಂಕ್‌ಪ್ಯಾಡ್ ಪಿ52!

ಲೆನೊವೊ ಥಿಂಕ್‌ಪ್ಯಾಡ್ ಪಿ52!

128ಜಿಬಿ RAM ಲ್ಯಾಪ್‌ಟಾಪ್ 6ಟಿಬಿ ಸ್ಟೋರೆಜ್ ಸಾಮರ್ಥ್ಯದ ವ್ಯವಸ್ಥೆಯನ್ನು ಹೊಂದಿರುವ ಜಗತ್ತಿನ ಮೊದಲ ಲ್ಯಾಪ್‌ಟಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಲೆನೊವೊ ಕಂಪೆನಿಯ ''ಲೆನೊವೊ ಥಿಂಕ್‌ಪ್ಯಾಡ್ ಪಿ52" ಲ್ಯಾಪ್‌ಟಾಪ್ ಲೋಕಾರ್ಪಣೆಯಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸಾಮರ್ಥ್ಯದ ಮೊದಲ ಸಾಮಾನ್ಯ ಲ್ಯಾಪ್‌ಟಾಪ್ ಇದಾಗಿದೆ.

ಹೇಗಿದೆ ಲೆನೊವೊ ಥಿಂಕ್‌ಪ್ಯಾಡ್ ಪಿ52?

ಹೇಗಿದೆ ಲೆನೊವೊ ಥಿಂಕ್‌ಪ್ಯಾಡ್ ಪಿ52?

ನೆಕ್ಸ್ಟ್ ಬಿಎಲ್‌ಡಿ ಕಾನ್ಫೆರೆನ್ಸ್‌ನಲ್ಲಿ ಲೋಕಾರ್ಪಣೆಯಾಗಿರುವ ಲೆನೊವೊ ಥಿಂಕ್‌ಪ್ಯಾಡ್ ಪಿ52 2.5 ಕೆ.ಜಿ. ತೂಕವನ್ನು ಹೊಂದಿದ್ದು, ಕಪ್ಪು ಬಣ್ಣದಲ್ಲಿ ಬಿಡುಗಡೆಯಾಗಿದೆ. 1920x1080 ಪಿಕ್ಸೆಲ್ ರೆಸೊಲ್ಯೂಷನ್ ಸಾಮರ್ಥ್ಯವನ್ನು ಹೊಂದಿರುವ 15.6 ಇಂಚುಗಳ 4ಕೆ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಈ ಲ್ಯಾಪ್‌ಟಾಪ್‌ನಲ್ಲಿ ಅಳವಡಿಸಿರುವ ಬಗ್ಗೆ ಲೆನೊವೊ ಮಾಹಿತಿ ನೀಡಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

128ಜಿಬಿ RAM ಲ್ಯಾಪ್‌ಟಾಪ್ 6ಟಿಬಿ ಸ್ಟೋರೆಜ್ ಸಾಮರ್ಥ್ಯದ ಈ ಲ್ಯಾಪ್‌ಟಾಪ್, 8ನೇ ತಲೆಮಾರಿನ ಇಂಟೆಲ್ Xeon ಹೆಕ್ಸಾ ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇ್ನನು ವಿಂಡೋಸ್ 10 ಪ್ರೊ ಫಾರ್ ವರ್ಕ್‌ಸ್ಟೇಷನ್, ವಿಂಡೋಸ್ 10 ಪ್ರೊ, ವಿಂಡೋಸ್ 10 ಹೋಮ್, Ubuntu ಮತ್ತು Linux ಸೇರಿ ಐದು ಏಪರೇಟಿಂಗ್ ಸಿಸ್ಟಂಗಳ ಆಯ್ಕೆ ಲಭ್ಯವಿದೆ.

