ಲೆನೊವೊ ಕ್ಸಿಯಾಕ್ಸಿನ್‌ ಏರ್‌14 ಲ್ಯಾಪ್‌ಟಾಪ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಚೀನಾ ಮೂಲದ ಲೆನೊವೊ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಡಿವೈಸ್‌, ಎಲೆಕ್ಟ್ರಾನಿಕ್ಸ್‌ ಆಕ್ಸೆಸರೀಸ್‌ ಮೂಲಕ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಹಾಗೆಯೇ ಲ್ಯಾಪ್‌ಟಾಪ್‌ ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯವನ್ನ ಸಾಧಿಸಿದೆ. ಈಗಾಗ್ಲೆ ಮಾರುಕಟ್ಟೆಗೆ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿರುವ ಲೆನೊವೊ ಕಂಪೆನಿ ಇದೀಗ ಹೊಸ ಮಾದರಿಯ ಲ್ಯಾಪ್‌ಟಾಪ್‌ ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಹೌದು

ಹೌದು ಲ್ಯಾಪ್‌ಟಾಪ್‌ ತಯಾರಿಕೆಯಲ್ಲೂ ಜನಪ್ರಿಯತೆ ಪಡೆದುಕೊಂಡಿರುವ ಲೆವೊವೊ ತನ್ನ ಹೊಸ ಲ್ಯಾಪ್‌ಟಾಪ್‌ ಲೆನೊವೊ ಕ್ಸಿಯಾಕ್ಸಿನ್‌ ಏರ್‌14 2020 ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಈ ಹೊಸ ಲ್ಯಾಪ್‌ಟಾಪ್‌ ಇಂದಿನ ಯುವಜನತೆಯ ಆಶಯಗಳಿಗೆ ತಕ್ಕಂತೆ ವಿನ್ಯಾಸಗೊಂಡಿದ್ದು, 10th gen ಇಂಟೆಲ್‌ ಕೋರ್‌ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲ ಈ ಲ್ಯಾಪ್‌ಟಾಪ್‌ ಹೊಸ ಮಾದರಿಯ ಫೀಚರ್ಸ್‌ಗಳನ್ನ ಹೊಂದಿದ್ದು, NVIDIA ಜೀಫೋರ್ಸ್ MX350 ಗ್ರಾಫಿಕ್ಸ್ ಕಾರ್ಡ್ ಅನ್ನು ಹೊಂದಿದೆ.

ಲೆನೊವೊ ಕ್ಸಿಯಾಕ್ಸಿನ್‌ ಏರ್‌14 2020

ಲೆನೊವೊ ಕ್ಸಿಯಾಕ್ಸಿನ್‌ ಏರ್‌14 2020

ಇನ್ನು ಈ ಲ್ಯಾಪ್‌ಟಾಪ್‌ NVIDIAದ ಹೊಸ ಮಾದರಿಯ ಮೊಬೈಲ್ ಗ್ರಾಫಿಕ್ಸ್ ಕಾರ್ಡ್ ಅನ್ನು ಬಳಸಿದ ಲ್ಯಾಪ್‌ಟಾಪ್ ಎಂದು ಗುರುತಿಸಿಕೊಂಡಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ನ ಗ್ರಾಫಿಕ್ಸ್ ಕಾರ್ಡ್‌ ಪ್ರೊಸೆಸರ್ ಜೀಫೋರ್ಸ್ GTX1050 ನ 640 ಶೇಡ್ಸ್‌ ಅನ್ನು ಹೊಂದಿರುವ CGP107 ಚಿಪ್‌ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 10th gen ಇಂಟೆಲ್‌ ಕೋರ್‌ i5, ಇಂಟೆಲ್‌ ಕೋರ್‌ i7 ಎಂಬ ಎರಡು ವಿಭಿನ್ನ ಮಾದರಿಯಲ್ಲಿ ಬರಲಿದೆ ಎಂದು ಹೇಳಲಾಗ್ತಿದೆ.

ಲ್ಯಾಪ್‌ಟಾಪ್‌ನ ವಿನ್ಯಾಸ

ಲ್ಯಾಪ್‌ಟಾಪ್‌ನ ವಿನ್ಯಾಸ

ಲೆನೊವೊ ಕ್ಸಿಯಾಕ್ಸಿನ್ ಏರ್ 14 2020, ಲ್ಯಾಪ್‌ಟಾಪ್‌ಗಳು 14 ಇಂಚಿನ ಫುಲ್‌ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 100% sRGB ಕಲರ್‌ನ ಪದರಗಳನ್ನ ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇಯು ಡಿಸಿ ಡಿಮ್ಮಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಲೆನೊವೊ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಡಿಸ್‌ಪ್ಲೇನಲ್ಲಿ ವೆಬ್‌ಕ್ಯಾಮ್‌ಗಾಗಿ ಆಂಟಿ-ಗ್ಲೇರ್‌ ಡಿಸ್‌ಪ್ಲೇ ಮಾದರಿಯನ್ನ ಬಳಸಿರುವುದಾಗಿ ಹೇಳಲಾಗ್ತಿದೆ.

