ಲೆನೊವೊ ಯೋಗ ಡ್ಯುಯೆಟ್ 7i ಮತ್ತು ಐಡಿಯಾಪ್ಯಾಡ್ ಡ್ಯುಯೆಟ್ 3i ಬಿಡುಗಡೆ!

|

ಚೀನಾದ ಜನಪ್ರಿಯ ಎಲೆಕ್ಟ್ರಾನಿಕ್ಸ್‌ ತಯಾರಕ ಕಂಪೆನಿ ಆಗಿರುವ ಲೆನೊವೊ ಟೆಕ್‌ ವಲಯದಲ್ಲಿ ಉತ್ತಮ ಬ್ರ್ಯಾಂಡ್‌ ಆಗಿ ಗುರತಿಸಿಕೊಂಡಿದೆ. ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್‌ ಕಂಪೆನಿ ಆಗಿ ಪ್ರಸಿದ್ಧಿ ಪಡೆದಿರುವ ಲೆನೊವೋ ಇದೀಗ ತನ್ನ ಯೋಗ ಮತ್ತು ಐಡಿಯಾಪ್ಯಾಡ್ ಸರಣಿಯಲ್ಲಿ ಮತ್ತೆ ಎರಡು ಹೊಸ ಡಿವೈಸ್‌ಗಳನ್ನ ಪರಿಚಯಿಸಿದೆ. ಇನ್ನು ಯೋಗ ಡ್ಯುಯೆಟ್ ಮತ್ತು ಐಡಿಯಾಪ್ಯಾಡ್‌ ಲೆನೊವೊ ಕಂಪೆನಿ ಜನಪ್ರಿಯ ಸರಣಿಯಾಗಿದೆ. ಸದ್ಯ ಇದೀಗ ಹೊಸ ಮಾದರಿಯ ವಿನ್ಯಾಸದಲ್ಲಿ ಲೆನೊವೊ ತನ್ನ ಹೊಸ ಡಿವೈಸ್‌ಗಳನ್ನ ಪರಿಚಯಿಸಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ತನ್ನ ಹೊಸ ಲೆನೊವೊ ಯೋಗ ಡ್ಯುಯೆಟ್‌ 7i ಮತ್ತು ಐಡಿಯಾಪ್ಯಾಡ್ ಡ್ಯುಯೆಟ್ 3i ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಎರಡು ಡಿವೈಸ್‌ಗಳು ಡಿಟ್ಯಾಚೇಬಲ್ ಬ್ಲೂಟೂತ್ ಕೀಬೋರ್ಡ್‌ಗಳನ್ನು ಹೊಂದಿರುವ ಲೆನೊವೊ ಕಂಪೆನಿಯ ಮೊದಲ ಕನ್ವರ್ಟಿಬಲ್ ಡಿವೈಸ್‌ಗಳಾಗಿವೆ. ಸದ್ಯ ಇದು ಮೈಕ್ರೋಸಾಫ್ಟ್‌ ಹೈಬ್ರಿಡ್ ಲ್ಯಾಪ್‌ಟಾಪ್‌ಗಳ ಮೇಲ್ಮೈ ರೇಖೆಯನ್ನು ಹೋಲುತ್ತದೆ. ಇನ್ನು ಯೋಗ ಡ್ಯುಯೆಟ್ 7i ಪ್ರೀಮಿಯಂ 2-ಇನ್ -1 ವಿಂಡೋಸ್ 10 ಟ್ಯಾಬ್ಲೆಟ್ ಆಗಿದ್ದು, lte ಕನೆಕ್ಟಿವಿಟಿಯನ್ನ ಹೊಂದಿದೆ. ಇದಲ್ಲದೆ ಈ ಹೊಸ ಮಾದರಿಯ ಡಿವೈಸ್‌ಗಳು ಯಾವೆಲ್ಲಾ ವಿಶೇಷತೆಯನ್ನ ಹೊಂದಿವೆ. ಹಾಗೂ ಇದರ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ ಯೋಗ ಡ್ಯುಯೆಟ್ 7i

ಲೆನೊವೊ ಯೋಗ ಡ್ಯುಯೆಟ್ 7i

ಲೆನೊವೊ ಯೋಗ ಡ್ಯುಯೆಟ್ 7i ಲ್ಯಾಪ್‌ಟಾಪ್‌ 2160x1350 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 13 ಇಂಚಿನ 2K ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನ ಹೊಂದಿದೆ. ಇದಲ್ಲದೆ ಲೆನೊವೊ ಯೋಗ ಡ್ಯುಯೆಟ್‌ 7i ಡಾಲ್ಬಿ ವಿಷನ್ ಬೆಂಬಲವನ್ನು ಒಳಗೊಂಡಿದೆ. ಜೊತೆಗೆ ಈ ಡಿವೈಸ್‌ ಕೋರ್ i7-10510U ಪ್ರೊಸೆಸರ್ ಅನ್ನು ಹೊಂದಿದ್ದು, ಇಂಟೆಲ್‌ನ 10 ನೇ ತಲೆಮಾರಿನ ಸಿಪಿಯುಗಳಿಂದ ಕಾರ್ಯನಿರ್ವಹಿಸಲಿದೆ. ಹಾಗೇಯೇ ಇದರಲ್ಲಿ 16GB ಮತ್ತು 1 ಟಿಬಿ ಎಸ್‌ಎಸ್‌ಡಿಯನ್ನ ಹೊಂದಿದೆ.