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

128ಜಿಬಿ RAM ಲ್ಯಾಪ್‌ಟಾಪ್ 6ಟಿಬಿ ಸ್ಟೋರೆಜ್ ಸಾಮರ್ಥ್ಯದ ಈ ಲ್ಯಾಪ್‌ಟಾಪ್, Nvidia ಕ್ವಾರ್ಡೋ P3200 GPUಯು, ಟೈಪ್ ಎ ಯುಎಸ್‌ಬಿ 3.1, ಎರಡು ಯುಎಸ್ಬಿ- ಸಿ / ಥಂಡರ್ಬೋಲ್ಟ್, ಒಂದು ಹೆಚ್‌ಡಿಎಂಐ 2.0, ಒಂದು ಮಿನಿ ಡಿಸ್‌ಪ್ಲೇ ಪೋರ್ಟ್ 1.4, ಮತ್ತು ಎಸ್‌ಡಿ ಕಾರ್ಡ್ ರೀಡರ್, ವೈ-ಫೈ, ಬ್ಲೂಟೂತ್ ಮತ್ತು 4 ಜಿಎಲ್‌ಟಿಇ ಫೀಚರ್ಸ್‌ಗಳನ್ನು ಹೊಂದಿದೆ.

ಲ್ಯಾಪ್‌ಟಾಪ್ ಬೆಲೆ ಎಷ್ಟು?

ಲ್ಯಾಪ್‌ಟಾಪ್ ಬೆಲೆ ಎಷ್ಟು?

ನೆಕ್ಸ್ಟ್ ಬಿಎಲ್‌ಡಿ ಕಾನ್ಫೆರೆನ್ಸ್‌ನಲ್ಲಿ ಬಿಡುಗಡೆಯಾಗಿರುವ 128ಜಿಬಿ RAM ಲ್ಯಾಪ್‌ಟಾಪ್ 6ಟಿಬಿ ಸ್ಟೋರೆಜ್ ಸಾಮರ್ಥ್ಯದ ವ್ಯವಸ್ಥೆಯನ್ನು ಹೊಂದಿರುವ ಜಗತ್ತಿನ ಮೊದಲ ಲ್ಯಾಪ್‌ಟಾಪ್ ''ಲೆನೊವೊ ಥಿಂಕ್‌ಪ್ಯಾಡ್ ಪಿ52" ಬೆಲೆಯನ್ನು ಈಗಲೇ ಬಹಿರಂಗಪಡಿಸಿಲ್ಲ. ಆದರೆ, ಇದರ ಬೆಲೆ 1,50,000 ರೂಪಾಯಿಗಳಿರಬಹುದು ಎಂದು ಅಂದಾಜು ಮಾಡಲಾಗಿದೆ.

ವಿಜ್ಞಾನ ಕೂಡ ವಿವರಣೆ ನೀಡಲಾಗದ ಸಾಮಾನ್ಯ 10 ಪ್ರಶ್ನೆಗಳಿವು!!

ವಿಜ್ಞಾನ ಕೂಡ ವಿವರಣೆ ನೀಡಲಾಗದ ಸಾಮಾನ್ಯ 10 ಪ್ರಶ್ನೆಗಳಿವು!!

