ಶೀಘ್ರದಲ್ಲೇ ಲೆನೊವೊದಿಂದ ಬರಲಿದೆ ಗೇಮಿಂಗ್‌ ಸ್ಮಾರ್ಟ್‌ಫೋನ್‌!

|

ಇತ್ತೀಚಿನ ದಿನಗಳಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು ಕೂಡ ಲಗ್ಗೆ ಇಡುತ್ತಿವೆ. ಈಗಾಗ್ಲೆ ಅಸುಸ್‌ ರೋಗ್‌ ಸರಣಿಯಲ್ಲಿ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಇದೀಗ ಈ ಸಾಲಿಗೆ ಲೆನೊವೊ ಕಂಪೆನಿ ಸೇರಿಕೊಂಡಿದೆ. ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೂಲಕ ಜನಪ್ರಿಯತೆ ಪಡೆದಿರುವ ಲೆನೊವೊ ಇದೀಗ ತನ್ನ ಮೊದಲ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಹೌದು

ಹೌದು, ಲೆನೊವೋ ಕಂಪೆನಿ ಸ್ಮಾರ್ಟ್‌ಫೋನ್‌ಗಳನ್ನ ಮಾತ್ರವಲ್ಲ ಇತರೆ ಎಲ್ಲಾ ಮಾದರಿಯ ಸ್ಮಾರ್ಟ್‌ಪ್ರಾಡಕ್ಟಗಳ ಮೂಲಕ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಅದರಲ್ಲೂ ಲ್ಯಾಪ್‌ಟಾಪ್‌ ವಲಯದಲ್ಲಿ ಜನಪ್ರಿಯತೆ ಪಡೆದಿರುವ ಲೆನೊವೋ ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಮೂಲಕವೂ ಸದ್ದು ಮಾಡಿತ್ತು. ಇದೀಗ ಇದೇ ತಂತ್ರವನ್ನ ತನ್ನ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಮುಂದುವರೆಸಲು ಬಯಸಿದ್ದು ಲೆನೊವೊ ಲೀಜನ್ ಹೆಸರಿನ ಗೇಮಿಂಗ್‌ ಸ್ಮಾರ್ಟ್‌ಫೋನ್‌ನ ಟೀಸರ್‌ ಲಾಂಚ್‌ ಮಾಡಿದೆ.

ಲೆನೊವೊ ಲೀಜನ್ ಸ್ಮಾರ್ಟ್‌ಫೋನ್

ಲೆನೊವೊ ಲೀಜನ್ ಸ್ಮಾರ್ಟ್‌ಫೋನ್

ಸದ್ಯ ಲೆನೊವೊ ಕಂಪೆನಿ ಟೀಸರ್‌ ಒಂದನ್ನ ಬಿಡುಗಡೆ ಮಾಡಿದ್ದು, ಟೀಸರ್‌ನಲ್ಲಿ ಗೇಮಿಂಗ್‌ ಆನ್‌ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ. ಈ ಮೂಲಕ ಗೇಮಿಂಗ್‌ ಸ್ಮಾರ್ಟ್‌ಫೋನ್‌ ವಲಯಕ್ಕೆ ಎಂಟ್ರಿ ಕೊಡ್ತಾ ಇರೋದು ಪಕ್ಕಾ ಮಾಡಿದೆ. ಅಲ್ಲದೆ ಲೆನೊವೊ ಬಿಡುಗಡೆ ಮಾಡಲಿರುವ ಲೀಜನ್ ಗೇಮಿಂಗ್‌ ಸ್ಮಾರ್ಟ್‌ಫೋನ್ ಫೀಚರ್ಸ್‌ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ವಿನ್ಯಾಸ ಉತ್ತಮವಾಗಿರಲಿದ್ದು, ಗೇಮಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಅನುಭವ ನೀಡಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 144Hz ಡಿಸ್‌ಪ್ಲೇ ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಅತಿ ಹೆಚ್ಚು ರಿಫ್ರೆಶ್ ರೇಟ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಇದಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಲೀಜನ್ ಸ್ಮಾರ್ಟ್‌ಫೋನ್ ವಿಶೇಷತೆ

ಲೀಜನ್ ಸ್ಮಾರ್ಟ್‌ಫೋನ್ ವಿಶೇಷತೆ

ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 865 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ

LPDDR5 RAM ಮತ್ತು UFS 3.0 ಸ್ಟೋರೇಜ್‌ ಅನ್ನು ಹೊಂದಿದೆ ಎಂದು ಹೇಳಲಾಗಿದ್ದು, ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಬಹುದಾದ ಸಂಗ್ರಹ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಲೀಜನ್ ಸ್ಮಾರ್ಟ್‌ಫೋನ್ ಫೀಚರ್ಸ್‌

ಲೀಜನ್ ಸ್ಮಾರ್ಟ್‌ಫೋನ್ ಫೀಚರ್ಸ್‌

ಈ ಸ್ಮಾರ್ಟ್‌ಫೋನ್‌ ಗೇಮಿಂಗ್‌ಗಾಗಿಯೇ ತಯಾರಾಗಿರುವ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಗೇಮಿಂಗ್‌ ಸಂಬಂದ ಪಟ್ಟ ಫೀಚರ್ಸ್‌ಗಳನ್ನ ನೀಡಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗುವ ಫೀಚರ್ಸ್‌ಗಳು ಈಗಾಗಲೇ ಭಾರತದಲ್ಲಿ ಲಭ್ಯವಿರುವ ಆಸುಸ್ ROG ಫೋನ್ 2 ಮತ್ತು ಬ್ಲ್ಯಾಕ್ ಶಾರ್ಕ್ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ.

ಲಭ್ಯತೆ

ಲಭ್ಯತೆ

ಸದ್ಯ ಈ ಸ್ಮಾರ್ಟ್‌ಫೋನ್‌ ಅನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ಲೆನೊವೊ ಕಂಪೆನಿಯ ಮೊದಲ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಇದಾಗಿರಲಿದ್ದು, ಇದನ್ನ ಮೊದಲಿಗೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಭಾರತದ ಮಾರುಕಟ್ಟೆಗೂ ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಈಗಾಗ್ಲೆ ಮಾರುಕಟ್ಟೆಯಲ್ಲಿರುವ ರೇಜರ್, ಬ್ಲ್ಯಾಕ್ ಶಾರ್ಕ್, ನುಬಿಯಾ ರೆಡ್ ಮ್ಯಾಜಿಕ್ ಮತ್ತು ಅಸುಸ್‌ ROG ಗೇಮಿಂಗ್ ಫೋನ್‌ಗಳಿಗೆ ಯಾವ ರೀತಿ ಸ್ಪರ್ಧೆ ಒಡ್ಡಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Most Read Articles
Best Mobiles in India

English summary
A few teasers suggest that the device will feature a Qualcomm Snapdragon 865 SoC with 5G modem.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X