ಕ್ಯಾಮೆರಾ ವಿನ್ಯಾಸ ಮತ್ತು ಬ್ಯಾಟರಿ

ಕ್ಯಾಮೆರಾ ವಿನ್ಯಾಸ ಮತ್ತು ಬ್ಯಾಟರಿ

ಇನ್ನು ಈ ಡಿವೈಸ್ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಇದು 5 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಅತಿಗೆಂಪು ಕ್ಯಾಮೆರಾ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನ ಒಳಗೊಂಡಿದೆ. ಇದಲ್ಲದೆ 1080p ಸಾಮರ್ಥ್ಯದ ಕಂಟೆಂಟ್‌ ಪ್ಲೇಯಿಂಗ್‌ ಬ್ಯಾಕ್‌ನಲ್ಲಿ 12.3-ಗಂಟೆಗಳವರೆಗಿನ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಈ ಯೋಗ ಡ್ಯುಯೆಟ್ 7i ಲ್ಯಾಪ್‌ಟಾಪ್‌ ಮೂರು ಯುಎಸ್‌ಬಿ ಟೈಪ್-ಸಿ ಜೆನ್ 1 ಪೋರ್ಟ್‌ಗಳನ್ನು ಹೊಂದಿದೆ, ಅವುಗಳಲ್ಲಿ ಎರಡು ವಿಡಿಯೋ- ಡೂಯಿಂಗ್‌ ಔಟ್‌ ಮಾಡುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಎಸ್‌ಡಿ ಕಾರ್ಡ್ ರೀಡರ್ ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಒಳಗೊಂಡಿದೆ.

ಐಡಿಯಾಪ್ಯಾಡ್ ಡ್ಯುಯೆಟ್ 3i

ಐಡಿಯಾಪ್ಯಾಡ್ ಡ್ಯುಯೆಟ್ 3i

ಇನ್ನು ಐಡಿಯಾಪ್ಯಾಡ್ ಡ್ಯುಯೆಟ್ 3i 1920x1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.3-ಇಂಚಿನ ಫುಲ್‌ ಎಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಇದು ಇಂಟೆಲ್ ಪೆಂಟಿಯಮ್ ಎನ್ 5030 ಸಿಪಿಯು ಚಾಲಿತವಾಗಿದ್ದು, ಇದು 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಒಳಗೊಂಡಿದೆ. ಇನ್ನು ಈ ಟ್ಯಾಬ್ಲೆಟ್ ವಿಡಿಯೋ ಪ್ಲೇ ಬ್ಯಾಕ್‌ ಸೇರಿದಂತೆ ಒಂಬತ್ತು ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಅಲ್ಲದೆ ಹೆಡ್‌ಫೋನ್ ಜ್ಯಾಕ್ ಮತ್ತು ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಇದು ವೆಬ್‌ಕ್ಯಾಮ್‌ ಗೌಪ್ಯತೆ ಶಟರ್ ಮತ್ತು ಇಂಟೆಲ್‌ನ ಪೆಂಟಿಯಮ್ ಸಿಪಿಯುಗಳನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲೆನೊವೊ ಯೋಗ ಡ್ಯುಯೆಟ್ 7i ಯುರೋ 1,199 (ಸರಿಸುಮಾರು ರೂ .99,300)ಬೆಲೆಯನ್ನ ಹೊಂದಿದ್ದು, ಇದು ಫೋಲಿಯೊ ಕೀಬೋರ್ಡ್ ಮತ್ತು ಇ-ಕಲರ್ ಪೆನ್ ಅನ್ನು ಒಳಗೊಂಡಿದೆ. ಅಲ್ಲದೆ ಇದು ಇದೇ ಜೂನ್‌ ತಿಂಗಳಿನಿಂದ ಖರೀದಿಸಲು ಲಭ್ಯವಿರುತ್ತದೆ. ಇನ್ನು ಐಡಿಯಾಪ್ಯಾಡ್ ಡ್ಯುಯೆಟ್ 3i ಯುರೋ 429(ಸರಿಸುಮಾರು ರೂ. 35,500) ಬೆಲೆಯಿಂದ ಪ್ರಾರಂಭವಾಗಲಿದೆ. ಅಲ್ಲದೆ ಇದು ಜುಲೈ ತಿಂಗಳಿನಿಂದ ಮಾರಾಟಕ್ಕೆ ಲಭ್ಯವಿರುತ್ತದೆ.

Best Mobiles in India

English summary
Lenovo has introduced two new devices to its Yoga and IdeaPad line of laptops. The Yoga Duet 7i and IdeaPad Duet 3i are the first convertible devices with detachable Bluetooth keyboards to launch in their respective categories.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X