ವಿಜ್ಞಾನ ಹೇಳದಿರುವುದನ್ನು ಆಧ್ಯಾತ್ಮ ಹೇಳುತ್ತದೆ ಎಂಬ ಮಾತನ್ನು ಒಪ್ಪುವುದು ಅಥವಾ ಒಪ್ಪದಿರುವುದು ಅವರವರಿಗೆ ಬಿಟ್ಟ ವಿಷಯ. ಏಕೆಂದರೆ, ವಿಜ್ಞಾನವೇ ಇರಬಹುದು ಅಥವಾ ಆಧ್ಯಾತ್ಮವೇ ಇರಬಹುದು ಅದಕ್ಕೊಂದು ಸ್ಪಷ್ಟ ಉತ್ತರವಿದ್ದರೆ ಅದನ್ನು ಒಪ್ಪಬಹುದು. ಆದರೆ, ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗದಿದ್ದರೆ ಏನು ಮಾಡುವುದು.?
ಹೌದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ನಿರಂತರವಾಗಿ ನಡೆಯುವ ಪ್ರಕ್ರಿಯೆಗಳಾಗಿವೆ. ಮಂಗಳ ಮತ್ತು ಚಂದ್ರನ ಮೇಲೆ ಹೋಗಿ ವಾಸಿಸುವಷ್ಟು ತಂತ್ರಜ್ಞಾನ ಬೆಳವಣಿಗೆ ಆಗುತ್ತಿದೆ. ಭೂಮಿ ಬಿಟ್ಟು ಹೋಗಿ ವಾಸಿಸಲು ಚಿಂತಿಸುವ ವಿಜ್ಞಾನಿಗಳಿಗೆ ಭೂಮಿಯ ಮೇಲಿನ ಸಾಧಾರಣ ವಿಷಯಗಳಿಗೆ ವಿಜ್ಞಾನ ವಿವರಣೆ ನೀಡಲು ಸಾಧ್ಯವಾಗಿಲ್ಲ.
ಭೂಮಿಯ ಮೇಲಿನ ಈ ವಿಷಯಗಳಿಗೆ ಯಾವ ವಿಜ್ಞಾನಿಗಳು ಇದುವರೆಗೂ ಯಾವುದೇ ನಿರ್ದಿಷ್ಟವಾದ ಸಿದ್ಧಾಂತಗಳು ಮತ್ತು ಥಿಯರಿಯನ್ನು ನೀಡಿಲ್ಲ. ಹಾಗಾಗಿ, ಇದಕ್ಕೆ ಆಧ್ಯಾತ್ಮ ಉತ್ತರವೆಂದು ನಮ್ಮ ಅನಿಸಿಕೆಯಲ್ಲ. ಆದರೂ, ಇಂದಿನ ಲೇಖನದಲ್ಲಿ . ವಿಜ್ಞಾನದಿಂದಲೂ ವಿವರಿಸಲಾಗದ ಅಂತಹ ಸಾಧಾರಣ ವಿಷಯಗಳು ಯಾವುವು ಎಂದು ತಿಳಿಯೋಣ.ಬಲಗೈಯನ್ನೇ ಬರೆಯಲು ಬಳಸುವುದು ಏಕೆ?

ಬಲಗೈಯನ್ನೇ ಬರೆಯಲು ಬಳಸುವುದು ಏಕೆ?

ಬಲಗೈಯನ್ನೇ ಬರೆಯಲು ಬಳಸುವುದು ಏಕೆ?

ಪ್ರಪಂಚದಾದ್ಯಂತ ಹೆಚ್ಚು ಜನರು ಎಡಗೈಗಿಂತ ಅಧಿಕವಾಗಿ ಬಲಗೈಯನ್ನೇ ಬರೆಯಲು ಬಳಸುವುದು ಏಕೆ ಎಂದು ಇದುವರೆಗೆ ಯಾವ ವಿಜ್ಞಾನಿಗಳು ಸಹ ವಿವರಣೆ ನೀಡಿಲ್ಲ.

ಅಂತಃಪ್ರಜ್ಞೆ(sixth sense)

ಅಂತಃಪ್ರಜ್ಞೆ(sixth sense)

ಈ 6ನೇ ಸೆನ್ಸ್ (ಅಂತಃಪ್ರಜ್ಞೆ) ಮನೋವೈದ್ಯರಿಗೂ ಸಹ ವಿಸ್ಮಯ ಎನಿಸಿದ್ದು, ಕೆಲವೊಂದು ಘಟನೆಗಳು ಮೊದಲೇ ಜರುಗಿದಂತೆ ಭಾಸವಾಗುತ್ತದೆ. ಆದರೆ, ಈ ಪ್ರಕ್ರಿಯೆ ಹೇಗೆ ನೆಡೆಯುತ್ತದೆ ಎಂದು ಇದುವರೆಗೂ ಯಾವುದೇ ಅಧ್ಯಯನಗಳು ಸಾಬೀತು ಪಡಿಸಿಲ್ಲ.

ಆಮ್ಲಜನಕ ಇಲ್ಲದೇ ಬದುಕುವ ಪ್ರಾಣಿ

ಆಮ್ಲಜನಕ ಇಲ್ಲದೇ ಬದುಕುವ ಪ್ರಾಣಿ

ಭೂಮಿಯ ಮೇಲೆ ಸೂಕ್ಷ್ಮ ಜೀವಿಗಳು ಸೇರಿದಂತೆ ಎಲ್ಲಾ ಜೀವಗಳು ಸಹ ಬದುಕಲು ಆಮ್ಲಜನಕ ಅತಿ ಮುಖ್ಯ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಕೆಲ ತಳಿಯ ಬ್ಯಾಕ್ಟೀರಿಯಾ ಆಕ್ಸಿಜನ್ ಇಲ್ಲದೆಯೂ ಬುದುಕಲು ಸಾಧ್ಯವಿರುವ ಅಂಶವು ವಿಜ್ಞಾನಿಗಳಿಗೆ ಸವಾಲಾಗಿಯೇ ಉಳಿದಿದೆ.