ಲ್ಯಾಪ್‌ಟಾಪ್‌ನ ವಿಶೇಷತೆ

ಲ್ಯಾಪ್‌ಟಾಪ್‌ನ ವಿಶೇಷತೆ

ಇನ್ನು ಈ ಲ್ಯಾಪ್‌ಟಾಪ್‌ ಎರಡು ವಿಭಿನ್ನ ಮಾದರಿಯಲ್ಲಿ ಬರಲಿದ್ದು, ಎರಡು ಮಾದರಿಗಳು ಕೂಡ ವಿಭಿನ್ನ ಪ್ರೊಸೆಸರ್‌ಗಳನ್ನ ಹೊಂದಿದೆ. ಇಂಟೆಲ್ ಕೋರ್ I5 ಹೊಂದಿರುವ ಲ್ಯಾಫ್‌ಟಾಪ್‌ -1035G1 ಪ್ರೊಸೆಸರ್ ಹೊಂದಿದ್ದರೆ, ಕೋರ್ i7 ಲ್ಯಾಪ್‌ಟಾಪ್‌ 1065G7 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು 16GB ಮೆಮೊರಿ ಮತ್ತು 512GB SSD ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ NVIDIA ಜೀಫೋರ್ಸ್ MX350 GPU, ಒಳಗೊಂಡಿದ್ದು, ಇದು MX250 ಗಿಂತ 20% ವೇಗವಾಗಿರುತ್ತದೆ. ಇದರಿಂದಾಗಿ ಲೈಟ್‌ವೆಹಿಟ್‌ ಫೋಟೋ ಎಡಿಟಿಂಗ್ ಮಾಡುವುದಕ್ಕೆ ಉಪಯುಕ್ತವಾಗಿದೆ.

ಬ್ಯಾಟರಿ

ಬ್ಯಾಟರಿ

ಈ ಲ್ಯಾಪ್‌ಟಾಪ್‌ 56.5Whr ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, ಇದು 12 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ನಲ್ಲಿ ಎನರ್ಜಿ ಸೇವ್‌, ಹಾಗೂ ಲ್ಯಾಪ್‌ಟಾಪ್‌ ಇಂಟೆಲಿಜೆಂಟ್‌ ಮತ್ತು ಕಾರ್ಯದಕ್ಷತೆಯ ಮೋಡ್‌ ಹೆಚ್ಚಿಸಲು ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 1.39 ಕೆಜಿ ತೂಕ ಮತ್ತು 16.9MM ಥಿಕ್‌ನೆಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ಗಾಗಿ ವೈಟ್‌ ಬ್ಯಾಕ್ಲಿಟ್ ಕೀಬೋರ್ಡ್ ಡೆಕ್ ಪವರ್ ಅನ್ನು ಜೋಡಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಯುಎಸ್‌ಬಿ 3.1gen 1, ಎಸ್‌ಡಿ ಕಾರ್ಡ್ ರೀಡರ್, ಯುಎಸ್‌ಬಿ ಟೈಪ್-ಸಿ ಪೋರ್ಟ್, HDMI ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಕ್ಸಿಯಾಕ್ಸಿನ್ ಏರ್ 14 2020 ಚೀನಾದಲ್ಲಿ ಎರಡು ವಿಭಿನ್ನ ಮಾದರಿಯಲ್ಲಿ ಬಿಡುಗಡೆಯಾಗಿದ್ದು, 10th genಇಂಟೆಲ್‌ ಕೋರ್‌ i5 ಬೆಲೆ RMB 5,099 (ಸುಮಾರು 52,100 ರೂ.) ಇಂಟೆಲ್‌ ಕೋರ್‌ i7 ಲ್ಯಾಪ್‌ಟಾಪ್‌ RMB 5,899 (ಸುಮಾರು 60,300 ರೂ.) ಬೆಲೆಯನ್ನ ಹೊಂದಿದೆ. ಈ ಎರಡು ಮಾದರಿಯ ಲ್ಯಾಪ್‌ಟಾಪ್‌ಗಳು ಚೀನಾದಲ್ಲಿ ಫೆಬ್ರವರಿ 27 ರಿಂದ ಮಾರಾಟವಾಗಲಿದೆ.

Best Mobiles in India

English summary
Lenovo Xiaoxin Air 14 2020 is an entry-level laptop with latest processor and mobile GPU that will appeal to students and creators.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X