ಪ್ರಾಣಿಗಳ ವಲಸೆ

ಪ್ರಾಣಿಗಳ ವಲಸೆ

ಪ್ರಾಣಿಗಳ ವಲಸೆಗೆ ವಿಜ್ಞಾನ ಇದುವರೆಗೂ ಸಹ ನಿರ್ಧಿಷ್ಟ ವಿವರಣೆ ನೀಡಿಲ್ಲ. ವಿಶೇಷವಾಗಿ ಪಕ್ಷಿಗಳು ತಾವು ಮೊದಲಿದ್ದ ಪ್ರದೇಶವನ್ನು ಒಂದು ಋತುಮಾನ ಮುಗಿದ ನಂತರ ಯಾವುದೇ ಟ್ರ್ಯಾಕರ್‌, ನಾವಿಗೇಷನ್ ಇಲ್ಲದೇ ನಿಖರವಾಗಿ ತಲುಪುವುದು ಹೇಗೆ.?

ಆಯಸ್ಕಾಂತ ಮತ್ತು ಅದರ ದಿಕ್ಕುಗಳು

ಆಯಸ್ಕಾಂತ ಮತ್ತು ಅದರ ದಿಕ್ಕುಗಳು

ವಿಜ್ಞಾನಿಗಳು ಇದುವರೆಗೂ ಸಹ ಆಯಸ್ಕಾಂತ ಉತ್ತರ ಮತ್ತು ದಕ್ಷಿಣ ದ್ರುವವನ್ನು ಮಾತ್ರ ಏಕೆ ಹೊಂದಿದೆ ಎಂದು ಸರಿಯಾದ ವಿವರಣೆ ನೀಡಿಲ್ಲ. ಆಯಸ್ಕಾಂತರಗಳನ್ನು ಸಣ್ಣ ಸಣ್ಣದಾಗಿ ವಿಭಾಗಿಸಿದರೂ ಸಹ ಅವು ಉತ್ತರ ಮತ್ತು ದಕ್ಷಿಣ ದ್ರುವದಲ್ಲಿರುತ್ತವೆ. ಭೂಮಿ ಕೂಡ ಒಂದು ಆಯಸ್ಕಾಂತವೇ ಆಗಿದೆ.

ಆಕಳಿಕೆ ಏಕೆ ಬರುತ್ತದೆ?

ಆಕಳಿಕೆ ಏಕೆ ಬರುತ್ತದೆ?

ನಿದ್ದೆ ಬಂದಾಗ ಆಕಳೀಕೆ ಬರುತ್ತದೆ ಎಂದು ಎಲ್ಲರಿಗೂ ಗೊತ್ತು. ಆಕ್ಸಿಜನ್‌ ಪ್ರಮಾಣ ಕಡಿಮೆಯಾದಾಗ ಬರುತ್ತದೆ ಎಂದು ಹಲವು ಕಾರಣವನ್ನು ನೀಡಲಾಗುತ್ತದೆ. ಆದರೆ, ಆಕಳಿಕೆ ಬರುವಾಗ ದೇಹದಲ್ಲಿ ಯಾವ ರೀತಿ ಪ್ರಕ್ರಿಯೆ ನಡೆಯುತ್ತದೆ ಎಂದು ವಿಜ್ಞಾನ ವಿವರಣೆ ನೀಡಿಲ್ಲ.

ಟೊಮೊಟೊ ಜೀನ್‌!!

ಟೊಮೊಟೊ ಜೀನ್‌!!

ನಾವು ತಿನ್ನುವ ಒಂದು ಟೊಮೊಟೊ ಮನುಷ್ಯನಿಗಿಂತ ಹೆಚ್ಚು ಜೀನ್‌ಗಳನ್ನು ಹೊಂದಿದೆ. ಟೊಮೊಟೊ 31,360 ಜೀನ್ಸ್‌ಗಳನ್ನು ಹೊಂದಿದ್ದು, ಮಾನವರಿಗಿಂತ 7000 ಹೆಚ್ಚು ಜೀನ್ಸ್‌ಗಳನ್ನು ಹೊಂದಿರುವ ವಿಪರ್ಯಾಸದ ಬಗ್ಗೆ ವಿಜ್ಞಾನಿಗಳು ಯಾವುದೇ ಮಾಹಿತಿ ನೀಡಲು ಸಾಧ್ಯವಾಗಿಲ್ಲ.

ಬ್ಲಾಕ್‌ ಹೋಲ್‌ ತಳ (ಕಪ್ಪು ಕುಳಿ ತಳ)

ಬ್ಲಾಕ್‌ ಹೋಲ್‌ ತಳ (ಕಪ್ಪು ಕುಳಿ ತಳ)

ಪ್ರಪಂಚದಾದ್ಯಂತದ ಎಲ್ಲಾ ಭೌತವಿಜ್ಞಾನಿಗಳು ಸಹ ಕಪ್ಪು ಕುಳಿ ಬಗ್ಗೆ ವಿವರಣೆ ನೀಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೆ ಕಪ್ಪು ಕುಳಿವಿಷಯದ ಬಗ್ಗೆ ಯಾರಿಗೂ ವಿವರಿಸಲು ಸಾಧ್ಯವಾಗಿಲ್ಲ. ಕೆಲವೊಮದು ವಿವರಣೆಗಳನ್ನು ನೀಡಿದರೂ ಸಹ ಅವುಗಳನ್ನು ವಿಜ್ಞಾನ ಪ್ರಪಂಚವೇ ಒಪ್ಪಿಲ್ಲ.

ಭೂತವೆಂಬ ಕಲ್ಪನೆ

ಭೂತವೆಂಬ ಕಲ್ಪನೆ

ಭೂತವೆಂಬ ಕಲ್ಪನೆವನ್ನು ನಂಬುವ ಮತ್ತು ನಂಬದವರ ಮಧ್ಯೆ ಯಾವಾಗಲು ಹೆಚ್ಚು ಚರ್ಚೆಗಳು ನಡೆಯುತ್ತಿರುತ್ತವೆ. ಯಾರಾದರೂ ಸಾಕ್ಷಿ ಸಮೇತ ಭೂತದ ಬಗ್ಗೆ ಹೇಳಿದರೆ ವಿಜ್ಞಾನ ಇದನ್ನು ಮಾನಸಿಕ ವಿದ್ಯಾಮಾನ ಎಂದು ಹೇಳುತ್ತಾರೆ. ಇದಕ್ಕೆ ವಿವರಣೆ ನೀಡಲು ವಿಜ್ಞಾನ ಮುಂದಾಗಿಲ್ಲ. ಏಕೆಂದರೆ, ವಿಜ್ಞಾನದ ಪ್ರಕಾರ ಭೂತವೆಂಬುದು ಕಲ್ಪನೆ.

ಏಲಿಯನ್ಸ್ ಮತ್ತು ಅವುಗಳ ಸ್ಥಳ

ಏಲಿಯನ್ಸ್ ಮತ್ತು ಅವುಗಳ ಸ್ಥಳ

ಏಲಿಯನ್ಸ್‌ಗಳ ಇರುವಿಕೆ ಬಗ್ಗೆ ಯಾವಾಗಲು ಮಾಹಿತಿ ಹರಿದಾಡುತ್ತಿದ್ದರೂ ಸಹ ವಿಜ್ಞಾನ ಮಾತ್ರ ಇದರ ಬಗ್ಗೆ ವಿವರಣೆ ನೀಡಿಲ್ಲ. ಪ್ರತಿಯೋರ್ವ ವಿಜ್ಞಾನಿಯೂ ಅನ್ಯಗ್ರಹ ಜೀವಿಗಳು ಇರಬಹುದು ಎಂಬುದನ್ನು ಒಪ್ಪುತ್ತಾರೆ. ಆದರೆ, ಅವುಗಳು ಭೂಮಿಗೆ ಬರುತ್ತವೆ ಎಂಬುದನ್ನು ಒಪ್ಪುವವರು ಕಡಿಮೆ.

Best Mobiles in India

English summary
Lenovo ThinkPad P52 features a 15.6-inch 4K/UHD touchscreen display, up to 8th Gen Intel Xeon hexa-core processor and up to 6TB storage. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X